ಅವತ್ತಿನ ಟಾಪ್ ನ.ಟಿ ಮಹಾಲಕ್ಷ್ಮಿ ಇವತ್ತು ಎಂತಹ ಪರಿಸ್ಥಿತಿಯಲ್ಲಿದ್ದಾರೆ ಗೊ.ತ್ತಾ

 | 
J

ದೂರದ ಊರಿಂದ ಹಮ್ಮೀರ ಬಂದ...ಜರತಾರಿ ಸೀರೆ ತಂದ... - ಸ್ವಾಭಿಮಾನ ಚಿತ್ರದ ಈ ಹಾಡು ಕೇಳಿದ ತಕ್ಷಣ ನಮಗೆಲ್ಲ ನೆನಪಾಗುವ, ಪದೇ ಪದೇ ಕಾಡುವ ನಟಿ ಮಹಾಲಕ್ಷ್ಮಿ.ಕಣ್ಣಲ್ಲೇ ಕಾಮನೆಯನ್ನು ಉಕ್ಕಿಸುತ್ತಿದ್ದ, ಹಾವ-ಭಾವಗಳಲ್ಲೇ ಉನ್ಮಾದವನ್ನು, ಸಹಜಾಭಿನಯವನ್ನು ನೀಡುತ್ತಿದ್ದ ನಟಿ ಈಕೆ. ಡಾ.ರಾಜ್ ಕುಮಾರ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್, ರವಿಚಂದ್ರನ್ ಸೇರಿದಂತೆ ಅಂದಿನ ಕಾಲದ ದಿಗ್ಗಜರ ಜೊತೆ ನಟಿಸಿದ್ದ ಮಹಾಲಕ್ಷ್ಮಿ ಕಾಲಿವುಡ್ ಹಾಗೂ ಟಾಲಿವುಡ್ ನಲ್ಲೂ ನಿರ್ಮಾಪಕರ ಪಾಲಿಗೆ ವಿಜಯಲಕ್ಷ್ಮಿ ಆಗಿದ್ದವರು.

ನಟಿ ಮಹಾಲಕ್ಷ್ಮಿ ಅಭಿನಯದ ಸ್ಮರಣೀಯ ಚಿತ್ರಗಳ ಪಟ್ಟಿಯಲ್ಲಿ - ಸ್ವಾಭಿಮಾನ, ಮದುವೆ ಮಾಡು ತಮಾಷೆ ನೋಡು, ತಾಯಿ ಕೊಟ್ಟ ತಾಳಿ, ಜಯಸಿಂಹ, ಬ್ರಹ್ಮ ವಿಷ್ಣು ಮಹೇಶ್ವರ, ಪರಶುರಾಮ, ಹೆಂಡ್ತೀಗೆ ಹೇಳ್ಬೇಡಿ, ಮನೇಲಿ ಇಲಿ ಬೀದಿಲಿ ಹುಲಿ - ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.ಆದರೆ ಬಣ್ಣದ ಬದುಕಿಗೆ ಕಾಲಿಟ್ಟ ಕೆಲ ವರ್ಷಗಳಲ್ಲೇ ಯಶಸ್ವಿ ತಾರೆ ಎನಿಸಿಕೊಂಡ ಮಹಾಲಕ್ಷ್ಮಿ, ಉತ್ತುಂಗದ ಕಾಲದಲ್ಲಿ ಇರುವಾಗಲೇ ಚಿತ್ರರಂಗವನ್ನು ತೊರೆದರು.

ಬಹು ಬೇಡಿಕೆಯಲ್ಲಿರುವಾಗಲೇ ನಟಿ ಮಹಾಲಕ್ಷ್ಮಿ ಚಿತ್ರ ಜೀವನಕ್ಕೆ ಗುಡ್ ಬೈ ಹೇಳಿದ್ದಕ್ಕೆ ನಿಖರ ಕಾರಣವನ್ನು ಯಾರೂ ಹೇಳುತ್ತಿಲ್ಲ. ಈ ವಿಚಾರದಲ್ಲಿ ಭಿನ್ನ ಅಭಿಪ್ರಾಯಗಳು, ಹೇಳಿಕೆಗಳು ಗಾಂಧಿನಗರದಲ್ಲಿದೆ. ಅದರಲ್ಲಿ ಒಂದು ಈಕೆಯ ಒಲವಿನ ವಿಷಯ.ಕನ್ನಡದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರೊಂದಿಗೆ ನಟಿ ಮಹಾಲಕ್ಷ್ಮಿ ಅಪಾರ ಒಲವನ್ನು ಹೊಂದಿದ್ದರು. ದಿನ ಕಳೆದಂತೆ ಇವರೊಳಗಿನ ಪ್ರೇಮ ಪಲ್ಲವಿ ಹೊಸದೊಂದು ರಾಗ ನುಡಿಸಲು ಪ್ರಾರಂಭಿಸಿತ್ತು.

