ಏಕಾಏಕಿ ಕೈಲಾಸಕ್ಕೆ ಹೊರಟ ನಿತ್ಯಾನಂದ ಸ್ವಾಮಿ ಮಾಡುತ್ತಿರುವ ಕೆಲಸ ಯಾವುದು, ಬಿಳಿಯರ ಜೊತೆ ನ ಡೆಯುವುದೇನು ಗೊ.ತ್ತಾ

 | 
ಹಹ

ಸ್ವಾಮಿ ನಿತ್ಯಾನಂದ ಯಾರಿಗೆ ತಿಳಿದಿಲ್ಲ ಹೇಳಿ? ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದಗೆ ಅಂಟಿಕೊಂಡಿರುವ ವಿವಾದಗಳು ಒಂದೆರಡಲ್ಲ. ಸದ್ಯ ಕೈಲಾಸವಾಸಿಯಾಗಿರುವ ನಿತ್ಯಾನಂದ ತನ್ನನ್ನು ತಾನೇ ದೇವರ ಅಪರಾವತಾರ ಎಂದು ಬಿಂಬಿಸಿಕೊಳ್ಳುತ್ತಾನೆ. ಸದಾ ವಿವಾದದ ಕೇಂದ್ರಬಿಂದುವೇ ಆಗಿರುವ ನಿತ್ಯಾನಂದನ ಕುರಿತು ಒಂದಿಷ್ಟು ತಿಳಿದುಕೊಳ್ಳೋಣ.

ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ನಿತ್ಯಾನಂದ ಸ್ವಾಮಿ ದೇಶದಿಂದ ಪರಾರಿಯಾಗಿ ತನ್ನದೇ ಕೈಲಾಸ ಎಂಬ ದೇಶ ಮಾಡಿಕೊಂಡು ಅದಕ್ಕೆ ಜಗತ್ತಿನ ಅತಿ ದೊಡ್ಡ ಡಿಜಿಟಲ್ ಹಿಂದೂ ದೇಶ ಎಂಬ ಹೆಸರಿಟ್ಟಿರುವುದು ಗೊತ್ತೇ ಇದೆ. ಕೆಲವು ದಿನಗಳ ಹಿಂದಷ್ಟೇ ನಿತ್ಯಾನಂದ ತನ್ನ ದೇಶಕ್ಕೆ ರಿಸರ್ವ್ ಬ್ಯಾಂಕ್ ಮತ್ತು ಕರೆನ್ಸಿ ಆರಂಭಿಸುತ್ತಿರುವುದಾಗಿ ತಿಳಿಸಿದ್ದರು.

ಅತ್ಯಾಚಾರ, ಅಪಹರಣ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ನಿತ್ಯಾನಂದ ದೇಶದಿಂದ ಹೊರಹೋಗಿದ್ದು ಹೇಗೆ? ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಿ ಈಕ್ವೆಡಾರ್‌ನಲ್ಲಿ ದ್ವೀಪವೊಂದನ್ನು ಖರೀದಿಸಿ ಅದಕ್ಕೆ ಕೈಲಾಸ ದೇಶ ಎಂಬ ಹೆಸರಿಟ್ಟಿದ್ದು ಹೇಗೆ ಮುಂತಾದ ಅನೇಕ ಪ್ರಶ್ನೆಗಳು ಅನೇಕರನ್ನು ಕಾಡುತ್ತಿವೆ. ಇಷ್ಟೆಲ್ಲ ಚಟುವಟಿಕೆ ನಡೆಸುತ್ತಿರುವ ನಿತ್ಯಾನಂದನಿಗೆ ಪ್ರಭಾವಿಗಳ ಬೆಂಬಲ ಇರಲೇಬೇಕು ಎಂಬ ತರ್ಕವಿದೆ.

