ಮಾಲಾಶ್ರೀ ತಂಗಿ ಅವಸ್ಧೆ ಏನಾಗಿತು ಗೊ ತ್ತಾ; ಅಕ್ಕ ಮಾಡಿದ ಕಿತಾಪತಿ ಏ.ನು

 | 
Uh

ಕನ್ನಡ ಸಿನಿಮಾ ರಂಗದಲ್ಲಿ ಮಾಲಾಶ್ರೀ ಹೆಣ್ಣು ಹುಲಿ ಎಂದೇ ಮಿಂಚಿದವರು. ಇವರ ಸಿನಿಮಾ ರಿಲೀಸ್​ ಆಯಿತೆಂದರೆ ಅಭಿಮಾನಿಗಳು ಮುಗಿಬೀಳುತ್ತಿದ್ದ ಕಾಲವೊಂದಿತ್ತು. ಯಾವುದೇ ಪಾತ್ರವಾಗಲಿ, ಯಾವುದೇ ಕಾಸ್ಟೂಮ್ ಇರಲಿ ಅದಕ್ಕೆ ತಕ್ಕಂತೆ ನಟಿಸುತ್ತಿದ್ದರು ಮಾಲಾಶ್ರೀ.ಮಾಲಾಶ್ರೀ ಅವರು ಕನಸಿನ ರಾಣಿ ಎಂಬ ಪಟ್ಟವನ್ನು ಕಟ್ಟಿಕೊಂಡು ಅಭಿಮಾನಿಗಳ ಮನೆ ಕದ್ದ ನಟಿಯಾಗಿದ್ದರು. 

ಅದೊಂದು ಕಾಲದಲ್ಲಿ ಸ್ಯಾಂಡಲ್​ವುಡ್​ನಲ್ಲಿ  ಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದರು. ಒಂದು ವರ್ಷದದಲ್ಲಿ ಅವರು 10 ರಿಂದ 12 ಸಿನಿಮಾದಲ್ಲಿ ಬ್ಯುಸಿಯಾದದ್ದು ಇದೆ.
ನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಆ ಬಳಿಕ ಎಲ್ಲಾ ಪಾತ್ರದಲ್ಲಿ ನಟಿಸಿದ್ದಾರೆ. ಅದರಲ್ಲೂ ಹಳ್ಳಿ ಹುಡುಗಿಯ ಗೆಟಪ್ ಮಾಲಾಶ್ರೀ ಅವರಿಗೆ ಹೇಳಿ ಮಾಡಿಸಿದಂತಿತ್ತು. ಹುಟ್ಟಿದ್ದು ಬೆಳೆದಿದ್ದು ಪಂಜಾಬ್ ಅಲ್ಲಿ ಆದರೂ ನೆಲೆಯೂರಿದ್ದು ಮಾತ್ರ ಕನ್ನಡ ಚಿತ್ರರಂಗದಲ್ಲಿ . 

ಸ್ಯಾಂಡಲ್​ವುಡ್​ನಲ್ಲಿ ಅನೇಕತಾರೆಯರೊಂದಿಗೆ ತೆರೆ ಹಂಚಿಕೊಂಡಿರುವ ಇವರು ಚಾಮುಂಡಿ, ದುರ್ಗಿ, ರಾಮಾಚಾರಿ, ಲಾಕಪ್ ಡೆತ್, ಬೆಳ್ಳಿ ಕಾಲುಂಗುರ, ಬೆಳ್ಳಿ ಮೋಡ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು.ನಟಿ ಮಾಲಾಶ್ರೀ ಅವರಿಗೆ ತಂಗಿ ಕೂಡ ಇದ್ದಾರೆ. ಅವರ ಹೆಸರು ಶುಭಾಶ್ರೀ. ಕನ್ನಡದ ಕೆಲವು ಸಿನಿಮಾದಲ್ಲಿ ಶುಭಾಶ್ರೀ ನಟಿಸಿದ್ದಾರೆ. ಆದರೆ ಮಾಲಾಶ್ರೀ ಅವರಷ್ಟು ಹೆಸರು ಗಳಿಸಲು ಸಾಧ್ಯವಾಗಿಲ್ಲ.

ಇನ್ನು ಇವರು ಸುಳಿ , ಮಾವನ ಮಗಳು ಸೇರಿದಂತೆ ಕೆಲವು ಸಿನಿಮಾದಲ್ಲಿ ಶುಭಾಶ್ರೀ ನಟಿಸಿದ್ದಾರೆ. ದೇವರಾಜ್ ನಟನೆಯ ಸರ್ಕಲ್ ಇನ್ಸ್​ಸ್ಟೆಕ್ಟರ್ ಸಿನಿಮಾ ಶುಭಾಶ್ರೀ ಅವರಿಗೆ ಹೆಸರು ತಂದುಕೊಟ್ಟಿತು. ಆ ಬಳಿಕ ಅದೃಷ್ಟವೋ ಅಥವಾ ಅವಕಾಶಗಳ ಕೊರತೆಯೋ ಗೊತ್ತಿಲ್ಲ ಶುಭಾಶ್ರೀ ಅವರು ಸಿನಿಮಾಗಳಲ್ಲಿ ಅಷ್ಟೇನು ಕಾಣಿಸಿಕೊಂಡಿಲ್ಲ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.