ನನ್ನ ಗಂಡ ಏನೂ ಹೇಳಿದರು ಕಣ್ಣುಮುಚ್ಚಿ ಮಾಡುತ್ತೇನೆ; ಮುಸ್ಲಿಮ್ ಗಂಡನ ಮೇಲೆ ಸಂಜನಾಗೆ ಬಹು ಪ್ರೀತಿ

 | 
Us

ದರ್ಶನ್ ಬಂಧನದ ಬಳಿಕ ನಟಿ ಸಂಜನಾ ಗಲ್ರಾನಿ ಮಾಧ್ಯಮಗಳಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ. ಡ್ರಗ್ ಕೇಸ್ ಬಗ್ಗೆ ತನ್ನದೇನು ತಪ್ಪಿಲ್ಲ ಅಂತ ಸಾರಿ ಸಾರಿ ಹೇಳುತ್ತಿದ್ದಾರೆ. ಆರೋಪಿಯಾಗಿ ಜೈಲಿಗೆ ಹೋಗಿ ಬಂದ ಮಾತ್ರಕ್ಕೆ ಅಪರಾಧಿ ಆಗುವುದಿಲ್ಲ ಎಂದು ಪ್ರತಿ ಸಂದರ್ಶನದಲ್ಲೂ ಹೇಳುತ್ತಿದ್ದಾರೆ. ಈಗ ಮತ್ತೊಂದು ಸಂದರ್ಶನ ನೀಡಿದ್ದು , ಅದರಲ್ಲಿ ತನ್ನ ಮದುವೆ ಹಾಗೂ ಪತಿಯೊಂದಿಗಿನ ಸಂಬಂಧದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಂಜನಾ ಗಲ್ರಾನಿ ಈ ಹಿಂದೆನೇ ಹಲವು ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಫಿಲ್ಮಿಬೀಟ್ ಜೊತೆ ಮಾತಾಡುವಾಗಲೂ ಡ್ರಗ್ ಕೇಸ್‌ನಲ್ಲಿ ಸಂಜನಾ ಹಾಗೂ ರಾಗಿಣಿ ಹೆಸರು ಅಷ್ಟೇ ಕಾಣಿಸಿತ್ತಾ? ಇಲ್ಲಿ ಯಾರೂ ಗಂಡಸರು ಇರಲಿಲ್ವಾ? ಎಂದು ಕಿಡಿಕಾರಿದ್ದರು. ಈಗ ಆರ್ ಜೆ ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸೀಕ್ರೆಟ್ ಆಗಿ ಮದುವೆ ಆಗಿದ್ದರಿಂದ ಹಿಡಿದು, ಪತಿ ಡೆತ್ ನೋಟ್‌ಗೆ ಸಹಿ ಹಾಕು ಅಂದರೂ ಹಾಕುತ್ತೇನೆಂದು ಹೇಳುವವರೆಗೂ ಮಾತಾಡಿದ್ದಾರೆ.

ಬೇರೆ ಧರ್ಮದ ವ್ಯಕ್ತಿಯನ್ನು ಮದುವೆ ಆಗುವಾಗ ಪತಿಯ ಅಮ್ಮ ಹೇಗೆ ಪ್ರತಿಕ್ರಿಯೆ ನೀಡಿದ್ದರು ಅನ್ನುವುದನ್ನು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಪ್ರೀತಿಯನ್ನು ಅವರ ಅತ್ತೆಗೆ ಅರ್ಥ ಮಾಡಿಸುವುದು ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ. ಮದುವೆ ಆದಾಗ ನನ್ನ ಅತ್ತೆ ಬದುಕಿದ್ದರು. ಅವರಿಗೆ 82 ವರ್ಷ ಆಗಿತ್ತು. ಅವರು ಹಳೆಯ ವಿಚಾರ ಇಟ್ಟುಕೊಂಡವರು. ಅವರಿಗೆ ಅರ್ಥ ಮಾಡಿಸುವುದಕ್ಕೆ ಆಗುವುದಿಲ್ಲ. 

ಅವರಿಗೆ ಇವಳು ಹೊರಗಿನವಳು ನಮಗೆ ಹೇಗೆ ಹೊಂದಾಣಿಕೆ ಆಗುತ್ತಾಳೆ ಅಂತ ಅನಿಸಿತ್ತು. ನಾನು ನನ್ನ ಗಂಡನ ಮುಖ ನೋಡಿದೆ. ನನ್ನ ಗಂಡ ಕನ್ವರ್ಟ್ ಆಗಿ ಅಂತ ಒಂದು ಮಾತೂ ಹೇಳಿಲ್ಲ ಎಂದು ಹೇಳಿಕೊಂಡಿದ್ದಾರೆ.ಇದೇ ಸಂದರ್ಶನದಲ್ಲಿ ತನ್ನ ಗಂಡನ ಮೇಲೆಷ್ಟು ಪ್ರೀತಿ ಇಟ್ಟುಕೊಂಡಿದ್ದೇನೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ನನ್ನ ಗಂಡನ ಮೇಲೆ ನನಗೆ ಎಷ್ಟು ಪ್ರೀತಿ ಅಂದರೆ, ಡೆತ್ ನೋಟ್ ಮೇಲೆ ಒಂದು ಸಹಿ ಮಾಡು ಸಂಜನಾ ಸತ್ತು ಹೋಗು ಅಂದರೂ ನಾನು ಸಹಿ ಮಾಡಿಬಿಡುತ್ತೇನೆ. 

ನನ್ನ ಗಂಡನ ಮೇಲೆ ನಾನು ಪರಿಶುದ್ಧ ಪ್ರೀತಿ ಇಟ್ಟುಕೊಂಡಿದ್ದೇನೆ. ಹಾಗೇ ಅವರ ಪ್ರೀತಿ ಕೂಡ ಅಷ್ಟೇ ಪರಿಶುದ್ಧವಾಗಿದೆ. 2006ರಿಂದ ನಾವು ಒಟ್ಟಿಗೆ ಇದ್ದೇವೆ. ಸೆಕೆಂಡ್ ಪಿಯುಸಿ ರಜೆಯಲ್ಲಿ ನಾನು ಅವರೊಂದಿಗೆ ಇರುತ್ತಿದ್ದೆ ಎಂದು ರಿವೀಲ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.