ಇತ್ತ 'ಆ' ನಟ ಸಹ ಪ್ರೀತಿಯ ಒರತೆಯನ್ನು ಹೊಮ್ಮಿಸಲು ಶುರು ಮಾಡಿದ್ರು. ಆಗಲೇ ಇಬ್ಬರ ಮನೆಯಲ್ಲಿಯೂ ಭಾರಿ ವಿವಾದ ಎಬ್ಬಿಸಿತು ಎನ್ನುವ ಮಾತಿದೆ.ಮಹಾಲಕ್ಷ್ಮಿ ಹಾಗೂ 'ಆ' ನಟ ದೂರವಾಗಲು ಇಚ್ಛಿಸಲಿಲ್ಲ. ಮದುವೆಯಾಗುವ ಪ್ರಯತ್ನವನ್ನು ಹಲವು ರೀತಿಯಲ್ಲಿ ಮಾಡಿದರು. ಈ ವಿಷಯ ಗಾಂಧಿನಗರಕ್ಕೆ ಗೊತ್ತಾದ ಮೇಲಂತೂ ಭಿನ್ನ-ಭಿನ್ನ ತಿರುವು ಪಡೆಯಿತು. ಪ್ರೇಮ ಪ್ರಕರಣದ ನಂತರ 'ಆ' ನಟನಿಗೆ ಮನೆ ಮಂದಿ ಬೇರೆ ಹುಡುಗಿಯನ್ನು ತಂದು ಮದುವೆ ಮಾಡಿದ್ರು. ಆ ನಂತರದಲ್ಲಿ ಮಹಾಲಕ್ಷ್ಮಿ ಹಾಗೂ 'ಆ' ನಟನ ಸಂಬಂಧ ಮುರಿದು ಬಿತ್ತು. ಇದರಿಂದಲೇ ಅವರು ಚಿತ್ರರಂಗವನ್ನು ತೊರೆಯುವಂತಾಯಿತು ಎನ್ನಲಾಗಿದೆ.

ಚಿತ್ರರಂಗದಿಂದ ದೂರವಾದ ನಂತರ, ಚಿತ್ರರಂಗಕ್ಕೆ ಹೊರತಾದ ವ್ಯಕ್ತಿಯೋರ್ವರನ್ನು ಮಹಾಲಕ್ಷ್ಮಿ ಮದುವೆ ಆದರು ಅಂತ ಸುದ್ದಿ ಹರಿದಾಡಿತ್ತು. ನಂತರ ಮೊದಲನೇ ಪತಿಗೆ ವಿಚ್ಛೇದನ ನೀಡಿದ ಮಹಾಲಕ್ಷ್ಮಿ ಬಳಿಕ ಎರಡು ಮದುವೆ ಆದರು ಅಂತ ಹೇಳುವವರೂ ಇದ್ದಾರೆ. ಮೂರನೇ ಪತಿ ಜೊತೆ ಕೆಲ ಕಾಲ ಯು.ಎಸ್ ನಲ್ಲಿ ತಂಗಿದ್ದರು. ಆದ್ರೆ, ದಾಂಪತ್ಯ ಕಲಹದಿಂದ ಮೂರನೇ ಮದುವೆಯೂ ಮುರಿದುಬಿದ್ದಾಗ ನಟಿ ಮಹಾಲಕ್ಷ್ಮಿ ಮಾನಸಿಕ ಖಿನ್ನತೆಗೆ ಒಳಗಾಗಿ ಸನ್ಯಾಸಿನಿ ಆಗಲು ಕ್ರೈಸ್ತ ಮಿಷನರಿಗಳ ಸೇರಿದ್ದರು ಎಂಬುದು ಕೆಲ ಮೂಲಗಳ ಮಾಹಿತಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.