ಕೇಳಿದ್ದು ಒಂದು ಮಗು ಅದೇ ಕೊಟ್ಟಿಲ್ಲ ಅಂದ್ರೆ ಹೇಗೆ; ಚಂದನ್ ಸ್ನೇಹಿತ

 | 
Uu

ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗೆ ವಿಡಿಯೋ ಹಾಕುತ್ತಾ ತಮ್ಮದು ರೊಮ್ಯಾಂಟಿಕ್ ಜೋಡಿ ಎಂದು ಬಿಂಬಿಸಿಕೊಂಡಿದ್ದ ಚಂದನ್ ಹಾಗೂ ನಿವೇದಿತಾ ವಿಚ್ಛೇದನ ಪಡೆದುಕೊಂಡಿದ್ದಾರೆ. ಇವರ ವಿಚ್ಛೇದನದ ಕಾರಣವೇನು ಎಂದು ಅವರ ಆಪ್ತ ನವರಸ್ ವಿವರಿಸಿದ್ದಾರೆ. ಹೌದು ಅವರಿಬ್ಬರ ಕೇರಿಯರ್ ವಿಷಯ ಮನಸ್ಥಾಪ ಮೂಡಿದೆ.

ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಚಂದನ್​ ಶೆಟ್ಟಿ ಅವರು ವಿನ್ನರ್​ ಆದರೆ, ನಿವೇದಿತಾ ಗೌಡ ಅವರು ಮೂರನೇ ರನ್ನರ್​ ಅಪ್​ ಆಗಿದ್ದರು. ಆ ಶೋನಿಂದ ಇಬ್ಬರ ಖ್ಯಾತಿಯೂ ಹೆಚ್ಚಿತು. ಬಿಗ್​ ಬಾಸ್​ ಮುಗಿದ ಬಳಿಕ ನಿವೇದಿತಾ ಗೌಡ ಅವರು ಇನ್ನೂ ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಸೋಶಿಯಲ್​ ಮೀಡಿಯಾದಲ್ಲಿ ಅವರು ಸಖತ್ ಫೇಮಸ್​ ಆಗಿದ್ದಾರೆ. ಚಿತ್ರರಂಗದಲ್ಲಿ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಹಾಗೂ ನಟನಾಗಿ ಚಂದನ್​ ಶೆಟ್ಟಿ ಬ್ಯುಸಿ ಆಗಿದ್ದಾರೆ. 

ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮನಸ್ಥಾಪ ಉಂಟಾಗಿರುವ ಸಾಧ್ಯತೆ ಇದೆ.ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ ತುಂಬ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ ಅವರು ಹೊಸ ಹೊಸ ರೀಲ್ಸ್​ ಹಂಚಿಕೊಳ್ಳುತ್ತಾರೆ. ಅವರ ಪೋಸ್ಟ್​ಗಳು ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗುತ್ತವೆ. ಅದಕ್ಕೆ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಾರೆ. ನಿವೇದಿತಾ ಗೌಡ ಅವರ ಪೋಸ್ಟ್​ಗೆ ಒಂದಷ್ಟು ಜನರು ನೆಗೆಟಿವ್​ ಕಮೆಂಟ್​ ಮಾಡುತ್ತಾರೆ.

 ಆ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ. ಕಮೆಂಟ್​ಗಳಲ್ಲಿ ಅನೇಕರು ಚಂದನ್​ ಶೆಟ್ಟಿಯ ಹೆಸರನ್ನೂ ಆಗಾಗ ಎಳೆದು ತರುತ್ತಾರೆ. ಈ ಕಾರಣದಿಂದಲೂ ಸಂಸಾರದಲ್ಲಿ ಏನಾದರೂ ಕಿರಿಕ್​ ಆಗಿರಬಹುದೇ ಎಂದು ಕೂಡ ಕೆಲವರು ಊಹಿಸುತ್ತಿದ್ದಾರೆ. ಇನ್ನು ನಿವೇದಿತಾ ಸಣ್ಣ ಮಗುವಿನಂತೆ ಹೆಚ್ಚು ಮೆಚ್ಯೂರ್ ಅಲ್ಲ ಹಾಗಾಗಿ ಅವಳು ಸರಿಯಿಲ್ಲ ಎಂಬ ತೀರ್ಮಾನಕ್ಕೆ ಜನ ಬಹುಬೇಗ ಬಂದುಬಿಡುತ್ತಾರೆ.

ಈವರೆಗೂ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಸಾರ್ವಜನಿಕವಾಗಿ ಮನಸ್ತಾಪ ಹೊರಹಾಕಿರಲಿಲ್ಲ. ಏಕಾಏಕಿ ಅವರ ವಿಚ್ಛೇದನದ ಬಗ್ಗೆ ಸುದ್ದಿ ಕೇಳಿಬಂದಿರುವುದರಿಂದ ಅಭಿಮಾನಿಗಳಿಗೆ ಮತ್ತು ನೆಟ್ಟಿಗರಿಗೆ ಅಚ್ಚರಿ ಆಗಿದೆ. ಈ ಬಗ್ಗೆ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಕುಟುಂಬದವರು ಹೇಳಿಕೆ ನೀಡಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.