ನೀನು ಅಪ್ಪಂಗೆ ಹುಟ್ಟಿದ್ಯಾ, ಲಾಯರ್ ಜಗದೀಶ್ ಗೆ ಹಿಂದೂ ಕಾಯ೯ಕತೆ೯ ಚೈತ್ರಾ ಕುಂದಾಪುರ ಖಡಕ್ ಪ್ರಶ್ನೆ

 | 
D
 ಬಿಗ್‌ಬಾಸ್ ಕನ್ನಡ ಸೀಸನ್ 11ರಿಂದ ಲಾಯರ್ ಜಗದೀಶ್ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಕಲರ್ಸ್ ಕನ್ನಡ ವಾಹಿನಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಡಿಸಿಲ್ಲ. ಮೂರನೇ ವಾರ ದೊಡ್ಮನೆಯಲ್ಲಿ ಇಡೀ ಮನೆ ಒಂದು, ಜಗದೀಶ್ ಅವರೇ ಒಂದು ಅನ್ನೋ ತರಹ ಆಗಿದೆ. ಬಿಗ್‌ಬಾಸ್‌ ಮನೆಯ ಪ್ರತಿಯೊಬ್ಬ ಸದಸ್ಯರು ಲಾಯರ್ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
 ಇನ್ನು ಕೆಲವರು ಅವರನ್ನು ಸಾಕಷ್ಟು ಪ್ರವೋಕ್ ಮಾಡುತ್ತಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಜಗದೀಶ್ ಟ್ರೆಂಡ್ ಆಗಿದ್ದಾರೆ.ಮಾನಸಾ ಅವರ ವಿಚಾರಕ್ಕೆ ಜಗದೀಶ್ ಹಾಗೂ ರಂಜಿತ್ ನಡುವೆ ಜಗಳ ಆಗಿದೆ ಎನ್ನಲಾಗಿದೆ.   ಕನ್ನಡ ಬಿಗ್​ ಬಾಸ್​ ಇತಿಹಾಸದಲ್ಲಿ ಜಗಳ ಆಡಿಕೊಂಡು ದೊಡ್ಮನೆಯಿಂದ ಸ್ಪರ್ಧಿಗಳು ಹೊರಬಿದ್ದ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಹುಚ್ಚ ವೆಂಕಟ್​ ಕೂಡ ಹೊಡೆದಾಡಿಕೊಂಡು ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ರು.
ಅಷ್ಟಕ್ಕೂ ಮಾನಸ ಆಡಿದ ಮಾತಿನಿಂದಲೇ ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ ನಡೆದಿದೆ ಎನ್ನಲಾಗ್ತಿದೆ. ನಾಮಿನೇಷನ್ ವೇಳೆ ಜಗದೀಶ್ ಎಲ್ಲರ ವಿಚಾರಕ್ಕೂ ಮೂಗು ತೂರಿಸಿದ್ರಂತೆ. ಇದನ್ನು ಮಾನಸ ಪ್ರಶ್ನೆ ಮಾಡಿದ್ದಾರೆ. ನೀನ್ ಏನ್ನಯ್ಯಾ ಎಲ್ಲರ ವಿಚಾರಕ್ಕೂ ತಲೆ ಹಾಕ್ತೀಯಾ, ಬೇರೆಯವರ ವಿಚಾರದಲ್ಲೂ ಮಧ್ಯೆ ಪ್ರವೇಶಿಸೋದು ಯಾಕೆ ಎಂದು ಪ್ರಶ್ನೆ ಮಾಡಿದ್ರು. ಇದಕ್ಕೆ ಸಿಟ್ಟಾದ ಜಗದೀಶ್​ ಕೇಳೋಕೆ ನೀನ್ ಯಾರು ಎಂದು ತಿರುಗಿಬಿದ್ದಿದ್ದಾರೆ ಎನ್ನಲಾಗ್ತಿದೆ.
ಇನ್ನು ಚೈತ್ರಾ ಕುಂದಾಪುರ ಸಹ ಅಪ್ಪ ಅಮ್ಮನಿಗೆ ಹುಟ್ಟಿದ ಮಗನಾಗಿದ್ರೆ ಮಾತಾಡು ಎಂದು ಮಾತಿನ ಮದ್ಯ ಲಾಯರ್ ಜಗದೀಶ್ ಅವರನ್ನು ತಿವಿದಿದ್ದಾರೆ.ಇದೇ ವಿಚಾರಕ್ಕೆ ಸ್ಪರ್ಧಿಗಳೆಲ್ಲಾ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ ಎನ್ನಲಾಗ್ತಿದೆ. ರಂಜಿತ್ ಹಾಗೂ ಮಂಜು ಜೊತೆ ಜಗದೀಶ್ ಜೋರಾಗಿ ಜಗಳವಾಡಿದ್ದು, ಅವಾಚ್ಯ ಶಬ್ಧಗಳಿಂದ ಬೈಯ್ದಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.