'ಕಾಟೇರ ಸಿನಿಮಾ ನೋಡಿದ್ರ ಶಿವಣ್ಣ' ಅಂತ ಕೇಳಿದಕ್ಕೆ ರೊಚ್ಚಿಗೆದ್ದ ಶಿ.ವಣ್ಣ, ಯಾಕೀಮುನಿಸು

 | 
B

ಡಿ ಬಾಸ್ ದರ್ಶನ್ & ಆರಾಧನಾ ರಾಮ್ ನಟಿಸಿರುವ ಕಾಟೇರ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಮೊದಲ ಆರು ದಿನಗಳಿಗೆ 95+ ಕೋಟಿ ರೂ. ಕಲೆಕ್ಷನ್ ಆಗಿದೆ ಎನ್ನುತ್ತವೆ ಬಾಕ್ಸ್ ಆಫೀಸ್‌ ಮೂಲಗಳು. ಸದ್ಯ ಕಾಟೇರ ಸಿನಿಮಾವು ಉತ್ತಮ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಟೀಮ್, ಸಂತಸದಲ್ಲಿದೆ. ಹಾಗಾಗಿ, ದರ್ಶನ್ ಸೇರಿದಂತೆ ಇಡೀ ಚಿತ್ರತಂಡ ಸಂಭ್ರಮಾಚರಣೆಯ ಮೂಡ್‌ನಲ್ಲಿ ಇದೆ.

ಇನ್ನು, ಸ್ಯಾಂಡಲ್‌ವುಡ್‌ ಮಂದಿಗೆ ಸಿನಿಮಾ ತೋರಿಸುವ ಸಲುವಾಗಿ ಕಾಟೇರ ಸ್ಪೆಷಲ್ ಶೋವೊಂದನ್ನು ಆಯೋಜಿಸಲಾಗಿತ್ತು. ಹಿರಿಯ ನಟಿ ಬಿ ಸರೋಜಾ ದೇವಿ, ಸುಮಲತಾ ಅಂಬರೀಶ್, ಉಪೇಂದ್ರ, ರಮೇಶ್ ಅರವಿಂದ್, ಶ್ರೀಮುರಳಿ, ವಸಿಷ್ಠ ಸಿಂಹ, ಶ್ರೀಮುರಳಿ, ನಿಶ್ವಿಕಾ ನಾಯ್ಡು, ಹರಿಪ್ರಿಯಾ ಮುಂತಾದವರು ಸಿನಿಮಾ ನೋಡಿ ಮೆಚ್ಚಿಕೊಂಡರು. ಆದರೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಬ್ಯುಸಿ ಇದ್ದ ಕಾರಣ ಶಿವಣ್ಣ ಈ ವರೆಗೆ ಸಿನೆಮಾ ನೋಡಿಲ್ಲ.

ಹಾಗಾಗಿ ಶಿವಣ್ಣ ಮಾಧ್ಯಮದ ಮುಂದೆ ಅದನ್ನೇ ಹೇಳಿದ್ದಾರೆ. ಆದಷ್ಟು ಬೇಗ ನೋಡುತ್ತೇನೆ. ಈಗಾಗಲೇ ಹಲವರ ಬಾಯಲ್ಲಿ ಕಾಟೆರ ಸಿನೆಮಾ ಚೆನ್ನಾಗಿದೆ ಎಂದು ಹೇಳಿದ್ದನ್ನು ಕೇಳಿದ್ದೇನೆ. ನಮ್ಮ ಕನ್ನಡದ ಸೊಗಡಿನ ಸಿನೆಮಾ ನೋಡುತ್ತೇನೆ ಎಂದಿದ್ದಾರೆ. ಇನ್ನು ನಟ ದರ್ಶನ್ ಅವರು ಕೇಕ್‌ ಕತ್ತರಿಸಿ ಸಿನಿಮಾದ ಸಕ್ಸಸ್ ಸೆಲೆಬ್ರೇಷನ್ ಮಾಡಿದರು. ಕಾಟೇರ ತಂಡದ ಸದಸ್ಯರು ಭಾಗಿಯಾಗಿದ್ದರು. 

ಡಾಲಿ ಧನಂಜಯ್ ಸತೀಶ್ ನೀನಾಸಂ, ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ಯಶಸ್ ಸೂರ್ಯ, ಧನ್ವೀರ್, ವಿಕ್ರಮ್ ರವಿಚಂದ್ರನ್, ಮನೋರಂಜನ್ ರವಿಚಂದ್ರನ್, ನಟಿ ಶ್ರುತಿ, ವಿ ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಅನೇಕರು ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿದ್ದರು. ಸದ್ಯ ಕಾಟೇರ ಸಿನಿಮಾವನ್ನು ಶೀಘ್ರದಲ್ಲೇ ತೆಲುಗು ಮತ್ತು ತಮಿಳು ಭಾಷೆಗೆ ಡಬ್ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.