ಬಿಗ್ ಬಾಸ್ ಕೊಟ್ಟ ಲಕ್ಷಾಂತರ ಹಣವನ್ನು ಹನುಮಂತ ಏನು ಮಾಡಿದ್ದಾನೆ, ಮನೆಯಲ್ಲಿ ಇಟ್ಟಿದ್ದಾನಾ

 | 
Nd
ಕನ್ನಡ ಬಿಗ್‌ಬಾಸ್‌ ಸೀಸನ್‌-11ರ ವಿನ್ನರ್‌ ಆಗಿ ಹಳ್ಳಿಹೈದ ಹನುಮಂತ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದರಿಂದ ಹನುಮಂತ ಜೀವನ ಸರಿ ಹೋಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಹನುಮಂತ ವೇದಿಕೆಯಲ್ಲೇ ಬಿಗ್‌ಬಾಸ್‌ ಕುರಿತು ಆರೋಪವೊಂದನ್ನು ಮಾಡಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್‌ ಆಗಿದ್ದಾರೆ.
ಹಾವೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹನುಮಂತ ಮಾತನಾಡುವಾಗ ಈ ಶಾಕಿಂಗ್‌ ವಿಚಾರ ಹೇಳಿದ್ದಾರೆ. ಅಭಿಮಾನಿಯೊಬ್ಬ ಬಿಗ್‌ಬಾಸ್‌ನಿಂದ ಗೆದ್ದ ಹಣದಲ್ಲಿ ಏನೆಲ್ಲ ಮಾಡಿದ್ರಿ? ಎಂದು ಕೇಳಿದರು. ಇದಕ್ಕೆ ಅಚ್ಚರಿ ಉತ್ತರ ನೀಡಿರುವ ಹನುಮಂತು ಅಸಲಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಬಿಗ್‌ಬಾಸ್‌ ವಿಜೇತರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಘೋಷಣೆಯಾಗಿತ್ತು. ಅದರಂತೆ ಹನುಮಂತ ಈ ಸೀಸನ್‌ನ ಕಿರೀಟ ಗೆದ್ದುಬೀಗಿದ್ದಾರೆ. ಹೀಗಾಗಿ ಹನುಮಂತನಿಗೆ ಬಿಗ್‌ಬಾಸ್‌ನಿಂದ 50 ಲಕ್ಷ ರೂಪಾಯಿ ಬರುತ್ತೆ. ಆದರೆ ಅಸಲಿ ವಿಚಾರ ಅಂದ್ರೆ ಹನುಮಂತನಿಗೆ ಇಲ್ಲಿವರೆಗೆ ಹಣ ಕೈಸೇರಲೇ ಇಲ್ವಂತೆ. ಈ ವಿಚಾರವನ್ನು ಕಾರ್ಯಕ್ರಮದ ವೇದಿಕೆಯಲ್ಲೇ ಹನುಮಂತ ಹೇಳಿದ್ದಾರೆ.
ಬಿಗ್‌ಬಾಸ್‌ನಿಂದ ಇನ್ನೂ 50 ಲಕ್ಷ ರೂಪಾಯಿ ಬಂದಿಲ್ಲ. ಆ ಹಣ ಬರಲು ಸ್ವಲ್ಪ ತಡವಾಗುತ್ತೆ. ಬಂದ ಮೇಲೆ ಹೇಳ್ತೀನಿ ಅಣ್ಣ, ಆಗ ಬೇಕಾದ್ರೆ ಮನೆ ಕಡೆ ಬನ್ನಿ ಎಂದು ಅಭಿಮಾನಿ ಕೇಳಿದ ಪ್ರಶ್ನೆಗೆ ತಮಾಷೆಯಾಗಿ ಹೇಳಿದ್ದಾರೆ. ನನಗೆ ಅತಿ ಹೆಚ್ಚು ವೋಟ್‌ ಬಂದಿದೆ ಎಂದು ಗೊತ್ತೇ ಇರಲಿಲ್ಲ. 
ಸುದೀಪ್‌ ಅವರು ನನ್ನ ಕೈ ಎತ್ತಿದಾಗಲೇ ಈ ವಿಚಾರ ನನಗೂ ಗೊತ್ತಾಯ್ತು. ನಿಮ್ಮೆಲ್ಲರ ಆಶೀರ್ವಾದ, ಪ್ರೋತ್ಸಾಹ ಹೀಗೆ ಇರಲಿ ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.