ಅಪ್ಪು ಇಲ್ಲವಾದ ಬಳಿಕ ಈ ಎರಡು ಹೆಣ್ಣುಮಕ್ಕಳ ಜೀವನದ ದಾರಿ ಹೇಗಿದೆ, ಶಿವಣ್ಣ ಕ.ಣ್ಣೀರ ಮಾತು

 | 
Hd

ಇನ್ಮುಂದೆ ಅಪ್ಪು ಸಮಾಧಿಯ ಬಳಿ ನಾನು ಹೋಗಲ್ಲ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ. ಹೌದು ಅಪ್ಪು.. ಅಪ್ಪು.. ಅಪ್ಪು.. ಹೀಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರು ಕನ್ನಡಿಗರ ನೆಲಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಹಬ್ಬಿಹೋಗಿದೆ. ಅದರಲ್ಲೂ ಕಳೆದ 2 ವರ್ಷಗಳಲ್ಲಿ, ಕನ್ನಡಿಗರ ಗುಣ & ಕೀರ್ತಿಯ ಸಿರಿ ಜಗತ್ತಿಗೆ ಪಸರಿಸಲು ಪುನೀತ್ ರಾಜ್‌ಕುಮಾರ್ ಕೊಡುಗೆ ದೊಡ್ಡದಾಗಿದೆ. ತಮ್ಮ ಜೀವನದ ಹಾದಿ ಮುಗಿಸಿ ಹೋಗಿದ್ದರೂ ಪುನೀತ್ ಅವರು ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಜರಾಮರ.

 ಹೀಗಿದ್ದಾಗ ಪುನೀತ್ ಅವರ ಸಹೋದರರಾದ ನಟ ಶಿವರಾಜ್‌ಕುಮಾರ್ ಮನಸ್ಸು ತುಂಬಿ ಮಾತನಾಡಿದ್ದಾರೆ.
ಅದು 2021ರ ಅಕ್ಟೋಬರ್ 29, ಯಾರೂ ಕನಸು & ಮನಸ್ಸಿನಲ್ಲೂ ಊಹೆ ಮಾಡಲಾಗದ ಘಟನೆ ನಡೆದು ಹೋಗಿತ್ತು. ಕೋಟಿ ಕೋಟಿ ಅಭಿಮಾನಿಗಳ ಪಾಲಿಗೆ ಅಕ್ಷರಶಃ ದೇವರಾಗಿ, ಸಮಾಜ ಸೇವೆ ಮೂಲಕ ಹೆಸರು ಮಾಡುತ್ತಿದ್ದ ನಟ ಪುನೀತ್ ರಾಜ್‌ಕುಮಾರ್ ಅವರು ಈ ನಮ್ಮ ಕನ್ನಡ ನಾಡನ್ನು ಬಿಟ್ಟು ಹೋಗಿದ್ದರು. ಅಂದಿಗೆ ಇಡೀ ಭಾರತ ಅಪ್ಪು ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿತ್ತು. ಹೀಗೆ ಅಪ್ಪು ನಮ್ಮನ್ನ ಬಿಟ್ಟು ಹೋಗಿ ಈಗಾಗಲೇ 2 ವರ್ಷ ಕಳೆದು ಹೋಗಿದೆ. ಹೀಗಿದ್ದರೂ ಅಪ್ಪು ಬಂದೇ ಬರ್ತಾರೆ ಅಂತಾ ಅವರ ಅಣ್ಣ, ನಟ ಶಿವರಾಜ್‌ಕುಮಾರ್ ಇಂದಿಗೂ ಕಾಯುತ್ತಿದ್ದಾರಂತೆ.

ಹೌದು ನಟ ಶಿವರಾಜ್‌ಕುಮಾರ್ ಬಹಿರಂಗವಾಗಿ ಕಣ್ಣೀರು ಹಾಕಿದ್ದು ಕನ್ನಡಿಗರು ನೋಡೇ ಇರಲಿಲ್ಲ. ಆದ್ರೆ ಅವರ ತಮ್ಮ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣ ಶಿವಣ್ಣ ಅವರಿಗೆ ಅಪಾರ ನೋವು ಕೊಟ್ಟಿತ್ತು. ಅಪ್ಪು ಅವರು ಈ ಲೋಕ ಬಿಟ್ಟು ಹೋದ ದಿನದಿಂದ ಹಿಡಿದು, ಇಂದಿನವರೆಗೂ ನಟ ಶಿವಣ್ಣ ಕಣ್ಣೀರು ಹಾಕುತ್ತಿದ್ದಾರೆ. ಹೀಗಿದ್ದಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವ್ರು, ಪದೇ ಪದೇ ಯಾಕೆ ಅಪ್ಪು ಅವರ ಸಮಾಧಿಯ ಬಳಿ ಹೋಗೋದಿಲ್ಲ? ಅನ್ನೋ ಪ್ರಶ್ನೆಗೆ ಕೂಡ ಶಿವಣ್ಣ ಉತ್ತರ ನೀಡಿದ್ದಾರೆ.

