ಸರ್ಕಾರಿ ಹಾಸ್ಟೆಲ್‌ನಲ್ಲಿ ಮ ಜಾ ಮಾಡುತ್ತಿದ್ದ ವಾರ್ಡನ್, ರಾತ್ರೋರಾತ್ರಿ ಹಾಸ್ಟೆಲ್ ಪರಿಶೀಲಿಸಿ ಕ್ರಮ ಕೈಗೊಂಡ MLA ದರ್ಶನ್
Jan 11, 2025, 17:53 IST
|
ಪಾಂಡವಪುರದ ಕೆರೆತಣ್ಣೂರು ವಸತಿ ನಿಲಯದಲ್ಲಿ ಅವ್ಯವಸ್ಥೆ ದೂರು ಹಿನ್ನಲೆ, ರಾತ್ರಿ ವೇಳೆ ಕೆರೆವತೊಣ್ಣೂರು ವಸತಿ ನಿಲಯಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ವಾರ್ಡನ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.ವಸತಿ ನಿಲಯದಲ್ಲಿ ಇರದ ವಾರ್ಡನ್‌ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಫೋನ್‌ನಲ್ಲಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ತಾನು ಕೆಲಸಕ್ಕೆ ಬರದೆ ತನ್ನ ಪರವಾಗಿ ತನ್ನ ತಾಯಿಯಿಂದ ಕೆಲಸ ಮಾಡಿಸ್ತಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುರಾರ್ಜಿ ದೇಸಾಯಿ ಹಾಸ್ಟೆಲ್‌ಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ ನೀಡಿದ್ದರು. ಅಲ್ಲಿನ ಅವ್ಯವಸ್ಥೆ ಕಂಡು ವಾರ್ಡನ್ ವಿರುದ್ಧ ಕೆಂಡವಾದರು. ಮಂಡ್ಯ ಜಿಲ್ಲೆಯ ಕೆರೆ ತಣ್ಣೂರು ಮುರಾರ್ಜಿ ದೇಸಾಯಿ ಹಾಸ್ಟೆಲ್‌ಗೆ ದಿಢೀರ್ ಭೇಟಿ ಕೊಟ್ಟಿದ್ದ ಶಾಸಕ ಪುಟ್ಟಣ್ಣಯ್ಯ, ಹಾಸ್ಟೆಲ್‌ನಲ್ಲಿ ವಾರ್ಡನ್ ಇರದೇ ಇದ್ದಿದ್ದಕ್ಕೆ ಫೋನ್ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ.
ಹಾಸ್ಟೆಲ್‌ನಲ್ಲಿರುವ ಮಕ್ಕಳು ಅಲ್ಲಿನ ಊಟದ ಬಗ್ಗೆ, ವಾರ್ಡನ್ ಬಗ್ಗೆ ಸಾಲು ಸಾಲು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಈ ರೀತಿ ಖಡಕ್ ವಾರ್ನಿಂಗ್ ನೀಡಿದರು.ಮಕ್ಕಳ ದೂರಿನಿಂದ ಮತ್ತಷ್ಟು ಆಕ್ರೋಶಗೊಂಡ ಶಾಸಕರಿಂದ ನಿಲಯ ಪಾಲಕನಿಗೆ ಮತ್ತೊಮ್ಮೆ ನೀನಾಗಲಿ ನಿನ್ನ ಮನೆಯವರಾಗಲಿ ಇತ್ತ ಬಂದರೆ ಕಾಲು ಕತ್ತರಿಸುವುದಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆವಾಜ್ ಹಾಕಿದ್ದಾರೆ.
ಮತ್ತೊಮ್ಮೆ ಈ ತರ ತಪ್ಪು ಆಗದು, ಶಾಸಕ ದರ್ಶನ್ ಪುಟ್ಟಣ್ಣಯ್ಯನವರ ಕೋಪದ ಮಾತು ಕಂಡು ಕೆಲಕಾಲ ಮಕ್ಕಳು ಮೂಕ ವಿಸ್ಮಿತರಾಗಿ ನೋಡಿದರು.ಹಾಸ್ಟೆಲ್ ವಾರ್ಡನ್ ಯಾವಾಗಲೋ ಒಮ್ಮೆ ಬರುತ್ತಾನಂತೆ ಮತ್ತು ಮಕ್ಕಳನ್ನು ನೋಡಿಕೊಳ್ಳಲು ತನ್ನ ತಾಯಿಯನ್ನು ಅಲ್ಲಿ ಬಿಟ್ಟಿದ್ದಾನಂತೆ. ಈಯಮ್ಮ ಮಕ್ಕಳಿಗೆ ಮನಬಂದಂತೆ ಬಯ್ಯುತ್ತಾಳೆ ಮತ್ತು ಗದರುತ್ತಾಳೆ. ಮಕ್ಕಳ ದೂರುಗಳನ್ನು ಕೇಳಿದ ಬಳಿಕ ವ್ಯಗ್ರರಾದ ದರ್ಶನ್, ವಾರ್ಡನ್‌ಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.