'ರಸ್ತೆಯಲ್ಲಿ ಪಾನಿಪುರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ' ಬೆಚ್ಚಿಬಿದ್ದ ಜನ ಸಾಮಾನ್ಯರು

 | 
ಪರಕ

ಮಾರುಕಟ್ಟೆಯಲ್ಲಿ ಸುಲಭ ಹಾಗೂ ಕಡಿಮೆ ದರದಲ್ಲಿ ಸಿಗುವ ಬಣ್ಣಬಣ್ಣದ, ತರಹೇವಾರಿ ಬಿಸ್ಕೀಟ್, ಚಿಪ್ಸ್, ಚಾಕೊಲೇಟ್, ಬೇಕರಿ ತಿನಿಸುಗಳು, ಪಾನಿಪುರಿಯಂಥ ರುಚಿಕರ ಚಾಟ್ಸ್‌ಗಳು, ಕೋಕ್, ಪೆಪ್ಸಿಯಂಥ ಜ್ಯೂಸ್‌ಗಳು, ಪಿಜ್ಜಾ, ಬರ್ಗರ್, ಗೋಬಿ ಮಂಚೂರಿ, ನೂಡಲ್ಸ್, ಫ್ರೈಡ್ ರೈಸ್ ಮುಂತಾದ ಆಹಾರಗಳನ್ನು ಜಂಕ್‌ ಫುಡ್‌ಗಳೆಂದು ಕರೆಯಬಹುದು. ಇವುಗಳು ಮಕ್ಕಳನ್ನು ದಿಢೀರನೆ ಸುಲಭವಾಗಿ ಆಕಷಿ೯ಸುತ್ತವೆ.

ಇವುಗಳಲ್ಲಿ ಕೆಳಕಂಡ ಅನಗತ್ಯವಾದ ಮತ್ತು ಅನಾರೋಗ್ಯಕರವಾದ ಪದಾರ್ಥಗಳು ಇರುತ್ತವೆ. ಹೆಚ್ಚು ಸಕ್ಕರೆ ಅಂಶ, ಕೃತಕ ಸಿಹಿಕಾರಕಗಳ ಬಳಕೆ  ಮತ್ತು ರಾಸಯನಿಕ ಸಂರಕ್ಷಕಗಳು ಇವ್ಯಾವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಇನ್ನು ಹೊರಗೆ ಹೋದಾಗ ಬೀದಿ ಬದಿಯ ಆಹಾರಕ್ಕೆ ಮನಸ್ಸು ಹಾತೊರೆಯುವುದು ಸಾಮಾನ್ಯ. ಅದರಲ್ಲೂ ಮಹಿಳೆಯರಿಗೆ ಮಸಾಲ ಪುರಿ, ಪಾನಿ ಪುರಿ ಅಚ್ಚು ಮೆಚ್ಚು. ಇಂತಹ ಆಹಾರಗಳು ಕಲುಷಿತವಾದ ವಾತಾವರಣ, ಬ್ಯಾಕ್ಟೀರಿಯಾಗಳಿಂದ ತುಂಬಿ ಅನೇಕ ಸೋಂಕುಗಳಿಗೆ ಕಾರಣವಾಗುತ್ತದೆ.

ಈ ರೀತಿ ರೋಗಗಳು ಉಂಟಾಗಲು ಮುಖ್ಯವಾದ ಕಾರಣವೆಂದರೆ, ಬೀದಿ ಬದಿಯಲ್ಲಿ ಆಹಾರ ಮಾರಾಟಗಾರರು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡದೇ ಇರುವುದು. ಬೀದಿ ಬದಿಯ ಆಹಾರ ವ್ಯಾಪಾರಿಗಳು ಪೌಷ್ಟಿಕಾಂಶವಿರುವ ಆಹಾರವನ್ನು ಒದಗಿಸುವುದಿಲ್ಲ. ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಬಳಕೆ. ಹೊರಗಿನ ವಾತಾವರಣದಿಂದ ಉಂಟಾಗುವ ಬ್ಯಾಕ್ಟೀರಿಯಾಗಳು ಸಹಜವಾಗಿಯೇ ಮುಚ್ಚದೇ ಇರುವ ಆಹಾರ ಪದಾರ್ಥಗಳ ಮೇಲೆ ಕೂರುತ್ತವೆ. 

ಹೆಚ್ಚುತ್ತಿರುವ ನಗರದ ಜನಸಂಖ್ಯೆಯಿಂದಾಗಿ ಸಾರ್ವಜನಿಕ ಶೌಚಾಲಯಗಳು, ಸಾರ್ವಜನಿಕ ತ್ಯಾಜ್ಯ ವಿಲೇವಾರಿ ಸ್ಥಳಗಳ ಬಳಿ ಕೆಲವು ಬೀದಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಸಿಹಿ ಖಾದ್ಯ ಅಥವಾ ಎಣ್ಣೆಯಲ್ಲಿ ಕರಿಯುವ ಯಾವುದೇ ಆಹಾರ ಪದಾರ್ಥಗಳನ್ನು ಈ ಮೊದಲೇ ಕರಿದ ಎಣ್ಣೆಯಲ್ಲಿಯೇ ಪದೇ ಪದೇ ಕರಿಯುತ್ತಾರೆ. ಇಂತಹ ಎಣ್ಣೆಯು ದೇಹದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂಬುದು ನೆನಪಿರಲಿ. ಪಾತ್ರೆಗಳು ಮತ್ತು ಆಹಾರಗಳನ್ನು ಮುಚ್ಚಲು ಬಳಸುವ ಬಟ್ಟೆಯ ತುಂಡನ್ನು ಮಾರಾಟಗಾರರು ಕೈಗಳನ್ನು ಸ್ವಚ್ಚಗೊಳಿಸಲು ಬಳಸುತ್ತಾರೆ. ಈ ಎಲ್ಲ ಕಾರಣದಿಂದ ಹೊರಗಡೆ ಆಹಾರದ ಬಗ್ಗೆ ಎಚ್ಚರಿಕೆ ಇರಲಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.