ಡಿವೋರ್ಸ್ ಆದರೆ ಏನಾಗುತ್ತೆ; 'ನನಿಗೆ ಮಾಡೆಲ್ ಆಗುವ ಆಸೆ ಇದೆ

 | 
Ji
ಸ್ಯಾಂಡಲ್‌ವುಡ್ ನಟ ಚಂದನ್ ಶೆಟ್ಟಿ ಮತ್ತು ನಿವೇದಿತಾ ಡಿವೋರ್ಸ್ ವಿಚಾರ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ. ಮೊನ್ನೆ ಮೊನ್ನೆಯಷ್ಟೇ ರೀಲ್ಸ್ ಮಾಡಿಕೊಂಡು ಚೆನ್ನಾಗಿದ್ದ ಈ ಜೋಡಿ ಡಿವೋರ್ಸ್ ಪಡೆದುಕೊಂಡಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇದರ ಜೊತೆಗೆ ಒಪ್ಪಿಕೊಂಡಿದ್ದ ಪ್ರಾಜೆಕ್ಟ್‌ ಕಥೆಯೇನು? ಎಂಬು ಚಿತ್ರತಂಡಕ್ಕೆ ಕೂಡ ಚಿಂತೆ ಶುರುವಾಗಿದೆ. 
ಕ್ಯಾಂಡಿ ಕ್ರಶ್ ಸಿನಿಮಾದಲ್ಲಿಯೂ ಚಂದನ್ ಮತ್ತು ನಿವೇದಿತಾ ಜೋಡಿಯಾಗಿ ಕಾಣಿಸಿಕೊಂಡಿದ್ದರು. 8 ದಿನಗಳ ಶೂಟಿಂಗ್ ಬಾಕಿಯಿರುವಾಗಲೇ ಈ ಜೋಡಿ ಡಿವೋರ್ಸ್ ಅನೌನ್ಸ್ ಮಾಡಿರೋದು ಚಿತ್ರತಂಡಕ್ಕೂ ಶಾಕ್‌ ಆಗಿದೆ. ಯುವ ನಿರ್ದೇಶಕ ಪುನೀತ್ ನಿರ್ದೇಶನದ ಕ್ಯಾಂಡಿ ಕ್ರಶ್ ಎಂಬ ಸಿನಿಮಾದಲ್ಲಿ ಹೀರೋ, ಹೀರೋಯಿನ್ ಆಗಿ ಚಂದನ್ ಮತ್ತು ನಿವೇದಿತಾ ನಟಿಸುತ್ತಿದ್ದರು. 
ಮುಂದಿನ ವಾರದಿಂದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಕೂಡ ಇತ್ತು. ಅಷ್ಟರಲ್ಲಿ ಈ ಜೋಡಿ ಬೇರೆ ಆಗಿರುವ ಸುದ್ದಿ ಅನೌನ್ಸ್ ಮಾಡಿರೋದು ಅಕ್ಷರಶಃ ಚಿತ್ರತಂಡಕ್ಕೂ ಶಾಕ್ ಕೊಟ್ಟಿದೆ. ಮುಂದೇನು? ಎಂಬ ಚಿಂತೆ ಕೂಡ ಶುರುವಾಗಿದೆ. ಆದರೆ ಈ ಸಂದರ್ಭದಲ್ಲಿಯೂ ಚಂದನ್ ಮತ್ತು ನಿವೇದಿತಾ ವೃತ್ತಿಪರತೆಯನ್ನು ಮೆರೆದಿದ್ದಾರೆ.
 ನಿವೇದಿತಾ ಗೌಡ ಸಿನಿಮಾದ ನಿರ್ದೇಶಕ ಪುನೀತ್‌ಗೆ ಕರೆ ಮಾಡಿ ಸಿನಿಮಾದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ. ನಿಮ್ಮ ಪ್ಲ್ಯಾನ್ ಪ್ರಕಾರವೇ, ಶೂಟಿಂಗ್‌ನಲ್ಲಿ ಭಾಗವಹಿಸುತ್ತೇವೆ ಎಂದಿದ್ದಾರಂತೆ.ಮುಂದಿನ ವಾರದಲ್ಲಿ ‘ಕ್ಯಾಂಡಿ ಕ್ರಶ್’ ಶೂಟಿಂಗ್ ಇದೆ. ಅದರ ಬಗ್ಗೆ ಮಾತಾನಾಡುವುದಕ್ಕೆ ಕಾಲ್ ಮಾಡಿದ್ದೆ. ಏನೂ ತಲೆ ಕೆಡಿಸಿಕೊಳ್ಳಬೇಡಿ. ಶೂಟಿಂಗ್‌ಗೆ ಬರುತ್ತೇವೆ. ಪ್ಲ್ಯಾನ್ ಮಾಡಿಕೊಳ್ಳಿ ಅಂತ ಹೇಳಿದ್ದಾರೆ. ಅಷ್ಟು ಬಿಟ್ಟರೆ, ಇದರ ಬಗ್ಗೆ ಏನಾಗಿದೆ ಅನ್ನೋದು ನಮಗೆ ಗೊತ್ತಿಲ್ಲ. ಎಂದು ‘ಕ್ಯಾಂಡಿ ಕ್ರಶ್’ ನಿರ್ದೇಶಕ ಹೇಳಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.