ಬಿಗ್ ಬಾಸ್ ಮನೆಯಿಂದ ಹೊರಬಂದ ತಕ್ಷಣ ಕಿಚ್ಚನ ಬಗ್ಗೆ ಪ್ರತಾಪ್ ಹೇ.ಳಿದ್ದೇನು ಗೊ ತ್ತಾ,

 | 
J

ಕೆಲ ದಿನಗಳ ಹಿಂದಷ್ಟೇ ಬಿಗ್‌ಬಾಸ್ ಕನ್ನಡ ಸೀಸನ್ 10 ಯಶಸ್ವಿಯಾಗಿದೆ. ಈ ಹಿಂದೆ ಬಂದ ಎಲ್ಲಾ ಸೀಸನ್‌ಗಳಿಗೆ ಹೋಲಿಸಿದರೆ, ಸೀಸನ್ 10ಗೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಿಚ್ಚ ಸುದೀಪ್ ನಿರೂಪಣೆಯನ್ನೂ ಹಾಡಿ ಹೊಗಳಿದ್ದಾರೆ. ಎಲ್ಲಾ ಸ್ಪರ್ಧಿಗಳನ್ನು ನಗಿಸುತ್ತಾ? ಚಪ್ಪಾಳೆ ನೀಡುತ್ತಾ? ದಾರಿ ತಪ್ಪಿದಾಗ ಎಚ್ಚರಿಕೆ ನೀಡುತ್ತಾ? ಯಶಸ್ವಿಯಾಗಿ ಈ ಸೀಸನ್ ಮುಗಿಸಿದ್ದಾರೆ.

ಈ ಸೀಸನ್‌ನ ಕೊನೆಯಲ್ಲಿ ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್ ಬಿಗ್‌ಬಾಸ್ ಟೈಟಲ್‌ಗಾಗಿ ಪೈಪೋಟಿ ನಡೆಸಿದ್ದರು. ಆದರೆ, ಅಂತಿಮವಾಗಿ ಕಾರ್ತಿಕ್ ಮಹೇಶ್ ಬಿಗ್‌ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಇತ್ತ ಡ್ರೋನ್ ಪ್ರತಾಪ್ ಮೊದಲನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯ್ತು. ಡ್ರೋನ್ ಪ್ರತಾಪ್ ಬಿಗ್‌ಬಾಸ್ ಮನೆಯಲ್ಲಿ ಇದ್ದಾಗ ಕಿಚ್ಚ ಸುದೀಪ್ ಸಾಕಷ್ಟು ಸಲಹೆಗಳನ್ನು ನೀಡಿದ್ದರು. ಮೊದಲ ಕೆಲವು ವಾರ ಬಿಗ್‌ಬಾಸ್ ಮನೆಯಲ್ಲಿ ಡಲ್ ಆಗಿದ್ದಾಗ ಕಿಚ್ಚ ಸುದೀಪ್ ಪ್ರೇರಣೆ ನೀಡಿದ್ದರು. 

ಬಿಗ್‌ಬಾಸ್ ಆಟವನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದರು. ಬಿಗ್‌ಬಾಸ್ ಕನ್ನಡ ಸೀಸನ್ 10 ಉದ್ದಕ್ಕೂ ಒಂದಲ್ಲ ಒಂದು ಹಂತದಲ್ಲಿ ಸಲಹೆ ನೀಡುತ್ತಲೇ ಬಂದಿದ್ದರು. ಫಿನಾಲೆಯ ಕೊನೆಯ ದಿನ ಕೂಡ ಡ್ರೋನ್ ಪ್ರತಾಪ್‌ಗೆ ಕಿಚ್ಚ ಸುದೀಪ್ ಸಲಹೆ ನೀಡಿದ್ದರು. ಅದೇನು ಅನ್ನೋದನ್ನು ಡ್ರೋನ್ ಪ್ರತಾಪ್ ರಿವೀಲ್ ಮಾಡಿದ್ದಾರೆ. ಬಿಗ್‌ಬಾಸ್ ವಿನ್ ಆಗಿದ್ದರೂ, ರನ್ನರ್ ಅಪ್ ಬಂದರೂ ಎರಡು ಸಿದ್ಧನಿದ್ದೆ. ಕೋಟಿ ಲೆಕ್ಕದಲ್ಲಿ ವೋಟ್ ಬಂದಿದ್ದೇ ನನಗೆ ಸಾಕಿತ್ತು ಎಂದು ಹೇಳಿದ್ದಾರೆ. 

ಎರಡು ಬಂದರೂ ನಾನು ಒಪ್ಪಿಕೊಳ್ಳುವುದಕ್ಕೆ ನಾನು ರೆಡಿಯಿದ್ದೆ. ಅಷ್ಟು ಕೋಟಿ ವೋಟ್‌ಗಳು ಅಂದಾಗ, ನನ್ನ ಕಣ್ಣುಗಳು ಒಮ್ಮೆ ಚದುರಿಕೊಳ್ತು. ಇಷ್ಟು ವೋಟ್ ಬಂದಿದೆಯಲ್ಲ ಅಂತ. ಎಲ್ಲಕ್ಕಿಂತ ಹೆಚ್ಚಾಗಿ ಜನರ ಪ್ರೀತಿ ಗೆದ್ದು ಬಿಟ್ಟೆ ಅಂತ ಅನಿಸಿತು. ಎರಡರಲ್ಲಿ ಯಾವುದು ಬಂದರೂ ಖುಷಿಯಿತ್ತು. ಸುದೀಪ್ ಸರ್ ನನ್ನ ಬದುಕನ್ನೇ ಬದಲಾಯಿಸಿದ್ದಾರೆ ಎಂದು ಸುದೀಪ್ ಅವರ ಹಾಡಿ ಹೊಗಳಿದ್ದಾರೆ ಪ್ರತಾಪ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.