ಬಿಗ್ ಬಾಸ್ ಮನೆಯಲ್ಲಿ ಏನು ನಡೆಯುತ್ತಿದೆ, ಕಾರ್ತಿಕ್ ಹಾಗೂ ಸಂಗೀತ ಆಟ ತುಂಟಾಟ
ನಿನ್ನೆಯ ಹಬ್ಬದ ಸಂಭ್ರಮ, ಇಂದಿನ ಕ್ಯಾಪ್ಟನ್ಸಿ ಟಾಸ್ಕ್‌ನ ಬಿಸಿಗೆ ಕರಗಿದೆ. ಅಗ್ಗಷ್ಟಿಕೆಯೆದುರು ನೋವು ಹಂಚಿಕೊಳ್ಳುತ್ತ ಒಂದಾಗಿದ್ದ ಸ್ಪರ್ಧಿಗಳ ನಡುವೆ ಮತ್ತೀಗ ಕಿಡಿ ಹೊತ್ತಿಕೊಂಡಿದೆ. ಮನೆಯ ಕ್ಯಾಪ್ಟನ್ ಆಗಲು ಅರ್ಹರಾದ ಇಬ್ಬರು ಸದಸ್ಯರನ್ನು ಮನೆಯ ಎಲ್ಲ ಸದಸ್ಯರೂ ಆರಿಸಬೇಕು ಎಂದು ಬಿಗ್‌ಬಾಸ್ ಆದೇಶ ನೀಡಿದ್ದಾರೆ. ಸಂಗೀತಾ, ತಾನು ಲೀಡರ್ ಆಗಬೇಕು ಅಂದುಕೊಂಡಿದ್ದೇನೆ ಎಂದು ಘೋಷಿಸಿದ್ದಾರೆ.
ಆದರೆ ಅವರ ಆಪ್ತಸ್ನೇಹಿತ ಕಾರ್ತಿಕ್ ಅವರೇ ನಮ್ರತಾ ಮತ್ತು ತನಿಷಾ ಅವರನ್ನು ಕ್ಯಾಪ್ಟನ್ ಆಗಲು ಅರ್ಹರು ಎಂದು ಹೇಳಿ ಸೂಚಿಸಿದರು. ಇದು ಸಂಗೀತಾ ಅವರನ್ನು ಕೆರಳಿಸಿದೆ. ಮನಸಲ್ಲಿದ್ದುದನ್ನು ನೇರವಾಗಿ ಹೇಳಿಬಿಡುವ ಅಭ್ಯಾಸ ಇರುವ ಸಂಗೀತಾ ಈ ವಿಷಯವನ್ನೂ ಕಾರ್ತಿಕ್ ಬಳಿ ನೇರವಾಗಿಯೇ ಕೇಳಿದ್ದಾರೆ. ಕಾರ್ತಿಕ್ ಮತ್ತು ಸಂಗೀತಾ ಮಧ್ಯ ಕಿಡಿ ಹೊತ್ತಿಕೊಂಡ ದೃಶ್ಯವು ಫ್ರೋಮೊದಲ್ಲಿ ಕಾಣಬಹುದಾಗಿದೆ.
ಆಯ್ಕೆ ಸೂಚನಾ ಪ್ರಕ್ರಿಯೆ ಮುಗಿದ ಮೇಲೆ ಸಂಗೀತಾ, ನೀನ್ಯಾಕೆ ನನ್ನನ್ನು ಆಯ್ಕೆ ಮಾಡಿಕೊಂಡಿಲ್ಲ ಎಂದು ಕಾರ್ತಿಕ್ ಅವರ ಬಳಿ ಕೇಳಿದ್ದಾರೆ. ಹಾಗೆಯೇ, ಯಾಕೆ ನಮ್ರತಾ? ಎಂದೂ ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ ನೇರವಾಗಿ ಉತ್ತರಿಸದೆ, ಕೋಪ ಯಾಕೆ ಮಾಡ್ಕೋತಿಯಾ? ಎಂದು ಅನುನಯಿಸಲು ಹೋಗಿದ್ದಾರೆ.
