ಕೋಟಿಯ ಒಡೆಯ ತೇಜಸ್ವಿ ಸೂರ್ಯ ಮದುವೆಯಾವಾಗ ಗೊ.ತ್ತಾ; ಹುಡುಗಿ ಕೂಡ ಕುಬೇರಳು

 | 
Gui

ಹೆಸರೇ ಹೇಳುವಂತೆ ಇವರೊಬ್ಬ ಪವರ್ ಫುಲ್ ರಾಜಕಾರಣಿ.ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ತೇಜಸ್ವಿ ಸೂರ್ಯ ಅವರು ಬಿಜೆಪಿ ಪಾಳಯದಲ್ಲಿರುವ ಅತ್ಯಂತ ಕಿರಿಯ ಸಂಸದ. ತನ್ನ ಪ್ರಖರ ಮಾತು, ತರ್ಕಬದ್ಧ ವಾದಗಳಿಂದ ಜನಜನಿತರಾಗಿರುವ ಅವರು ಎರಡನೇ ಬಾರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

2018ರಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿಯ ಹಿರಿಯ ಮುಖಂಡ, ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಮೃತಪಟ್ಟಾಗ ಅದಾಗಲೇ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಬಹುದು ಎಂಬುದು ಎಲ್ಲರ ನಿರೀಕ್ಷೆ ಆಗಿತ್ತು. ಆದರೆ ಅಚ್ಚರಿಯ ಆಯ್ಕೆ ಎಂಬಂತೆ ಅದಾಗಲೇ ಟಿವಿ ಪ್ಯಾನಲ್ ಗಳಲ್ಲಿ ತನ್ನ ವಾಗ್ಝರಿಯಿಂದ ಮಿಂಚುತ್ತಿದ್ದ ಚಿಗುರು ಮೀಸೆಯ ಯುವಕ ತೇಜಸ್ವಿನಿ ಸೂರ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. 

ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಲೀಲಾಜಾಲವಾಗಿ ಮಾತನಾಡಬಲ್ಲ ಈ ಯುವಕ ಸಂಸತ್ತಿನಲ್ಲೂ ಮಿಂಚಿದರು.ಕರ್ನಾಟಕ ಸರ್ಕಾರದಲ್ಲಿ ಅಬಕಾರಿ ಜಂಟಿ ಆಯುಕ್ತರಾಗಿ ನಿವೃತ್ತರಾಗಿರುವ ಎಲ್ ಎ ಸೂರ್ಯ ನಾರಾಯಣ ಮತ್ತು ರಮಾ ದಂಪತಿಯ ಪುತ್ರನಾಗಿ 1990ರ ನವೆಂಬರ್ ನಲ್ಲಿ ಜನಿಸಿದರು. ಬೆಂಗಳೂರು ಬಸವನಗುಡಿ ಶಾಸಕ ಎಲ್ ಎ ರವಿ ಸುಬ್ರಹ್ಮಣ್ಯ ಅವರು ತೇಜಸ್ವಿ ಸೂರ್ಯ ಅವರಿಗೆ ಚಿಕ್ಕಪ್ಪ. 

ತೇಜಸ್ವಿ ಸೂರ್ಯ ಅವರಿಗೆ ಬಾಲ್ಯದಿಂದಲೇ ಆರೆಸ್ಸೆಸ್ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ನಲ್ಲಿ ಸಕ್ರಿಯರಾಗಿದ್ದರು. ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದು ಲಾಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ಬಿಜೆಪಿ ಗುರುತಿಸಿ ನೇರವಾಗಿ ಲೋಕಸಭೆ ಪ್ರವೇಶಕ್ಕೆ ಅವಕಾಶ ನೀಡಿತು.ಇನ್ನು ವಕೀಲರಾಗಿ ಅವರು ಪೋಸ್ಟ್ ಕಾರ್ಡ್ ಸಂಪಾದಕ ಮಹೇಶ್ ಹೆಗ್ಡೆ, ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ನ್ಯಾಯವಾದಿಯಾಗಿ ವಾದಿಸಿದ್ದಾರೆ. 

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಭ್ರಷ್ಚಾಚಾರ ಕೇಸುಗಳಿಗೆ ಸಂಬಂಧಿಸಿ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಇನ್ನು ಇವರಿಗೆ ಹಲವಾರು ಮಹಿಳಾ ಅಭಿಮಾನಿ ಬಳಗವಿದೆ. ಸಂದರ್ಶನ ಒಂದರಲ್ಲಿ ಅವರ ತಾಯಿ ಮದುವೆಯ ಬಗ್ಗೆ ಕೇಳಿದಾಗ ಅವನು ಹೇಳಿದಾಗ ಮಾಡುವುದು ಅದು ಅವನ ಇಷ್ಟಕ್ಕೆ ಬಿಟ್ಟಿದ್ದು ಎಂದು ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.