ವಿಜಯಲಕ್ಷ್ಮಿ ಇರುವಾಗ ಅವ್ನುಗೆ ಇದೆಲ್ಲ ಬೇಕಿತ್ತಾ; ಮುಖ್ಯಮಂತ್ರಿ ಚಂದ್ರು ವಾ ರ್ನಿಂಗ್

 | 
Js

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್‌, ಪವಿತ್ರಾ ಗೌಡ ಸೇರಿ 17 ಮಂದಿ ಜೈಲು ಪಾಲಾಗಿದ್ದಾರೆ. ಇನ್ನಯ ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಪರ-ವಿರೋಧ ಚರ್ಚೆಗಳು ಆಗುತ್ತಿವೆ. ಈ ನಡುವೆಯೇ ಮುಖ್ಯಮಂತ್ರಿ ಚಂದ್ರು ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. 

ದರ್ಶನ್‌ ಪ್ರಕರಣದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ನಾನು ನೋಡಿದ ಹಾಗೆ ದರ್ಶನ್‌ ಅವರ ತಂದೆ ಶೂಟಿಂಗ್‌ ಸೆಟ್‌ನಲ್ಲಿ ಕೆಲವೊಮ್ಮೆ ತುಂಬಾ ಕೋಪಗೊಳ್ಳುತ್ತಿದ್ದರು. ಅದು ಕೆಲವೊತ್ತಷ್ಟೇ. ಆಮೇಲೆ ಎಲ್ಲರ ಜೊತೆಗೂ ಬೆರೆಯುವ ಸ್ವಭಾವ ಅವರದ್ದಾಗಿತ್ತು. ಸಿನಿಮಾದಲ್ಲಿ ಖಲನಾಯಕನಾಗಿದ್ದರೆ, ನಿಜಜೀವನದಲ್ಲಿ ಹಿರೋ ಆಗಿದ್ದರು, ಎಂದರು.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಅವರದ್ದು ಕೂಡ ತಪ್ಪಿದೆ. ಅದಕ್ಕಂತಲೇ ಕಾನೂನು ಇದೆ. ಸಿನಿರಂಗ ಇದೆ. ಅಲ್ಲೇ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ ಕೊಲೆ ಮಾಡುವ ಮಟ್ಟಕ್ಕೆ ಇಳಿದಿರುವುದು ಕೂಡ ಸರಿಯಲ್ಲ. ನಟ ದರ್ಶನ್‌ ಮನುಷ್ಯತ್ವ ಕಳೆದುಕೊಂಡಿದ್ದಾನೆ ಅಂತಾ ಅನಿಸುತ್ತದೆ ಎಂದು ಹೇಳಿದ್ದಾರೆ.

ಇಲ್ಲಿ ಆಗಿರೋದು ಉದ್ದೇಶಪೂರ್ವಕವಾಗಿ ನಡೆದ ಕೊಲೆಯಲ್ಲ, ಇವರು ಯಾರೂ ಸಹ ಮೂಲತಃ ಕೊಲೆಗಾರರಲ್ಲ, ಸೇಡು ತೀರಿಸಿಕೊಳ್ಳೋಕೆ ಹಿಂಸೆ ಕೊಟ್ಟಿದ್ದಾರೆ. ಹಿಂಸೆ ಅತಿರೇಕ ಆಗಿದ್ದರಿಂದ ಈ ಘಟನೆ ನಡೆದಿದೆ. ಇನ್ನೂ ಹತ್ಯೆಯಾದ ರೇಣುಕಾಸ್ವಾಮಿ ಮಾಡಿದ್ದನ್ನು ನಾನು ಒಪ್ಪುವುದಿಲ್ಲ. ಯಾರೇ ಹೆಣ್ಣು ಮಗಳಿಗಾಗಲೀ ಈ ರೀತಿಯ ಅಶ್ಲೀಲ ಮೇಸೆಜ್‌ ಮಾಡುವುದು ತಪ್ಪು. 

ಹಾಗೆಯೇ ಪವಿತ್ರಾ ಗೌಡ ಮದುವೆಯಾದ ಮನುಷ್ಯನಾ ಜೊತೆ ಸಂಬಂಧ ಕೂಡ ಒಂದು ಅಪರಾಧವೇ. ಇದೆಲ್ಲವನ್ನು ಗಮನದಲ್ಲಿಟ್ಟಿಕೊಂಡು ಕಾನೂನು ಕೆಲಸ ಮಾಡಬೇಕಾಗುತ್ತದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.