ಅಲ್ಲದೆ ಇವರಿಬ್ಬರ ಕ್ಯೂಟ್ ಫೈಟ್ ಮುಂದುವರೆದಿದ್ದು ಗುರುವಾರದ ಎಪಿಸೋಡ್‌ನಲ್ಲಿ ಕೂಡಾ ಇದೇ ನಡೆಯಿತು. ಸ್ನೇಹಿತ್‌ಗೆ ನಮ್ರತಾ ಮೇಲೆ ಕ್ರಷ್ ಆಗಿದೆ ಎಂಬ ವಿಚಾರ ತಿಳಿದ ವಿನಯ್ ಹಾಗೂ ಕಾರ್ತಿಕ್ ಅವರ ಕಾಲೆಳೆದಿದ್ದಾರೆ. ಸ್ನೇಹಿತ್‌ಗೆ ರಾಖಿ ಕಟ್ಟುವಂತೆ ನಮ್ರತಾಗೆ ಹೇಳಿದ್ದಾರೆ. ಹಾಗೇ ನಮ್ರತಾ, ನನಗೆ ಸ್ನೇಹಿತ್ ನಡವಳಿಕೆಗಳಿಂದ ಬಹಳ ಬೇಸರ ಆಯ್ತು ಎನ್ನುವಂತೆ ಡ್ರಾಮಾ ಮಾಡಿದ್ದಾರೆ. ಇದೆಲ್ಲಾ ನಿಜ ಎಂದು ತಿಳಿದು ಸ್ನೇಹಿತ್ ಬಹಳ ಅಪ್‌ಸೆಟ್ ಆಗುತ್ತಾನೆ.
ಆದರೆ ಎಲ್ಲರೂ ಸೇರಿ ನನಗೆ ಪ್ರಾಂಕ್ ಮಾಡಿದ್ದು ಎಂಬ ನಿಜ ಸ್ನೇಹಿತ್‌ಗೆ ತಿಳಿಯುತ್ತದೆ. ಇಷ್ಟೆಲ್ಲಾ ಡ್ರಾಮಾ ಆದ ನಂತರ ಸಂಗೀತಾ,ಯಾವುದೋ ದಾರ ತಂದು ಕಾರ್ತಿಕ್‌ಗೆ ಕಟ್ಟಿದ್ದಾರೆ. ಇದರಿಂದ ನನಗೆ ಬೇಸರವಾಯ್ತು ಎಂದು ಕಾರ್ತಿಕ್ ಮನಸ್ಸಿನ ಭಾವನೆ ವ್ಯಕ್ತಪಡಿಸಿದ್ದಾರೆ. ಆಗ ಸಂಗೀತಾ, ನಮ್ರತಾ ಇಬ್ಬರೂ ಸಮಾಧಾನ ಮಾಡಿದ್ದಾರೆ. ಮಚ್ಚಾ ನಾನು ನಿನ್ನ ತಂಗಿಯನ್ನು ಮದುವೆ ಆಗುತ್ತೇನೆ, ನೀನು ನನ್ನ ತಂಗಿಯನ್ನು ಮದುವೆ ಆಗು ಎಂದು ಕಾರ್ತಿಕ್ ಹೇಳಿದ ಮಾತಿನಿಂದ ಎಲ್ಲರೂ ನಗುತ್ತಾರೆ.
ನಂತರ ಸಂಗೀತಾ ಯಾವುದೋ ವಿಚಾರಕ್ಕೆ ನೋವಾಗಿ ವಾಶ್‌ರೂಮ್‌ನಲ್ಲಿ ಅಳುವಂತೆ ಡ್ರಾಮಾ ಮಾಡಿದ್ದಾರೆ. ಹೀಗೆ ಬಿಗ್ ಬಾಸ್ ಮನೆಯಲ್ಲಿ ಗುರುವಾರ ಪ್ರಾಂಕ್ ಸದ್ದು ಮಾಡಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.