ನಟ ಶಿವಣ್ಣ ಅವರ 2ನೇ ತಮಿಳು ಸಿನ್ಮಾ 'ಕ್ಯಾಪ್ಟನ್ ಮಿಲ್ಲರ್' ರಿಲೀಸ್‌ಗೆ ಸಿದ್ಧವಾಗಿ ನಿಂತಿದೆ. ಹೀಗಿದ್ದಾಗ ತಮಿಳು ಖಾಸಗಿ ಸಂದರ್ಶನ ವೇಳೆ ನಟ ಶಿವಣ್ಣ, ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶಕರು ಪುನೀತ್ ಅವರ ಹೆಸರು ಹೇಳುತ್ತಿದ್ದಂತೆ, ನಟ ಶಿವರಾಜ್‌ಕುಮಾರ್ ಭಾವುಕರಾದರು. ಹಾಗೇ ಅಪ್ಪು ಅವರ ಬಗ್ಗೆ ಮಾತನಾಡಿದ ನಟ ಶಿವಣ್ಣ, ಪುನೀತ್ ಅವರ ಟ್ಯಾಲೆಂಟ್‌ಗೆ ಯಾರನ್ನೂ ಕಂಪೇರ್ ಮಾಡಲು ಆಗಲ್ಲ. ಅಪ್ಪು ಸಣ್ಣ ಹುಡುಗನಿದ್ದಾಗಲೇ ಸೂಪರ್ ಸ್ಟಾರ್. ಇಷ್ಟೆಲ್ಲಾ ಇದ್ದರೂ ಅಪ್ಪು ಅಭಿಮಾನಿಗಳಿಗೆ, ಹಾಗೂ ಈ ಸಮಾಜಕ್ಕೆ ಮಾದರಿ ಅದರು ಎಂದಿದ್ದಾರೆ ಶಿವರಾಜ್‌ಕುಮಾರ್.

ಇನ್ನು ಇದೇ ಸಮಯದಲ್ಲಿ ಪವರ್ ಸ್ಟಾರ್ ಪುನೀತ್ ಅವರ ನಗುವಿನ ವಿಚಾರ ಪ್ರಸ್ತಾಪಿಸಿ, ಅಪ್ಪು ಸ್ಮೈಲ್ ಬಗ್ಗೆ ನಟ ಶಿವಣ್ಣ ಮಾತನಾಡಿದರು. ಅಪ್ಪು ಅವರ ನಗು ಎಲ್ಲಾ ಕಡೆಗೂ ಹಬ್ಬಿದೆ. ನಾನು ಹೊರ ದೇಶಕ್ಕೆ ಹೋದಾಗಲೂ ಅದರ ಬಗ್ಗೆ ಮಾತನಾಡುತ್ತಾರೆ. ಏನಿದು ಇಂತಹ ಅದ್ಭುತ ನಗು? ಎಂದು ನನ್ನ ಪ್ರಶ್ನೆ ಮಾಡುತ್ತಾರೆ. ಹೀಗಿದ್ದರೂ ಅಪ್ಪು ಎಲ್ಲಿಗೂ ಹೋಗಿಲ್ಲ, ಅವರು ಬಂದೇ ಬರ್ತಾರೆ. ಹೀಗಾಗಿ ನಾನು ಕೂಡ ಕಾಯ್ತಾ ಇದ್ದೀನಿ. ಅವರ  ಸಮಾಧಿ ಸ್ಥಿತಿ ನೋಡಲು ಸಾಧ್ಯವಿಲ್ಲ.ಅವರು ಇಂದಲ್ಲ ನಾಳೆ ಬಂದೇ ಬರ್ತಾರೆ ಅಂತಾ ಕಾಯ್ತಾ ಇರ್ತೀನಿ. ಯಾಕಂದ್ರೆ ಕಾಯುವುದರಲ್ಲಿ ಇರುವ ಖುಷಿ ಬೇರೆಯದರಲ್ಲಿ ಸಿಗಲ್ಲ ಎಂದಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.