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯೊಂದಿಗೆ ನಂಟು ಹೊಂದಿರುವ ಅಂತಹ 13 ಸಂಸ್ಥೆಗಳ ವಿವರಗಳನ್ನು ಕಲೆ ಹಾಕಿರುವುದಾಗಿ 'ಇಂಡಿಯಾ ಟುಡೆ' ತಿಳಿಸಿದೆ. ಸಮಾಜೋ-ಆರ್ಥಿಕ ಗುಂಪುಗಳ ತಂಡಗಳು ನಿತ್ಯಾನಂದ ಹೇಳಿಕೊಳ್ಳುತ್ತಿರುವ ಕೈಲಾಸ ಸೆಮಿ ಡಿಜಿಟಲ್ ದೇಶಕ್ಕೆ ಬುನಾದಿಯನ್ನು ಮತ್ತು ಬ್ಯಾಂಕ್ ಹಾಗೂ ಶಿಕ್ಷಣ ಸಂಸ್ಥೆಗಳಂತಹ ಅಭಿವೃದ್ಧಿ ಚಟುವಟಿಕೆಗಳಿಗೆ ಬೆಂಬಲವನ್ನು ನೀಡುತ್ತಿವೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ನಡೆದ ಸ್ವಿಡ್ಜರ್​ಲೆಂಡನ ಜಿನಿವಾ ನಗರದಲ್ಲಿ ಫೆಬ್ರವರಿ 23ರಂದು ನಡೆದಿದ್ದ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ ವೊಂದರಲ್ಲಿ ಸ್ವಾಮಿ ನಿತ್ಯಾನಂದನ ಕೈಲಾಸ ರಾಷ್ಟ್ರದ ಪ್ರತಿನಿಧಿಗಳು ಭಾಗವಹಿಸಿದ್ದರೆಂಬ ಮಾಹಿತಿ ಲಭ್ಯವಾಗಿದೆ. ವಿಶ್ವಸಂಸ್ಥೆಯ ಜಿನೀವಾ ಕಚೇರಿಯಲ್ಲಿ ಮಹಿಳೆಯೊಬ್ಬರು ಕೇಸರಿ ಬಟ್ಟೆ, ತಲೆಯ ಮುಡಿ, ಹಣೆಯ ಮೇಲೆ ಬಿಂದಿ ಮತ್ತು ಕೊರಳಲ್ಲಿ ಜಪಮಾಲೆ ಧರಿಸಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡುತ್ತಿರುವ ವಿಡಿಯೋ ಎಲ್ಲರ ಗಮನ ಸೆಳೆದಿತ್ತು.

ಸ್ವಘೋಷಿತ ದೇವಮಾನವ, ಕಾಲ್ಪನಿಕ ಕೈಲಾಸ ರಾಷ್ಟ್ರದ ಸೂತ್ರಧಾರಿ, ಅತ್ಯಾಚಾರ ಆರೋಪಿ ಸ್ವಾಮಿ ನಿತ್ಯಾನಂದನ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆ ಸಭೆಯೊಂದರಲ್ಲಿ ತನ್ನ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಫೇಸ್‌ಬುಕ್ ಖಾತೆಯ ಪ್ರಕಾರ, ವಿಜಯಪ್ರಿಯಾ ನಿತ್ಯಾನಂದ ವಿಶ್ವಸಂಸ್ಥೆಯಲ್ಲಿ ಕೈಲಾಸ ದೇಶದ ಖಾಯಂ ರಾಯಭಾರಿಯಾಗಿದ್ದಾರೆ. ವಿಜಯಪ್ರಿಯಾ ನಿತ್ಯಾನಂದ ಅವರು ಯುನೈಟೆಡ್ ಸ್ಟೇಟ್ಸ್‌ನ ವಾಷಿಂಗ್ಟನ್ ಡಿಸಿ ನಿವಾಸಿ ಎಂದು ಬರೆದುಕೊಂಡಿದ್ದಾರೆ, ವಿಜಯಪ್ರಿಯಾ ಅವರಿಗೆ ನಿತ್ಯಾನಂದನ ದೇಶ ಕೈಲಾಸದಲ್ಲಿ ರಾಜತಾಂತ್ರಿಕ ಸ್ಥಾನಮಾನವಿದೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.