ಕೊರಗಜ್ಜನ ಬಳಿ ದರ್ಶನ್ ಇಟ್ಟ ಬೇಡಿಕೆ ಏನು ಗೊ.ತ್ತಾ; ಬೆ.ಚ್ಚಿಬಿದ್ದ ಕರುನಾಡು
ನಟ ದರ್ಶನ್ ಇತ್ತೀಚೆಗಷ್ಟೇ ಕುಟುಂಬದ ಜತೆಗೆ ಆಂಧ್ರದ ಕಾಳಹಸ್ತೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಂದಿದ್ದರು. ಬರ್ತ್‌ಡೇಗೂ ಮುನ್ನ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದು ಮರಳಿದ್ದರು. ಇದೀಗ ಕೊರಗಜ್ಜನ ಸನ್ನಿಧಾನಕ್ಕೆ ಮೊದಲ ಸಲ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದರ್ಶನ್ ಆಗಮಿಸುತ್ತಿದ್ದಂತೆ, ಅವರನ್ನು ದೈವ ಸನ್ನಿಧಾನದ ವತಿಯಿಂದ ಸತ್ಕರಿಸಲಾಗಿದೆ. ದೇವಸ್ಥಾನ ಮಂಡಳಿಯಿಂದ ನೆನಪಿನ ಕಾಣಿಕೆ ನೀಡಲಾಗಿದೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದರ್ಶನ್, ಎಲ್ಲರೂ ಹೇಳ್ತಿದ್ರು, ಕೊರಗಜ್ಜನ ದೈವ ಸ್ಥಾನಕ್ಕೆ ಭೇಟಿ ನೀಡುವಂತೆ. ಹಾಗಾಗಿ ಮೊದಲ ಸಲ ಸ್ನೇಹಿತರ ಜತೆಗೆ ಆಗಮಿಸಿದ್ದೇವೆ. ಈ ಹಿಂದೆ ಮಂಗಳೂರಿಗೆ ಸಿನಿಮಾ ಸೇರಿ ಬೇರೆ ಬೇರೆ ಕೆಲಸದ ನಿಮಿತ್ತ ಆಗಮಿಸಿದ್ದೆ. ಆದರೆ, ಇಲ್ಲಿ ಬರಲು ಆಗಿರಲಿಲ್ಲ. ಸಿನಿಮಾ ಶೂಟಿಂಗ್ ಬಿಡುವು ಮಾಡಿಕೊಂಡು ಬಂದಿದ್ದೇವೆ. ಸದ್ಯ ಇಲ್ಲಿ ಬಂದಿರುವುದಕ್ಕೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳಲು ಬಂದೆ ಎಂದಿದ್ದಾರೆ ದರ್ಶನ್.
ಇನ್ನು ನಟ ದರ್ಶನ್ ಕೊರಗಜ್ಜನ ದೈವ ಸನ್ನಿಧಾನಕ್ಕೆ ಆಗಮಿಸಿದ ಸುದ್ದಿ ತಿಳಿದ ಅವರ ಫ್ಯಾನ್ಸ್, ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಬೇಕೆಂದು ಆಗಮಿಸಿದ್ದರು. ನೂರಾರು ಅಭಿಮಾನಿಗಳ ಆಗಮನದ ಹಿನ್ನೆಲೆಯಲ್ಲಿ ಪೊಲೀಸ್ ತುಕಡಿಯೂ ಸ್ಥಳದಲ್ಲಿತ್ತು. ದೇವರ ದರ್ಶನದ ಬಳಿಕ ದರ್ಶನ್, ಚಿಕ್ಕಣ್ಣ, ಯಶಸ್ ಸೂರ್ಯ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ನೆನಪಿಕನ ಕಾಣಿಕೆಯನ್ನೂ ನೀಡಿ ಸತ್ಕರಿಸಲಾಯ್ತು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಕಾಟೇರ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ನಟ ದರ್ಶನ್, ಸದ್ಯ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರದ ಚಿತ್ರೀಕರಣದ ಗ್ಯಾಪ್‌ನಲ್ಲಿಯೇ ಇದೀಗ ಕೊರಗಜ್ಜನ ದರ್ಶನ ಪಡೆದಿದ್ದಾರೆ.ಮೊದಲ ಬಾರಿಗೆ ಕುತ್ತಾರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದೇನೆ. ಮಂಗಳೂರಿಗೆ ಸುಮಾರು ಸಲ ಬಂದಿದ್ದೆ. ಆದರೆ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಹಾಗೆ ನೋಡಿಕೊಂಡು ಹೋಗೋಣ ಅಂತ ಬಂದೆ ಎಂದು ಅವರು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.