ಕಾಮುಕ ಕೊ.ಲೆ ಆರೋಪಿ ಫಯಾಜ್ ತಾಯಿ ಹೇಳಿದ್ದೇನು ಗೊ.ತ್ತಾ; ಆತನನ್ನು ಗಲ್ಲಿಗೆ ಹಾಕಿ

 | 
೬೬

ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲೇ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಬರ್ಬರವಾಗಿ  ಕೊಲೆಯಾಗಿದ್ದಳು. ಪಾಗಲ್‌ ಪ್ರೇಮಿಯ ಕೃತ್ಯಕ್ಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರಿದಿದೆ. ಆರೋಪಿಯನ್ನು ಎನ್‌ಕೌಂಟರ್ ಮಾಡಿ ಬಿಸಾಕಿ ಎಂದು ಆಕ್ರೋಶಗಳು ಕೇಳಿಬರುತ್ತಿವೆ.

ಈ ನಡುವೆ ಘಟನೆ ಬಗ್ಗೆ ಆರೋಪಿ ಫಯಾಜ್‌ ತಾಯಿ ಮಮ್ತಾಜ್ ಪ್ರತಿಕ್ರಿಯಿಸಿದ್ದು, ಫಯಾಜ್‌ಗೆ ಶಿಕ್ಷೆ ಆಗಬೇಕೆಂದು ಕಣ್ಣೀರು ಹಾಕಿದ್ದಾರೆ. ನನ್ನ ಮಗ ಫಯಾಜ್‌ ಮಾಡಿದ ಕೃತ್ಯಕ್ಕೆ ತಕ್ಕ ಶಿಕ್ಷೆ ಆಗಬೇಕು. ಆತನ ತಪ್ಪಿಗೆ ನಾನು ರಾಜ್ಯದ ಜನತೆಗೆ ಹಾಗೂ ನೇಹಾಳ ತಂದೆ-ತಾಯಿಗೂ ಕ್ಷಮೆಯಾಚಿಸುತ್ತೆನೆ. ಅವರಿಗೆ ಎಷ್ಟು ದುಃಖ ಆಗಿದ್ದೀಯೋ ಅಷ್ಟೇ ನೋವಾನ್ನು ನಾವು ಅನುಭವಿಸುತ್ತಿದ್ದೇವೆ. 

ಯಾವ ಮಕ್ಕಳು ತಪ್ಪು ಮಾಡಿದರೂ ತಪ್ಪೇ.ನನ್ನ ಮಗ ಮಾಡಿದ ತಪ್ಪಿಗೆ ಈ ನೆಲದ ಕಾನೂನು ಏನು ಶಿಕ್ಷೆ ವಿಧಿಸುತ್ತೋ ಆ ಪ್ರಕಾರ ಶಿಕ್ಷೆ ಆಗಲಿ ಎಂದರು.ನೇಹಾ ಹಾಗೂ ಫಯಾಜ್‌ ಪ್ರೀತಿ ಬಗ್ಗೆಯೂ ಮಮ್ತಾಜ್‌ ಪ್ರತಿಕ್ರಿಯಿಸಿದ್ದಾರೆ. ಫಯಾಜ್‌ ಓದಿನಲ್ಲಿ ಜಾಣನಾಗಿದ್ದ, ಜಿಮ್‌ ಬಾಡಿ ಬಿಲ್ಡರ್‌ನಲ್ಲಿ ಯೂನಿವರ್ಸಿಟಿ ಬ್ಲ್ಯೂ ಆಗಿದ್ದ. 

ಆತನಿಗೆ ಹಲವಾರು ಸನ್ಮಾನಗಳು ನಡೆಯುತ್ತಿದ್ದವು. ಇದರಿಂದ ಖುಷಿಯಾದ ನೇಹಾ ಫಯಾಜ್‌ ಕ್ಯಾಂಟಿನ್‌ನಲ್ಲಿದ್ದಾಗ ಆಕೆಯೇ ಫೋನ್‌ ನಂಬರ್‌ ಪಡೆದಿದ್ದಳು. ಅವಳೇ ಫಯಾಜ್‌ಗೆ ಪ್ರಪೋಸ್ ಮಾಡಿದ್ದಳು. ಈ ಬಗ್ಗೆ ಒಂದು ವರ್ಷದ ಹಿಂದೆಯೇ ಫಯಾಜ್‌ ನನ್ನ ಬಳಿ ಹೇಳಿಕೊಂಡಿದ್ದ. ನೇಹಾ ಎಂಬಾಕೆ ನನ್ನ ತುಂಬಾ ಲೈಕ್‌ ಮಾಡುತ್ತಾಳೆ, ಪ್ರೀತಿ ಮಾಡುತ್ತಿದ್ದಾಳೆ ಎಂದಿದ್ದ. ಆದರೆ ನಾನು ಈ ಲವ್ ಎಲ್ಲ ಬೇಡ ಎಂದು ಹೇಳಿದ್ದೆ. ಆದರೆ ಅವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

ಫಯಾಜ್‌ ಭವಿಷ್ಯದಲ್ಲಿ ಕೆಎಎಸ್ ಆಫೀಸರ್ ಆಗಬೇಕೆಂದು ಕನಸು ಕಂಡಿದ್ದೆ. ಆದರೆ ಈ ರೀತಿ ಆಗಿದ್ದು ಬಹಳ ಸಂಕಟ ಆಗುತ್ತೆ. ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ, ಅವರಿಬ್ಬರೂ ಮದುವೆ ಆಗಬೇಕು ಎಂದುಕೊಂಡಿದ್ದರು. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.