5 ಸಾವಿರ ವರ್ಷಗಳ ಹಿಂದೆ ತಿರುಪತಿ ದೇವಾಲಯ ಹಾಗೂ ವಿಷ್ಣುವಿನ ಮೂರ್ತಿ ನಿರ್ಮಾಣ ಮಾಡಿದ್ದು ಯಾರು‌ ಗೊ ತ್ತಾ

 | 
G
 ತಿರುಮಲ ತಿರುಪತಿ ದೇವಸ್ಥಾನ ಎಂದ ಕೂಡಲೇ ತತ್‌ಕ್ಷಣಕ್ಕೆ ನೆನಪಾಗುವುದು ಅಲ್ಲಿನ ಗುರುತಾಗಿ ಮನದಲ್ಲಿ ಛಾಪೊತ್ತಿರುವ ತಿರುಪತಿ ಲಡ್ಡು. ಹೌದು ಅದು ಈಗ ವಿವಾದದ ಕೇಂದ್ರ ಬಿಂದು. ತಿರುಪತಿ ಲಡ್ಡು ತಯಾರಿಸಲು ಬಳಸಿದ ತುಪ್ಪದಲ್ಲಿ ಪ್ರಾಣಿ ಕೊಬ್ಬು ಸೇರಿಕೊಂಡಿತ್ತು ಎಂಬ ಕಳವಳಕಾರಿ ಅಂಶ ಸೆಪ್ಟೆಂಬರ್ 19 ರಂದು ಬಹಿರಂಗವಾಗಿದೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹಿಂದಿನ ವೈಎಸ್‌ಆರ್‌ಸಿ ಸರ್ಕಾರದ ಅವಧಿಯಲ್ಲಿ ಈ ಅಪಚಾರವಾಗಿದೆ ಎಂದು ಲ್ಯಾಬ್ ವರದಿಯ ಅಂಶವನ್ನು ಬಹಿರಂಗಪಡಿಸಿದ್ದರು. ಅಲ್ಲಿಂದೀಚೆಗೆ ನಿತ್ಯವೂ ತಿರುಪತಿ ಪ್ರಸಾದ, ತಿರುಪತಿ ಲಡ್ಡು ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಪವಿತ್ರವಾದ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಾಳ ಕಬ್ಬು ಸೇರಿತ್ತು ಎಂಬ ಮಾತು ಭಕ್ತರ ಭಾವನೆಗಳಿಗೆ ದಕ್ಕೆ ತಂದಿತ್ತು.
ಕಾರಣ ಇಲ್ಲದಿಲ್ಲ. ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ದೇವರ ಪ್ರಸಾದವಾಗಿ ಭಕ್ತರಿಗೆ ಸಿಗುತ್ತಿರುವ ತಿರುಪತಿ ಲಡ್ಡು ಪ್ರಸಾದಕ್ಕೆ 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ. ಅದೊಂದು ಕಾಲ ಇತ್ತು- ತಿರುಪತಿ ಲಡ್ಡು ಕಾಳಸಂತೆಯಲ್ಲೂ ಬಿಕರಿಯಾಗುವಷ್ಟು ಬೇಡಿಕೆ ಹೊಂದಿದ್ದ ಕಾಲವದು. ಇರಲಿ ಈಗ ತಿರುಪತಿ ಲಡ್ಡು ಪ್ರಸಾದದ ಇತಿಹಾಸ ಮತ್ತು ವಿಶೇಷಗಳ ಕಡೆಗೆ ಗಮನಹರಿಸೋಣ.
ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದವನ್ನು ನೀಡುವ ಸಂಪ್ರದಾಯವು 300 ವರ್ಷಕ್ಕೂ ಹಿಂದೆ ಚಾಲ್ತಿಗೆ ಬಂತು. ಮೊದಲ ಬಾರಿಗೆ 1715ರ ಆಗಸ್ಟ್‌ 2 ರಂದು ಮೊದಲ ಬಾರಿಗೆ ಲಡ್ಡು ಪ್ರಸಾದ ನೀಡುವುದನ್ನು ಜಾರಿಗೊಳಿಸಲಾಯಿತು. ಪೋಟು ಎಂಬ ಅಡುಗೆ ಮನೆಯಲ್ಲಿ ಇದನ್ನು ತಯಾರಿಸುವ ಪರಂಪರೆ ಬೆಳೆಯಿತು. ಸಾಂಪ್ರದಾಯಿಕ ಸಮುದಾಯದ ನುರಿತ ಬಾಣಸಿಗರು ಈ ಲಾಡನ್ನು ತಯಾರಿಸುತ್ತಾರೆ.4 ವರ್ಷದಿಂದ ತಮಿಳುನಾಡಿನ ಕಂಪನಿಗೆ ಟೆಂಡರ್ ನೀಡಿ ಕೇವಲ 320 ರೂಪಾಯಿಗೆ ತುಪ್ಪ ಖರೀದಿ ಮಾಡಿದ್ದೇ ಇದಕ್ಕೆಲ್ಲಾ ಕಾರಣ ಎನ್ನಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.