ರಚಿತಾ ರಾಮ್ ಮೇಲೂ‌ ಕೇಸ್ ಹಾಕ್ತೀವಿ, ಬಿಗ್ ಟ್ವಿಸ್ಟ್ ಕೊಟ್ಟ ಬುಲೆಟ್ ಕೇಸ್

 | 
Bs
ಕನ್ನಡ ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿಗಳಿಗೆ ಒಬ್ಬರಾದ ಮೇಲೆ ಒಬ್ಬರಿಗೆ ಕಾನೂನಿನ ಸಂಕಷ್ಟ ಎದುರಾಗುತ್ತಿದೆ. ಲಾಯರ್‌ ಜಗದೀಶ್‌ ಜೈಲು ಸೇರಿ ಎರಡು ತಿಂಗಳಾಗಿದ್ದು ಇನ್ನೂ ಜಾಮೀನು ಸಿಕ್ಕಿಲ್ಲ. ಇನ್ನು ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ವಿನಯ್‌ ಗೌಡ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್‌ 11ರ ಸ್ಪರ್ಧಿ ರಜತ್‌ ಕಿಶನ್‌ ಕೂಡ ಜೈಲು ಸೇರಿದ್ದಾರೆ. ಈ ಮಧ್ಯೆಯೇ ಈ ಮತ್ತೊಬ್ಬ ಮಾಜಿ ಬಿಗ್ ಬಾಸ್‌ ಸ್ಪರ್ಧಿಗೆ ಸಂಕಷ್ಟ ಎದುರಾಗಿದೆ.
ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿಯಾಗಿದ್ದ ಸದ್ಯ ಭರ್ಜರಿ ಬ್ಯಾಚುಲರ್ಸ್‌ ಕಾರ್ಯಕ್ರಮದ ಸ್ಪರ್ಧಿಯಾಗಿರುವ ನಟ ರಕ್ಷಕ್ ಬುಲೆಟ್‌ ವಿರುದ್ಧ ದೂರು ನೀಡಲು ಹಿಂದೂ ಕಾರ್ಯಕರ್ತರು ಮುಂದಾಗಿದ್ದಾರೆ. ರಕ್ಷಕ್ ಬುಲೆಟ್‌ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ನಾಡ ದೇವತೆ ಚಾಮುಂಡೇಶ್ವರಿ ತಾಯಿಗೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಜೋರಾಗಿ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲು ಸಜ್ಜಾಗಿದ್ದಾರೆ.
ನಿಮ್ಮನ್ನು ನೋಡ್ತಿದ್ರೆ, ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು, ಪ್ಯಾಂಟು ಶರ್ಟು ಹಾಕ್ಕೊಂಡು ಸ್ವಿಟ್ಜರ್ಲೆಂಡ್‌ನಲ್ಲಿ ಟ್ರಿಪ್ ಹೊಡೆದಂತೆ ಅನಿಸುತ್ತಿದೆ ಎಂದು ರಕ್ಷಕ್‌ ಡೈಲಾಗ್‌ ಹೊಡೆದಿದ್ದರು. ಇದಕ್ಕೆ ಸೋಶಿಯಲ್‌ ಮೀಡಿಯಾದಲ್ಲೂ ಖಂಡನೆ ವ್ಯಕ್ತವಾಗಿದೆ. ಬಳಿಕ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಅಲ್ಲದೆ ರಕ್ಷಕ್‌ ಕೂಡಲೇ ಕ್ಷಮೆ ಕೇಳದಿದ್ದರೆ, ಮಸಿ ಹಾಕ್ತೀವಿ ಎಂದೂ ವಾರ್ನಿಂಗ್‌ ಕೊಟ್ಟಿದ್ದಾರೆ.
ಇದು ರಕ್ಷಕ್‌ ಕಥೆಯಾದ್ರೆ, ಈ ರಿಯಾಲಿಟಿ ಶೋ ಜಡ್ಜ್‌ ಆಗಿದ್ದ ರಚಿತಾ ರಾಮ್‌ ಅವರಿಗೂ ಇದೀಗ ಆಪತ್ತು ಎದುರಾಗಿದೆ. ರಚಿತಾ ರಾಮ್‌ ಅವರು ಹಲವು ಬಾರಿ ತಾನು ಚಾಮುಂಡಿ ತಾಯಿಯ ಪರಮಭಕ್ತೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರಿದ್ದ ವೇದಿಕೆಯಲ್ಲೇ ಚಾಮುಂಡಿದೇವಿಗೆ ಅವಮಾನವಾಗುವಂತೆ ರಕ್ಷಕ್‌ ಮಾತನಾಡಿದರೂ ಅವರು ಖಂಡಿಸಲಿಲ್ಲ. ಇದನ್ನು ನೋಡಿದರೆ ರಕ್ಷಕ್‌ ಅವರಿಗೆ ರಚಿತಾ ಅವರೂ ಉತ್ತೇಜನ ನೀಡಿದ್ದಾರೆ. 
ರಕ್ಷಕ್‌ ಈ ಡೈಲಾಗ್‌ ಕೇಳಿ ರಚಿತಾ ರಾಮ್‌ ಕೂಡ ನಕ್ಕಿದ್ದಾರೆ. ಭಕ್ತಿ ಕೇವಲ ಬಾಯಿ ಮಾತಿಗೆ ಮಾತ್ರ ಸೀಮಿತವಾಗಿದೆ. ಅವರು ಅಲ್ಲೇ ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಅವರ ಭಕ್ತಿಯನ್ನ ಒಪ್ಪಿಕೊಳ್ಳುತ್ತಿದ್ವಿ. ಆದರೆ ಅವರು ಆ ಕೆಲಸ ಮಾಡಲಿಲ್ಲ. ಹಾಗಾಗಿ ರಚಿತಾ ರಾಮ್‌ ಅವರ ಮೇಲೂ ದೂರು ಕೊಡಲು ನಿರ್ಧರಿಸಿದ್ದೇವೆ ಎಂದು ಹಿಂದೂ ಮುಖಂಡ ತೇಜಸ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.