ಒಂದು ಕಾಲದ ಫೇಮಸ್ tv9 ಆಂಕರ್ ಇವತ್ತು ಎಲ್ಲಿ ಕಾಣೆಯಾಗಿದ್ದಾರೆ, ಗಂಡ ಹೆಂಡತಿ ದೂರ ಯಾಕೆ
Feb 16, 2025, 14:50 IST
|

ರಾಧಿಕಾ ರಾಣಿ ಕನ್ನಡದ ಅದ್ಭುತ ನ್ಯೂಸ್ ನಿರೂಪಕಿ ಹಾಗು ಪತ್ರಕರ್ತೆ! ನೇರ ನುಡಿ, ಬಹಳ ಸೊಗಸಾದ ಕನ್ನಡ, ನಗು ಮುಖದಿಂದ ರಾಧಿಕಾ ರಾಣಿ ಅವರು ಕರ್ನಾಟಕದಲ್ಲಿ ಮನೆ ಮಾತಾಗಿದ್ದರು. ರಾಧಿಕಾ ರಾಣಿ ಅವರು ಮೊದಲು ETV ನ್ಯೂಸ್ ನಲ್ಲಿ ಕೆಲಸ ಮಾಡಿ ನಂತರ ಸುಮಾರು 10 ವರ್ಷಗಳ ಕಾಲ ಟಿವಿ 9 ನ್ಯೂಸ್ ಮಾಧ್ಯಮದಲ್ಲಿ ಕೆಲಸ ಮಾಡಿದ್ದರು.
ಟಿವಿ 9 ನಲ್ಲಿ ಮುಖ್ಯ ಪತ್ರಕರ್ತರಾದ ರಂಗನಾಥ್ ಭಾರದ್ವಾಜ್ ಅವರ ಪತ್ನಿ ರಾಧಿಕಾ ರಾಣಿ ಅವರು ಟಿವಿ 9 ತೊರೆದು ಈಗ ಎರಡು ವರ್ಷಗಳೇ ಕಳೆದಿವೆ. ಸದ್ಯ ರಾಧಿಕಾ ರಾಣಿ ಅವರು ಏನು ಮಾಡುತ್ತಾ ಇದ್ದಾರೆ ಗೊತ್ತಾ, ಸದ್ಯ ರಾಧಿಕಾ ರಾಣಿ ಅವರು ತಮ್ಮ ಫ್ಯಾಮಿಲಿ ಲೈಫ್ ನಲ್ಲಿ ಬಹಳ ಬ್ಯುಸಿ ಆಗಿದ್ದು ಇದಲ್ಲದೆ ರಾಧಿಕಾ ಅವರು RSQURE MEDIA ಎಂಬ ಯೌಟ್ಯೂಬ್ ನ್ಯೂಸ್ ಚಾನಲ್ ಅನ್ನು ಸ್ಥಾಪನೆ ಮಾಡಿದ್ದಾರೆ.
ಇದು ಒಂದು ಯೌಟ್ಯೂಬ್ ನ್ಯೂಸ್ ಚಾನಲ್ ಆಗಿದ್ದು, ಪ್ರತಿ ನಿತ್ಯ ರಾಧಿಕಾ ಅವರು, ಸಮಾಜದ ಆಗು ಹೋಗು ಗಳ ಬಗ್ಗೆ, ಲೈಫ್ ಸ್ಟೈಲ್ ಬಗ್ಗೆ, ಆಹಾರ ಬಗ್ಗೆ, ರಾಜಕೀಯದ ಬಗ್ಗೆ, ಸಂಸೃತಿಯ ಬಗ್ಗೆ ಈ ಚಾನಲ್ ನಲ್ಲಿ ಸುದ್ದಿ ಮಾಡುತ್ತಾರೆ! ಫ್ಯಾಮಿಲಿ ಲೈಫ್ ಜೊತೆಗೆ ರಾಧಿಕಾ ರಾಣಿ ಅವರು ತಮ್ಮ ಹೊಸ ಯೌಟ್ಯೂಬ್ ಚಾನಲ್ಲಿನ ಕೆಲಸಗಳಲ್ಲಿ ಕೂಡ ಬಹಳ ಬ್ಯುಸಿ ಆಗಿದ್ದಾರೆ.
ಇನ್ನು ಇದಲ್ಲದೆ ರಾಧಿಕಾ ರಾಣಿ ಅವರು, ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಕೂಡ ಬರೆಯುತ್ತಾರೆ! ಟಿವಿ 9 ನಲ್ಲಿ ರಾಧಿಕಾ ರಾಣಿ ಅವರು, ಸಿನಿಮಾಗೆ ಸಂಬಂಧ ಪಟ್ಟ ಸಂದರ್ಶನ, ಮಹಿಳೆಗೆ ಸಂಬಂಧ ಪಟ್ಟಿ ವಿಷಯಗಳ ಬಗ್ಗೆ ಚರ್ಚೆ, ಸುದ್ದಿಗಳನ್ನು ಮಾಡುತ್ತಿದ್ದರು. ಇದಲ್ಲದೆ ರಾಧಿಕಾ ರಾಣಿ ಅವರು ವಾಯ್ಸ್ ಇನ್ನೂ ಕೂಡ ಬಹಳ ಫೇಮಸ್! ಹಲವಾರು ಮಾಧ್ಯಮಗಳಿಗೆ ಈಗ ಕೂಡ ತಮ್ಮ ಧ್ವನಿಯನ್ನು ನ್ಯೂಸ್ ಗಳಿಗೆ ಕೊಡುತ್ತಾರೆ.
ಅವರು ಇತ್ತೀಚಿಗೆ ತಮ್ಮ ಪತಿ ಜೊತೆಯಾಗಿ ಅಭಿಷೇಕ್ ಅಂಬರೀಶ್ ಅವರ ಮದುವೆಗೆ ಅಗಮಿಸಿದ್ರು . ಅವರ ಹೊಸ ಚಾನೆಲ್ ಕೂಡ ಇತ್ತೀಚೆಗೆ ಶುರು ಆಗಿರುವುದರಿಂದ ಅದರ ಕೆಲಸದಲ್ಲೇ ಸಕತ್ ಬ್ಯುಸಿ ಆಗಿದ್ದಾರೆ.