ಹೊಸ ವಷ೯ದ ದಿನ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಆಗಿದ್ದೇನು, ಅಯ್ಯೋ ಪಾಪ

 | 
H

 ಕೆಲ ದಿನಗಳ ಹಿಂದಷ್ಟೇ ನಟಿ ಭಾರತಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಕುರಿತು ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ವಿಷ್ಣು ವರ್ಧನ್ ಅವರ ಹದಿನಾಲ್ಕನೇ ಪುಣ್ಯ ಸ್ಮರಣೆಯ ದಿನ ನಟಿ ಭಾರತಿ ವಿಷ್ಣುವರ್ಧನ್ ತಮ್ಮ ಪತಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ.


ಆ ದಿನ ಹಲವಾರು ಅಭಿಮಾನಿಗಳು ನೆಚ್ಚಿನ ನಟನಿಗೆ ಪೂಜೆ ಮಾಡಿ ಗೌರವ ಸಲ್ಲಿಸಿದ್ದಾರೆ. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಪುಣ್ಯ ಸ್ಮರಣೆ ಅಂಗವಾಗಿ ರಕ್ತದಾನ, ನೇತ್ರದಾನ, ಅನ್ನದಾನ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮ ಮೆಚ್ಚಿನ ದಾದಾ ವಿಷ್ಣು ವರ್ಧನ್ ಅವರನ್ನು ನೆನಪಿಸಿ ಕೊಂಡಿದ್ದಾರೆ.


ಇನ್ನು ಹಿಂದಿನ ದಿನದಿಂದಲೇ ಹಲವಾರು ಮಹಿಳೆಯರು ಸೇರಿ ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣು ವರ್ಧನ್ ಅವರ ಹದಿನಾಲ್ಕನೇ ಪುಣ್ಯ ಸ್ಮರಣೆಯ ದಿನ  ಸಮಾಧಿ ಪೂಜೆ ಸಲ್ಲಿಸಿ ದೀಪೋತ್ಸವದಂತಹ ಕಾರ್ಯಕ್ರಮ ಆಯೋಜನೆ ಮಾಡಿದ್ದರು.ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಎಲ್ಲ ಕಾರ್ಯಕ್ರಮಗಳು ಸಂಘವಾಗಿ ನೆರವೇರಿದೆ.


ಇನ್ನು ಅಗಲಿದ ತಂದೆಯನ್ನು ನೆನದು ಮಗಳು ಕೀರ್ತಿ ಹಾಗೂ ಅಳಿಯ ಅನಿರುದ್ಧ ಅವರು ಕಣ್ಣೀರು ಹಾಕಿದ್ದಾರೆ.
ಅಭಿಮಾನಿಗಳು ಬಂದು ವಿಷ್ಣುವರ್ಧನ್ ಸಮಾಧಿ ಬಳಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ಪುಣ್ಯ ಸಮಾಧಿಗಾಗಿ ಅಭಿಮಾನಿಗಳು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ, ಸಮಾಧಿ ಬಳಿ ಯಾವುದೇ ಸಮಸ್ಯೆ ಆಗಬಾರದು ಎಂದು ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಒಂದು ಕೆಎಸ್​ಆರ್​ಪಿ ತುಕಡಿ ಸ್ಥಳದಲ್ಲಿದೆ. ಅಭಿಮಾನಿಗಳು ಗಲಾಟೆ ಹಾಗು ಪ್ರತಿಭಟನೆ ಮಾಡಬಾರದು ಎನ್ನುವ ಕಾರಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.