ದ್ವಾರಕೀಶ್ ಎರಡನೇ ಪತ್ನಿ ಬೇಕು ಎಂದಾಗ ಮೊದಲ ಪ.ತ್ನಿ ಹೇಳಿದ್ದೇನು ಗೊ ತ್ತಾ

 | 
Hj

ಕನ್ನಡ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಅಂಬುಜಾ. ಎರಡನೇ ಪತ್ನಿ ಶೈಲಜಾ. ಮೊದಲ ಪತ್ನಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದರೂ, ದ್ವಾರಕೀಶ್ ಎರಡನೇ ಮದುವೆಯಾದರು. ಎರಡನೇ ಮದುವೆಯಾದಾಗ ಮೊದಲ ಪತ್ನಿ ಅಂಬುಜಾ ಏನಂತ ಹೇಳಿದ್ದರು ಅಂದ್ರೆ ಆಶ್ಚರ್ಯ ಪಡ್ತೀರಿ.

ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಅಂಬುಜಾ ಅವರನ್ನ ದ್ವಾರಕೀಶ್ ಪ್ರೀತಿಸಿ ಮದುವೆಯಾಗಿದ್ದರು. ಚಿತ್ರದುರ್ಗ ಮೂಲದ ಅಂಬುಜಾ ಚೆನ್ನಾಗಿ ಓದಿಕೊಂಡಿದ್ದ ಮಹಿಳೆ. ಆ ಕಾಲಕ್ಕೆ ಎಂಎಸ್‌ಸಿ ವ್ಯಾಸಂಗ ಮಾಡಿದ್ದ ಅಂಬುಜಾ ಕಾಲೇಜ್‌ವೊಂದರಲ್ಲಿ ಲೆಕ್ಚರರ್ ಆಗಿದ್ದರು. ಮದುವೆಯಾದ್ಮೇಲೆ ವೃತ್ತಿ ಮುಂದುವರೆಸಲು ಅಂಬುಜಾ ಅವರನ್ನ ದ್ವಾರಕೀಶ್ ಬಿಡಲಿಲ್ಲ.

ಚಿತ್ರರಂಗಕ್ಕೆ ಕಾಲಿಡುವ ಸಮಯ ಬಂದಾಗ, ಪತ್ನಿ ಅಂಬುಜಾ ಅವರನ್ನ ದ್ವಾರಕೀಶ್‌ ಕೇಳಿದ್ದರಂತೆ. ಆಗ, ನಿಮ್ಮಿಷ್ಟವೇ ನನ್ನಿಷ್ಟ. ನೀವೇ ನನಗೆ ಪ್ರಪಂಚ. ನಿಅಮ್ಮನ್ನ ಬಿಟ್ಟರೆ ನನಗೆ ಬೇರೆ ಏನೂ ಬೇಡ ಅಂತ ಪತಿಗೆ ಅಂಬುಜಾ ಹೇಳಿದ್ದರಂತೆ. ಹಾಗ್ನೋಡಿದ್ರೆ, ದ್ವಾರಕೀಶ್ ಅವರಿಗಿಂತ ಅಂಬುಜಾ 6 ತಿಂಗಳು ದೊಡ್ಡವರು. 

ದ್ವಾರಕೀಶ್ ಅವರನ್ನ ಪ್ರಾಣಕ್ಕಿಂತ ಹೆಚ್ಚಾಗಿ ಅಂಬುಜಾ ಪ್ರೀತಿಸುತ್ತಿದ್ದರಂತೆ. ಪತಿ ದ್ವಾರಕೀಶ್ ಅವರನ್ನ ಅಂಬುಜಾ ಎಂದೂ ಪ್ರಶ್ನಿಸಿದವರಲ್ಲ. ದ್ವಾರಕೀಶ್ ಅವರಿಗೆ ಇಷ್ಟದ ಅಡುಗೆಗಳನ್ನ ಮಾಡಿಕೊಡುವುದರಲ್ಲಿ ಅಂಬುಜಾ ಸದಾ ಮುಂದು. ಅಂದ್ಹಾಗೆ, ದ್ವಾರಕೀಶ್ ಹಾಗೂ ಅಂಬುಜಾ ದಂಪತಿಗೆ ಐದು ಜನ ಮಕ್ಕಳು - ಸಂತೋಷ್, ಯೋಗೀಶ್, ಗಿರೀಶ್, ಸುಖೀಶ್ ಹಾಗೂ ಅಭಿಲಾಷ್. ದ್ವಾರಕೀಶ್ ಹಾಗೂ ಅಂಬುಜಾ 62 ವರ್ಷಗಳ ಕಾಲ ಸುದೀರ್ಘ ಸಂಸಾರ ನಡೆಸಿದ್ದರು.

ದ್ವಾರಕೀಶ್ ಹಾಗೂ ಅಂಬುಜಾ ಅವರದ್ದು ಅನ್ಯೋನ್ಯ ದಾಂಪತ್ಯ. ಚಿತ್ರರಂಗದಿಂದ ಅಂಬುಜಾ ದೂರ ಇದ್ದರೂ, ಪತಿ ಮೇಲೆ ಅವರಿಗೆ ಅಪಾರ ಪ್ರೀತಿ. ಪತಿ, ಮನೆ, ಮಕ್ಕಳ ಮೇಲೆ ಅತೀವ ಕಾಳಜಿ ವಹಿಸುತ್ತಿದ್ದವರು ಅಂಬುಜಾ. ಹೀಗಿದ್ದರೂ ಶೈಲಜಾ ಅವರನ್ನು ಎರಡನೇ ಮದುವೆ ಆಗಬೇಕಾದ ಪರಿಸ್ಥಿತಿ ದ್ವಾರಕೀಶ್ ಅವರಿಗೆ ಎದುರಾಯ್ತು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.