ಸಲ್ಮಾನ್ ಖಾನ್ ರಾತ್ರಿ ಕುಡಿದು ಬಂದು ಐಶ್ವರ್ಯ ರೈಗೆ ಏನು ಮಾ ಡುತ್ತಿದ್ದ ಗೊ.ತ್ತಾ

 | 
Bd

ಸಲ್ಮಾನ್ ಖಾನ್ ಇನ್ನೂ ಯಾಕೆ ಮದುವೆ ಆಗಿಲ್ಲ ಎಂದು ಎಲ್ಲರೂ ಕೇಳುತ್ತಾರೆ. 54 ವರ್ಷ ವಯಸ್ಸಿನಲ್ಲೂ ಫಿಟ್ ಆಗಿರುವ ಅವರನ್ನು ಕೈ ಹಿಡಿಯಲು ಲಕ್ಷಾಂತರ ಹುಡುಗಿಯರು ಕಾದಿದ್ದಾರೆ. ಆದರೂ ಯಾರಿಗೂ ಸಲ್ಲು ಹೃದಯ ಕೊಟ್ಟಿಲ್ಲ. ಹಾಗೆ ಅವರು ಮನಸಾರೆ ಪ್ರೀತಿಸಿದ್ದ ಹುಡುಗಿ ಎಂದರೆ ಕನ್ನಡತಿ ಐಶ್ವರ್ಯಾ ರೈ! ಹೌದು, ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವೆ ಪ್ರೀತಿ ಚಿಗುರೊಡೆದಿತ್ತು ಎಂಬುದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ. 

ಇಬ್ಬರೂ ಅನೇಕ ಸಂದರ್ಭದಲ್ಲಿ ಜೊತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಉಂಟು ಮಾಡಿದ್ದರು. ಇನ್ನೇನು ಈ ಜೋಡಿ ಮದುವೆ ಆಗಲಿದೆ ಎಂಬಷ್ಟರಲ್ಲೇ ಎಲ್ಲವೂ ತಲೆಕೆಳಗಾಯಿತು. ಇದ್ದಕ್ಕಿದ್ದಂತೆಯೇ ಒಂದು ದಿನ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಬ್ರೇಕಪ್ ಮಾಡಿಕೊಂಡರು. ಇದು ಅವರ ಅಭಿಮಾನಿ ಬಳಗಕ್ಕೆ ಶಾಕ್ ನೀಡಿತು. ಅಷ್ಟಕ್ಕೂ ಈ ಜೋಡಿಯ ನಡುವೆ ನಡೆದ ಗಲಾಟೆಯಾದರೂ ಏನು ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಕೊರೆಯುತ್ತಲೇ ಇತ್ತು. ಸಾಧ್ಯವಾದಾಗಲೆಲ್ಲ ಈ ವಿಚಾರದ ಬಗ್ಗೆ ಇಬ್ಬರೂ ಬಾಯಿ ಬಿಟ್ಟಿದ್ದಾರೆ.

1999ರಲ್ಲಿ ತೆರೆಕಂಡ ಹಮ್ ದಿಲ್ ದೇ ಚುಕೆ ಸನಮ್' ಚಿತ್ರದಲ್ಲಿ ಮೊದಲ ಬಾರಿಗೆ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಜೊತೆಯಾಗಿ ನಟಿಸಿದರು. ಬಣ್ಣದ ಲೋಕದಲ್ಲಿ ಐಶ್ ಆಗತಾನೇ ಪಯಣ ಆರಂಭಿಸಿದ್ದರು. ಅಷ್ಟರಲ್ಲಾಗಲೇ ಸಲ್ಮಾನ್ ಚಿತ್ರರಂಗಕ್ಕೆ ಕಾಲಿಟ್ಟ 10 ವರ್ಷ ಕಳೆದಿತ್ತು. ಅವರಿಗೆ ಸ್ಟಾರ್ ಪಟ್ಟವೂ ಸಿಕ್ಕಿತ್ತು. ಇಬ್ಬರ ನಡುವೆ ಹಮ್ ದಿಲ್ ದೇ ಚುಕೆ ಸನಮ್ ಶೂಟಿಂಗ್ ಸಮಯದಲ್ಲೇ ಆಪ್ತತೆ ಬೆಳೆಯಿತು. ಐಶ್ವರ್ಯಾರನ್ನು ಸಲ್ಮಾನ್ ಪ್ರೀತಿಸತೊಡಗಿದರು. 

ಆದರೆ ಸಲ್ಮಾನ್ ಮೇಲೆ ಐಶ್ಗೂ ಅದೇ ರೀತಿ ಫೀಲಿಂಗ್ ಇತ್ತಾ? ಯಾಕೋ ಅನುಮಾನ. ಸಲ್ಮಾನ್ ಅವರದ್ದು ಕೇವಲ ಒನ್ ಸೈಡ್ ಲವ್ ಆಗಿತ್ತು ಎಂಬುದು ಹಲವರ ಅಭಿಪ್ರಾಯ. ಹಾಗಿದ್ದರೂ ಅವರಿಬ್ಬರ ನಡುವೆ ಆಪ್ತತೆ ಮುಂದುವರಿದಿತ್ತು. ಕೆಲವು ತಿಂಗಳ ನಂತರ ಐಶ್ ಮತ್ತು ಸಲ್ಲು ನಡುವೆ ಮನಸ್ತಾಪ ಮೂಡಲು ಶುರುವಾಯಿತು. ಆ ಸಮಯದಲ್ಲಿಯೇ ಒಂದು ರಾತ್ರಿ ನೇರವಾಗಿ ಐಶ್ವರ್ಯಾ ಮನೆಗೆ ಸಲ್ಮಾನ್‌ ತೆರಳಿದರು. ಆದರೆ ಐಶ್‌ ಬಾಗಿಲು ತೆರೆಯಲಿಲ್ಲ! ತುಂಬ ಕೋಪದಲ್ಲಿದ್ದ ಸಲ್ಲು ಬಾಗಿಲು ಬಡಿಯುವುದನ್ನು ನಿಲ್ಲಿಸಲೇ ಇಲ್ಲ. 

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ನಸುಕಿನ 3 ಗಂಟೆವರೆಗೂ ಅವರು ಬಾಗಿಲು ತಟ್ಟುತ್ತಿದ್ದರು. ಅವರ ಕೈಯಿಂದ ರಕ್ತ ಕೂಡ ಸುರಿಯಲು ಪ್ರಾರಂಭ ಆಯಿತು. ಅಷ್ಟೇ ಅಲ್ಲ, ಒಂದು ವೇಳೆ ಬಾಗಿಲು ತೆಗೆಯದೇ ಇದ್ದರೆ ಅದೇ ಬಿಲ್ಡಿಂಗ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಸಲ್ಮಾನ್‌ ಬೆದರಿಕೆ ಒಡ್ಡಿದ್ದರು ಎನ್ನುತ್ತವೆ ಮೂಲಗಳು. ನಾನು ಅಲ್ಲಿಗೆ ಹೋಗಿದ್ದು ನಿಜ ಎಂದು ಸಲ್ಮಾನ್‌ ಖಾನ್‌ ಬಳಿಕ ಒಪ್ಪಿಕೊಂಡರಾದರೂ, ಆ ಘಟನೆಗೆ ಮಾಧ್ಯಮಗಳು ಮಸಾಲೆ ಸೇರಿಸಿವೆ ಎಂದು ಆರೋಪಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.