ತೋಟದಲ್ಲಿ ಸಮತಟ್ಟು ಮಾಡುವಾಗ ಕೇಳಿ ಬಂತು ಭಾರಿ ಸದ್ದು, ಭೂಮಿ ಅಗೆದಾಗ ಸಿ ಕ್ಕಿದ್ದೇನು ಗೊ.ತ್ತಾ

 | 
Hhj

ಆಂದ್ರಪ್ರದೇಶದ: ಸ್ನೇಹಿತರೆ ನಮಸ್ಕಾರ, ರೈತರು ದೇಶದ ಬೆನ್ನೆಲುಬು ಅನ್ನೋ ಮಾತು ಕೇಳಿರ್ತಿರಿ. ರೈತರು ಕಷ್ಟ ಪಟ್ಟು ದುಡಿದರೆ ಮಾತ್ರ ನಮಗೆಲ್ಲ ಸಮಯಕ್ಕೆ ಸರಿಯಾಗಿ ಆಹಾರ ಪದಾರ್ಥಗಳು ದೊರೆಯುತ್ತದೆ. ಅಂತೆಯೇ ನೆಲವನ್ನು ಸಮಗೊಳಿಸಿ ಬೆಳೆಯನ್ನು ಬಿತ್ತಬೇಕು ಎನ್ನುವಾಗ ಭೂಮಿ ಅಗೆಯುವಾಗ ಹೊಲ ಅಥವಾ ತೋಟಗಳಲ್ಲಿ ಆಗಾಗ ಐತಿಹಾಸಿಕ ಪಳೆಯುಳಿಕೆಗಳು, ವಸ್ತುಗಳು ಕಂಡುಬಂದಿದೆ ಅಷ್ಟಕ್ಕೂ ಇದು ನಡೆದಿದ್ದು ನಮ್ಮ ಪಕ್ಕದ ರಾಜ್ಯವಾದ ಆಂಧ್ರ ಪ್ರದೇಶದಲ್ಲಿ  ನಡೆದಿದೆ. 

ರೈತರು ತಮ್ಮ ಹೊಲಗಳನ್ನು ಸಮತಟ್ಟುಗೊಳಿಸುವಾಗ, 12ನೇ ಶತಮಾನದಷ್ಟು ಹಿಂದಿನ ಪುರಾತನ ಹೆಗ್ಗುರುತುಗಳು ಕಂಡುಬಂದಿವೆ. ಕಾಕಿನಾಡ ಜಿಲ್ಲೆಯ ತುನಿ ಸಮೀಪದ ಗೊಂಪಕೊಂಡ ಪ್ರದೇಶದಲ್ಲಿ ರೈತರು ತಮ್ಮ ಹೊಲಗಳನ್ನು ಸಮತಟ್ಟು ಮಾಡುತ್ತಿದ್ದಾಗ. 12ನೇ ಶತಮಾನದ ಯಲಮಂಚಿಲಿ ಚಾಲುಕ್ಯರ ಕಾಲದ ಕಲ್ಲಿನ ಕುಂಡಗಳು , ಪಿರಮಿಡ್‌ಗಳು, ಶಿಲಾಶಾಸನಗಳು, ಕಲ್ಲು ಚಪ್ಪಡಿಗಳು ಪತ್ತೆಯಾಗಿವೆ. 

ಇವುಗಳಷ್ಟೇ ಅಲ್ಲದೆ ಪುರಾತನವಾದ ಇಟ್ಟಿಗೆಗಳು, ದೇವಾಲಯದ ಅವಶೇಷಗಳು ಮತ್ತು ಶಿಲಾಶಾಸನಗಳೂ ಆ ಪ್ರದೇಶದಲ್ಲಿ ಕಂಡುಬಂದಿದೆ. ಅಷ್ಟಕ್ಕೂ ಈ ಗೊಂಪಕೊಂಡ ಪ್ರದೇಶದ ಸಮೀಪದಲ್ಲಿ ಒಂದು ಊರು ಇತ್ತೆಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲಿನ ಜನ ಬೆಂಕಿ ಅವಘಡದಿಂದಲೋ ಅಥವಾ ಸಿಡುಬಿನಂತಹ ಭಯಾನಕ ಕಾಯಿಲೆಯಿಂದಲೋ ವಲಸೆ ಹೋಗಿರಬೇಕು. ಆದ್ದರಿಂದ ಕಾಲಾಂತರದಲ್ಲಿ ಅಲ್ಲಿನ ದೇವಾಲಯವು ಮಣ್ಣಿನಲ್ಲಿ ಹೂತು ಹೋಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಪ್ರಸ್ತುತ ಇಲ್ಲಿ ವಾಸಿಸುತ್ತಿರುವ ರೈತರು ತಮ್ಮ ಹೊಲದ ಕೆಲಸದಲ್ಲಿ ದೊರೆತಿರುವ ಈ ದೇವಾಲಯದ ಕಲ್ಲುಗಳನ್ನು ತೋಟಕ್ಕೆ ಗಡಿ ಬೇಲಿಯಾಗಿ, ಉತ್ಖನನದಲ್ಲಿ ದೊರೆತ ದೇವರ ವಿಗ್ರಹಗಳನ್ನು ದೇವಸ್ಥಾನಗಳಲ್ಲಿಟ್ಟು ಪೂಜಿಸುತ್ತಿದ್ದೇವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.