ರಮ್ಯಾ ಕೃಷ್ಣ ಯೌವನದಲ್ಲಿದ್ದಾಗ ಟಾಲಿವುಡ್ ಸಿನಿಮಾದಲ್ಲಿ‌ ಹೊಸ ಬಿ ರುಗಾಳಿಯೆ ಸೃಷ್ಟಿ ‌ಆಗಿತ್ತು

 | 
Nd
ರಮ್ಯಾ ಕೃಷ್ಣನ್ ದಕ್ಷಿಣದ ಖ್ಯಾತ ನಟಿ. ಬಹುಭಾಷಾ ಸಿನಿಮಾಗಳಲ್ಲಿ ಮಿಂಚಿರುವ ಈ ನಟಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಬಾಹುಬಲಿ ಸಿನಿಮಾದಿಂದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ನಟಿ ಹಾಗೂ ಕಾಲಿವುಡ್ ಡೈರೆಕ್ಟರ್ ಕೆಎಸ್ ರವಿಕುಮಾರ್ ನಡುವಿನ ಅಫೇರ್ ಮತ್ತು ವಿವಾದ ಅವರ ಪರ್ಸನಲ್​ ಲೈಫ್​ನಲ್ಲಿ ಭಾರೀ ಚರ್ಚೆಯಾಗಿರುವ ವಿಚಾರಗಳಲ್ಲಿ ಒಂದು.
ರಮ್ಯಾ ಮತ್ತು ಕೆ.ಎಸ್.ರವಿಕುಮಾರ್ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 1999 ರಲ್ಲಿ, ನಟಿ ‘ಪಡೆಯಪ್ಪ’ ಮತ್ತು ‘ಪಾಟಲಿ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಚಿತ್ರಗಳಿಂದ ನಟಿಗೆ ಸಾಕಷ್ಟು ಮನ್ನಣೆ ಸಿಕ್ಕಿತು.2002ರಲ್ಲಿ ಪಂಚತಂತ್ರ ಸಿನಿಮಾದಲ್ಲಿ ರವಿಕುಮಾರ್‌ ರಮ್ಯಾ ಅವರನ್ನು ವಿಭಿನ್ನ ಪಾತ್ರದಲ್ಲಿ ತೋರಿಸಿದ್ದರು. ಈ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿಯೇ ಅವರಿಬ್ಬರೂ ಆತ್ಮೀಯರಾಗಿದ್ದರು.
ಇಬ್ಬರೂ ರಿಲೇಷನ್​ಶಿಪ್​ನಲ್ಲಿದ್ದರು. ಅವರು ಡೇಟಿಂಗ್ ಮಾಡುತ್ತಿದ್ದರು. ನಿರ್ದೇಶಕ ರವಿಕುಮಾರ್ ಈ ರಿಲೇಷನ್​​ಶಿಪ್​ ಮೊದಲೇ ಮದುವೆಯಾಗಿದ್ದರು. ವಿವಾಹಿತರಾಗಿದ್ದ ನಿರ್ದೇಶಕರನ್ನು ರಮ್ಯಾ ಕೂಡ ಪ್ರೀತಿಸುತ್ತಿದ್ದರು. ಆ ದಿನಗಳಲ್ಲಿ ನಟಿ ನಿರ್ದೇಶಕರಿಂದ ಗರ್ಭಿಣಿಯಾಗಿದ್ದರು ಎನ್ನುವುದು ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.ರವಿಕುಮಾರ್ ಪತ್ನಿ ತನ್ನ ಪತಿ ಮತ್ತು ರಮ್ಯಾ ಸಂಬಂಧ ಬಗ್ಗೆ ತಿಳಿದಾಗ ನಟಿಗೆ ಬೆದರಿಕೆ ಕೂಡಾ ಹಾಕಿದ್ದರಂತೆ.
 ಈ ಸಂಬಂಧ ಪ್ರೇಮ ಸಂಬಂಧವಾಗಿದ್ದರೆ ಅಷ್ಟು ಸುದ್ದಿಯಾಗುತ್ತಿರಲಿಲ್ಲ. ಆದರೆ ರಮ್ಯಾ ಗರ್ಭಿಣಿ ಎಂದಾಗ ಎಲ್ಲವೂ ಬಿಗಡಾಯಿಸಿತು. ಎಲ್ಲವೂ ಗೊಂದಲಮಯವಾಗಿ ಸಂಬಂಧಗಳು ಹದಗೆಡುತ್ತಿದ್ದಂತೆ ರವಿಕುಮಾರ್ ಪ್ರಾಕ್ಟಿಕಲ್ ಆಗಿ ನಿರ್ಧಾರ ತೆಗೆದುಕೊಂಡರು. ವರದಿಗಳ ಪ್ರಕಾರ ನಟಿ ಗರ್ಭಪಾತಕ್ಕೆ 75 ಲಕ್ಷ ರೂಪಾಯಿ ಕೇಳಿದ್ದರಂತೆ. ಆ ಸಮಯದಲ್ಲಿ ಇಬ್ಬರೂ ಆ ಮಗುವಿಗೆ ಸಿದ್ಧರಿರಲಿಲ್ಲ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಇದರ ನಂತರ, ನಟಿ ಗರ್ಭಪಾತ ಮಾಡಲು ನಿರ್ಧರಿಸಿ ಮಾಡಿಸಿದ್ದರು.
ರಮ್ಯಾ ಮತ್ತು ರವಿಕುಮಾರ್ ಅವರ ಸಂಬಂಧ, ಗರ್ಭಧಾರಣೆ ಮತ್ತು ಗರ್ಭಪಾತದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಈ ವರದಿಗಳನ್ನು ಇಬ್ಬರೂ ನಿರಾಕರಿಸಿದರು. ಇದರ ನಂತರ ರಮ್ಯಾ 2003 ರಲ್ಲಿ ತೆಲುಗು ಚಲನಚಿತ್ರ ನಿರ್ಮಾಪಕ ಕೃಷ್ಣ ವಂಶಿ ಅವರನ್ನು ವಿವಾಹವಾದರು. ಅವರು ಜೂನ್ 12, 2003 ರಂದು ವಿವಾಹವಾದರು.ಮದುವೆಯಾದ ಕೆಲವೇ ದಿನಗಳಲ್ಲಿ ರಮ್ಯಾ ಒಬ್ಬ ಮಗುವಿಗೆ ಜನ್ಮ ನೀಡಿದರು. ಅವರಿಗೆ ಋತ್ವಿಕ್ ಕೃಷ್ಣ ಎಂದು ಹೆಸರಿಟ್ಟರು. ಈಗ ನಟಿ ಮಗನೊಂದಿಗೆ ಖುಷಿಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.