ಯೌವನದಲ್ಲಿದ್ದಾಗ ನನ್ನ ಆ ಜಾಗಕ್ಕೆ ಕೈ ಇಟ್ಟು ಬರ್ತೀಯಾ ಎನ್ನುತ್ತಿದ್ದರು; ಸೂರ್ಯವಂಶ ನ ಟಿ

 | 
U

ನಟಿ ಇಶಾ ಕೊಪ್ಪಿಕರ್‌ಗೆ ಈಗ 47 ವರ್ಷ ವಯಸ್ಸು. ಕನ್ನಡದ ಓ ನನ್ನ ನಲ್ಲೆ, ಸೂರ್ಯವಂಶ ಸಿನಿಮಾಗಳಲ್ಲಿನ ಅವರ ನಟನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಂದಹಾಗೆ, ಇಂತಹ ಜನಪ್ರಿಯ ನಟಿಯ ಆರಂಭಿಕ ಜೀವನ ಅಷ್ಟೊಂದು ಸುಲಭದ್ದಾಗಿರಲಿಲ್ಲ. 18ನೇ ವಯಸ್ಸಿನಲ್ಲೇ ಬಾಲಿವುಡ್‌ನಲ್ಲಿ ಅವರಿಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತಂತೆ. ಆ ಬಗ್ಗೆ ಇಶಾ ಕೊಪ್ಪಿಕರ್ ಮನಬಿಚ್ಚಿ ಮಾತನಾಡಿದ್ದಾರೆ.

ನನಗೆ ಆಗ 18 ವರ್ಷ ವಯಸ್ಸು. ಒಬ್ಬ ಸೆಕ್ರೆಟರಿ ಮತ್ತು ಓರ್ವ ನಟ ನನ್ನೊಂದಿಗೆ ಪಾತ್ರಕ್ಕಾಗಿ ಪಲ್ಲಂಗದ ಆಫರ್ ನೀಡಿದ್ದರು. ನಟರ ಜೊತೆಗೆ ಫ್ರೆಂಡ್ಲಿ ಆಗಿ ಇರಬೇಕು ಎಂದು ಅವರು ನನಗೆ ಸೂಚಿಸಿದ್ದರು. ನಾನು ತುಂಬ ಫ್ರೆಂಡ್ಲಿ, ಆದರೆ ನೀವು ಯಾವ ಅರ್ಥದಲ್ಲಿ ಫ್ರೆಂಡ್ಲಿ ಆಗಿರಬೇಕು ಎಂದು ಹೇಳುತ್ತಿದ್ದೀರಿ ಅಂತ ಅವರಿಗೆ ಪ್ರಶ್ನೆ ಮಾಡಿದ್ದೆ ಎಂದು ಇಶಾ ಕೊಪ್ಪಿಕರ್ ಹೇಳಿಕೊಂಡಿದ್ದಾರೆ.

ಇನ್ನು ಇಶಾ ಕೊಪ್ಪಿಕರ್ ತಮ್ಮ 23ನೇ ವಯಸ್ಸಿನಲ್ಲಿ ಆದ ಕಾಸ್ಟಿಂಗ್‌ ಕೌಚ್‌ನ ಕರಾಳತೆ ಬಗ್ಗೆ ಮಾತನಾಡಿದ್ದಾರೆ. ನನಗೆ ಆಗ 23 ವರ್ಷ ವಯಸ್ಸು. ಆಗ ಒಬ್ಬ ನಟ ನನಗೆ ಭೇಟಿಯಾಗುವಂತೆ ಹೇಳಿದ. ಆದರೆ ಡ್ರೈವರ್ ಅಥವಾ ಬೇರೆ ಯಾರನ್ನೂ ಜೊತೆಗೆ ಕರೆದುಕೊಂಡು ಬರಬಾರದು, ಏಕಾಂಗಿಯಾಗಿ ಒಬ್ಬಳೇ ಬರಬೇಕು ಎಂದು ಸೂಚಿಸಿದ್ದ. ಅಲ್ಲದೆ, ಅವರು ನಿನ್ನ ಬಗ್ಗೆ ವದಂತಿಗಳನ್ನು ಹಬ್ಬಿಸಲು ಪ್ರಾರಂಭಿಸಿದ್ದಾರೆ ಅಂತ ಕಾರಣ ಬೇರೆ ನೀಡಿದ್ದ! ಆದರೆ ನಾನು ಆತನಿಗೆ, ಏಕಾಂಗಿಯಾಗಿ ಬರುವುದಕ್ಕೆ ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದೆ. ಹಿಂದಿ ಚಿತ್ರರಂಗದಲ್ಲಿ ಆಗ ಆತ ಓರ್ವ ಎ ದರ್ಜೆಯ ನಟನಾಗಿದ್ದ ಎಂದಿದ್ದಾರೆ ಇಶಾ ಕೊಪ್ಪಿಕರ್.

ಕಾಸ್ಟಿಂಗ್ ಕೌಚ್ ವಿಚಾರಗಳಿಗೆ ಸಂಬಂಧಿಸಿದಂತೆ ಇಶಾ ಕೊಪ್ಪಿಕರ್ ನೇರವಾಗಿ ಮಾತನಾಡುತ್ತಾರೆ. ಈ ಹಿಂದೆಯೂ ಕೂಡ ಒಮ್ಮೆ ಇದರ ಬಗ್ಗೆ ಮಾತನಾಡಿದ್ದರು. ತಮ್ಮ ದಾಂಪತ್ಯ ಬದುಕಿನಲ್ಲಿ ಸಮಸ್ಯೆ ಮಾಡಿಕೊಂಡಿದ್ದ ನಟನೊಬ್ಬ ಇಶಾ ಕೊಪ್ಪಿಕರ್‌ಗೆ ಒಂಟಿಯಾಗಿ ಬಂದು ಭೇಟಿಯಾಗುವಂತೆ ಹೇಳಿದ್ದ. ನಿನ್ನ ಜೊತೆ ಯಾರನ್ನೂ ಕರೆದುಕೊಂಡು ಬರಬೇಡ, ಏಕಾಂಗಿಯಾಗಿ ಬಾ ಎಂದು ಆ ನಟ ಹೇಳಿದ್ದ. ಆದರೆ ನನಗೆ ಅದು ಸರಿ ಕಾಣಿಸಲಿಲ್ಲ. 

ಕೂಡಲೇ ನಿರ್ಮಾಪಕರಿಗೆ ಕರೆ ಮಾಡಿ, ನನ್ನ ಪ್ರತಿಭೆ ಮತ್ತು ಸೌಂದರ್ಯದಿಂದಾಗಿ ನಾನು ಇಲ್ಲಿದ್ದೇನೆ, ನನಗೆ ಉತ್ತಮ ಕೆಲಸ ಸಿಗುತ್ತದೆ ಎಂಬ ಭರವಸೆ ಇದೆ ಎಂದು ನೇರವಾಗಿ ತಿಳಿಸಿದ್ದೆ ಎಂದು ಇಶಾ ಹೇಳಿಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.