ಜ್ಯೂನಿಯರ್ ಪುನೀತ್ ಎಂದೇ ಫೇಮಸ್ ಆಗಿದ್ದ ಆನಂದ್ ಅವರಿಗೆ ದಿಡೀರ್ ಆಗಿದ್ದೇನು
Sep 27, 2024, 10:30 IST
|
ನಗುವಿನ ಒಡೆಯ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ 3 ವರ್ಷವಾಗುತ್ತಾ ಬಂತು. ಅಪ್ಪು ಇಲ್ಲದ ನೋವು ಇನ್ನು ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇನ್ನು ಪುನೀತ್ ರಾಜ್‌ಕುಮಾರ್ ಅವರನ್ನೇ ಹೋಲುವ ಕೆಲ ಕಲಾವಿದರು ಜನರನ್ನು ರಂಜಿಸುತ್ತಿದ್ದಾರೆ. ವೇದಿಕೆಗಳಲ್ಲಿ ಅಪ್ಪು ಧ್ವನಿ, ಮ್ಯಾನರಿಸಂ, ಲುಕ್ ಪ್ರದರ್ಶಿಸಿ ಗಮನ ಸೆಳೆಯುತ್ತಾರೆ.
ಜ್ಯೂನಿಯರ್ ಅಪ್ಪು ಅಂತ್ಲೇ ಜನ ಇವರನ್ನು ಗುರ್ತಿಸುತ್ತಾರೆ. ಪವರ್ ಸ್ಟಾರ್ ವಾಯ್ಸ್ ಮಿಮಿಕ್ರಿ ಮಾಡುತ್ತಾ ಅವರದ್ದೇ ಸ್ಟೈಲ್‌ನಲ್ಲಿ ಅವರೆಲ್ಲಾ ಸದ್ದು ಮಾಡುತ್ತಿದ್ದಾರೆ. ಆನಂದ್ ಆರ್ಯ ಎಂಬುವವರು ಕೂಡ ಜ್ಯೂನಿಯರ್ ಅಪ್ಪು ಎಂದೇ ಖ್ಯಾತರಾಗಿದ್ದಾರೆ. ನೂರಾರು ಕಾರ್ಯಕ್ರಮಗಳಲ್ಲಿ ಥೇಟ್ ಪುನೀತ್ ರಾಜ್‌ಕುಮಾರ್ ಅವರಂತೆ ಕಾಣಿಸಿಕೊಂಡು ಜನರ ಮನಗೆದ್ದಿದ್ದಾರೆ.
ಛಾಯಾ ಹಾಗೂ ಮಾರಕಾಸ್ತ್ರ ಎನ್ನುವ ಎರಡು ಸಿನಿಮಾಗಳಲ್ಲಿ ಕೂಡ ಆನಂದ್ ಆರ್ಯ ಬಣ್ಣ ಹಚ್ಚಿ ನಟಿಸಿದ್ದಾರೆ. ಸದ್ಯ ಆನಂದ್ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಎರಡೂ ಕಿಡ್ನಿ ಫೇಲ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೃತ್ತಿಯಲ್ಲಿ ಡ್ರೈವರ್ ಆಗಿದ್ದ ಇವರು ನೆಚ್ಚಿನ ನಟ ಅಪ್ಪು ಅವರಿಂದ ಪ್ರೇರಣೆಗೊಂಡು ಹಾಡು ಹಾಡುವುದನ್ನು ಕಲಿತಿದ್ದರು. ನಂತರ ಆರ್ಕೇಸ್ಟ್ರಾಗಳಲ್ಲಿ ಹಾಡಲು ಆರಂಭಿಸಿದ್ದರು.
ನನಗೆ ನಾಲ್ಕು ವರ್ಷಗಳಿಂದ ಬಿಪಿ ಇತ್ತು. ಇತ್ತೀಚೆಗೆ ಚಿತ್ರೀಕರಣದ ನಡುವೆ ಮಾತ್ರೆ ತೆಗೆದುಕೊಳ್ಳುವುದು ಮಿಸ್ ಮಾಡಿಕೊಂಡಿದ್ದೆ. ಹಾಗಾಗಿ ನಾಲ್ಕೈದು ದಿನಗಳಿಂದ ಉಸಿರಾಟಕ್ಕೆ ತೊಂದರೆಯಾಗಿ ಐಸಿಯುನಲ್ಲಿದ್ದೆ. ಈಘ ನಾರ್ಮಲ್ ವಾರ್ಡ್‌ಗೆ ಶಿಫ್ಟ್ ಆಗಿದ್ದೀನಿ. ಎರಡು ಕಿಡ್ನಿ ಫೇಲ್ ಆಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಕಿಡ್ನಿ ಕಸಿ ಮಾಡಿಸಬೇಕು. ಡಯಾಲಿಸಿಸ್ ಸಹ ಆರಂಭಿಸಿದ್ದಾರೆ ಸಹಾಯ ಮಾಡಿ ಎಂದು ಆನಂದ್ ಆರ್ಯ ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.