ಅಮಾವಾಸ್ಯೆ ದಿನ ದರ್ಶನ್ ಏನು ಮಾಡುತ್ತಾರೆ; ರೊ ಚ್ಚಿಗೆದ್ದ ಪಕ್ಕದ್ ಮನೆ ಆಂಟಿ

 | 
G

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ  ಆರೋಪ ಹೊತ್ತಿರೋ ನಟ ದರ್ಶನ್ ಜೈಲು ಸೇರಿದ್ದಾರೆ. ಜೊತೆಗೆ ದರ್ಶನ್ ಗೆಳತಿ ಪವಿತ್ರಾ ಗೌಡ  ಕೂಡ ಕಾನೂನು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜೈಲಿನಲ್ಲಿರೋ ದರ್ಶನ್ ಭೇಟಿಗೆ ಆಪ್ತರು ಒಬ್ಬೊಬ್ಬರೇ ಬರುತ್ತಿದ್ದಾರೆ. ವಿನೋದ್ ಪ್ರಭಾಕರ್  ಬಂದ ಬಳಿಕ ನಟಿ ರಕ್ಷಿತಾ  ಹಾಗೂ ಪ್ರೇಮ್ ಜೈಲಿಗೆ ಬಂದು ದರ್ಶನ್ ಭೇಟಿಯಾಗಿದ್ದರು. 

ಇಂದು ಖುದ್ದು ದರ್ಶನ್ ತಾಯಿ ಮೀನಾ ತೂಗುದೀಪ್ ಶ್ರೀನಿವಾಸ್ ಜೈಲಿಗೆ ಬಂದು, ಮಗನನ್ನು ನೋಡಿ ಕಣ್ಣೀರಿಟ್ಟಿದ್ದರು. ಅತ್ತ ಅಭಿಮಾನಿಗಳೂ ತಮ್ಮ ನೆಚ್ಚಿನ ನಟನನ್ನು ನೋಡ್ಬೇಕು ಅಂತ ಜೈಲ್ ಹತ್ತಿರ ಬರುತ್ತಲೇ ಇದ್ದಾರೆ. ಎರಡು ತಿಂಗಳ ಹಿಂದೆ ನಟ ದರ್ಶನ್ ಸುದರ್ಶನ ಹೋಮ ಮಾಡಿಸಿದ್ದರು. ನಕಾರಾತ್ಮಕ ಅಂಶಗಳನ್ನು ನಾಶಮಾಡಲು, ಶತ್ರುಗಳ ಮೇಲೆ ವಿಜಯ ಪ್ರಾಪ್ತಿಗೆ ಅಥವಾ ಮಾಟ-ಮಂತ್ರ ಮಾಡಿಸಿರೋ ಅನುಮಾನ ಇದ್ದರೆ ಈ ಹೋಮ ಮಾಡಿಸಲಾಗುತ್ತದೆ. ದರ್ಶನ್ ಕೂಡ ಇದೇ ಹೋಮ ಮಾಡಿಸಿದ್ದರು ಎನ್ನಲಾಗಿದೆ.

ಇನ್ನು ಶಕ್ತಿ ದೇವತೆ ದೇವಸ್ಥಾನ ಕ್ಕೆ ಹೋದಾಗ ಅಲ್ಲಿನ ಪೂಜಾರಿಗಳು ಕೂಡ ಬೆಂಗಳೂರಿಂದ ಹೊರಗೆ ಹೋಗಿ ಎಂದಿದ್ದರಂತೆ. ಅಷ್ಟೇ ಅಲ್ಲ ಅರೆಸ್ಟ್ ಆಗುವುದಕ್ಕೂ ಮುನ್ನ ಅವರು ಮನೆಯನ್ನು ಹೊಸದಾಗಿ ರಿನೋವೇಷನ್ ಮಾಡಿದ್ದರು. ಹೀಗಾಗಿ, ಅವರು ವಿಶೇಷ ಪೂಜೆ ಇಟ್ಟುಕೊಂಡಿದ್ದರು. ಈ ಕಾರಣದಿಂದಲೇ ವಿಜಯಲಕ್ಷ್ಮಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಕೊಲೆ ನಡೆದ ಬಳಿಕ ದರ್ಶನ್ ಪೂಜೆಯಲ್ಲಿ ಭಾಗಿ ಆಗಿದ್ದರು.

ಇನ್ನು ನ್ಯಾಯಾಂಗ ಕಸ್ಟಡಿ ಅಂತ್ಯವಾಗುವ ಕಾರಣ ವಿಡಿಯೊ ಕಾನ್ಫರೆನ್ಸ್ ಮೂಲಕ ಇಂದು ನ್ಯಾಯಾಧೀಶರು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.  

ದರ್ಶನ್ ಅವರನ್ನು ವಿಚಾರಣೆಗೆ ಕರೆದಾಗ ಹೊರಗೆ ಮಾಧ್ಯಮ ಪ್ರತಿನಿಧಿಗಳು, ಅಭಿಮಾನಿಗಳು ಜಮಾಯಿಸುತ್ತಾರೆ, ಇದರಿಂದ ತೊಂದರೆಯಾಗುತ್ತದೆ ಎಂದು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.