ಆದಷ್ಟು ಬೇಗ ಮದುವೆ ಆಗೋಕೆ ಮುಂದಾಗಿದ್ದೇವೆ, ತ್ರಿವಿಕ್ರಮ್ ಕಡೆಯಿಂದ ಸಿಹಿಸುದ್ದಿ

 | 
Jd
ಕನ್ನಡ ಬಿಗ್‌ಬಾಸ್‌ ರಿಯಾಲಿಟಿ ಶೋನ ಸೀಸನ್‌-11 ನಿನ್ನೆಯಷ್ಟೇ ಮುಕ್ತಾಯಗೊಂಡಿದೆ. ಹಳ್ಳಿಹೈದ ಹನುಮಂತ ಬಿಗ್‌ಬಾಸ್‌ ಟ್ರೋಫಿ ಗೆದ್ದು ಬೀಗಿದ್ದಾನೆ. ಇನ್ನು ಕೊನೆವರೆಗೂ ಟಫ್‌ ಕಾಂಪಿಟೇಷನ್‌ ಕೊಟ್ಟಿದ್ದ ತ್ರಿವಿಕ್ರಮ್‌ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ್ದಾರೆ. ಅನೇಕರು ಈ ಬಾರಿ ಕಪ್‌ ಗೆಲ್ಲೋದು ತ್ರಿವಿಕ್ರಮ್‌ ಎಂದೇ ಭಾವಿಸಿದ್ದರು. ಆದರೆ, ಹನುಮಂತನ ಮೇಲೆ ಜನಾಶೀರ್ವಾದ ಇದ್ದಿದ್ದರಿಂದ ಕಪ್‌ ಅವರ ಪಾಲಾಯಿತು. ಇನ್ನು ಬಿಗ್‌ಬಾಸ್‌ ಮನೆಯಲ್ಲಿ ತ್ರಿವಿಕ್ರಮ್‌ ಹಾಗೂ ಭವ್ಯಾ ಗೌಡ ಅವರ ಕಹಾನಿ ಸಖತ್‌ ಸದ್ದು ಮಾಡಿತ್ತು. ಈ ಬಗ್ಗೆ ತ್ರಿವಿಕ್ರಮ್‌ ಮನೆಯಿಂದ ಹೊರಬಂದ್ಮೇಲೆ ಮಾತನಾಡಿದ್ದಾರೆ.
ಬಿಗ್‌ಬಾಸ್‌ ಮನೆಯಲ್ಲಿ ಈ ಸೀಸನ್‌ನ ಜೋಡಿ ಎಂದೇ ತ್ರಿವಿಕ್ರಮ್‌ ಹಾಗೂ ಭವ್ಯಾ ಗಮನ ಸೆಳೆದಿದ್ದರು. ಇಬ್ಬರ ನಡುವಿನ ಕ್ಯೂಟ್‌ ಮಾತುಗಳು, ಒಡನಾಟ ಕಂಡು ಇನ್ನೇನು ಇವರು ಮನೆಯಿಂದ ಹೊರ ಬಂದ ನಂತರ ಮದುವೆಯಾಗೋದು ಗ್ಯಾರಂಟಿ ಎಂದೇ ಮಾತನಾಡಿಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ರನ್ನರ್‌ ಅಪ್‌ ತ್ರಿವಿಕ್ರಮ್‌ ಅವರು ಮದುವೆ ಬಗ್ಗೆ ಉಲ್ಟಾ ಹೊಡೆದಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ತ್ರಿವಿಕ್ರಮ್‌ ಅವರು ತಮ್ಮ ಮದುವೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ನಿಮ್ಮ ಮದುವೆ ಯಾವಾಗ? ಎಂದು ಕೇಳಿದ್ದಕ್ಕೆ ತ್ರಿವಿಕ್ರಮ್‌ ಅವರು ಭವ್ಯಾ ಬಗ್ಗೆ ಮಾತನಾಡುತ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದರು. ಆದರೆ, ತ್ರಿವಿಕ್ರಮ್‌ ಅವರು ನೋಡೋಣ, ನಮಗೆಲ್ಲ ಯಾರ್‌ ಸಿಗ್ತಾರೆ ಅನ್ನೋದನ್ನ ನೋಡಬೇಕು. ನಮಗೆ ಸರಿ ಹೊಂದುವವರನ್ನು ನೋಡಿ ಮದುವೆ ಆಗಬೇಕು ಎಂದು ಹೇಳುವ ಮೂಲಕ ಶಾಕ್‌ ನೀಡಿದ್ದಾರೆ.
ಇನ್ನು ಬಿಗ್‌ಬಾಸ್‌ನಲ್ಲೇ ತ್ರಿವಿಕ್ರಮ್‌ಗೆ ಹುಡುಗಿ ಸಿಕ್ಕಿದ್ದಾರೆ ಎನ್ನುವ ಪ್ರಶ್ನೆಗೂ ನೇರವಾಗಿ ಉತ್ತರ ನೀಡಿದ್ದಾರೆ. ಭವ್ಯಾ ಇನ್ನೂ ಚಿಕ್ಕವಳು ಎನ್ನುವ ಮೂಲಕ ಅವರನ್ನು ಮದುವೆಯಾಗುವುದಿಲ್ಲ ಎಂದು ತ್ರಿವಿಕ್ರಮ್‌ ಸ್ಪಷ್ಟಪಡಿಸಿದ್ದಾರೆ. ತ್ರಿವಿಕ್ರಮ್‌ ಹೇಳಿಕೆಯು ಸದ್ಯ ಬಿಗ್‌ಬಾಸ್‌ ಅಭಿಮಾನಿಗಳಿಗೆ ಗಾಬರಿ ಹುಟ್ಟಿಸಿದೆ. ತ್ರಿವಿಕ್ರಮ್‌ ಏನಪ್ಪಾ, ಭವ್ಯಾಗೆ ಹೀಗ್‌ ಮಾಡ್ಬಿಟ್ರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.