ಮುದ್ದಾದ ಹೆಂಡತಿಯನ್ನು ಕಳೆದುಕೊಂಡ ಬಳಿಕ ಸೌಂದರ್ಯ ಗಂಡ ಯಾರನ್ನು ಮದುವೆಯಾದರು ಗೊ ತ್ತಾ

 | 
ಪ

ನಟಿ ಸೌಂದರ್ಯ. ಈ ಹೆಸರು ಕೇಳಿದ ಕೂಡಲೇ ಸುಂದರ ರೂಪ ಕಣ್ಣಮುಂದೆ ಬರುತ್ತದೆ. ಅಭಿನವ ಸಾವಿತ್ರಿ ಎನ್ನುವ ಬಿರುದು ಪಡೆದಿದ್ದ ಸೌಂದರ್ಯ ದುರದೃಷ್ಟವಶಾತ್ ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದರು. ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಬಾರದಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ನಟನೆಗೆ ಅವಕಾಶ ಇರುವ ಪಾತ್ರಗಳಲ್ಲಿ ಮಾತ್ರ ಆಕೆ ನಟಿಸುತ್ತಿದ್ದರು. ಎಕ್ಸ್‌ಪೋಸಿಂಗ್ ಮಾಡುತ್ತಿರಲಿಲ್ಲ. 

ಪಂಚಭಾಷಾ ತಾರೆಯಾಗಿ ನಟಿ ಸೌಂದರ್ಯ ಮೋಡಿ ಮಾಡಿದ್ದರು. 13 ವರ್ಷಗಳ ಕರಿಯರ್‌ನಲ್ಲಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದರು. 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಸೌಂದರ್ಯ, ಹೀರೊಗಳ ರೇಂಜಿಗೆ ಸಂಭಾವನೆ ಪಡೆಯುತ್ತಿದ್ದರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹುಡುಗಿ ಮುಂದೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಂಬರ್ ವನ್ ಹೀರೊಯಿನ್ ಆಗಿ ಬೆಳೆದರು. 

ಅಮಿತಾಬ್ ಬಚ್ಚನ್, ರಜನಿಕಾಂತ್, ಚಿರಂಜೀವಿ, ವಿಷ್ಣುವರ್ಧನ್‌ರಂತಹ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿ ಗೆದ್ದರು. ಗ್ಲಾಮರ್ ಬೊಂಬೆಯಂತೆ ನಿಲ್ಲುವ, ಮರ ಸುತ್ತುವ ಪಾತ್ರಗಳನ್ನು ಎಂದೂ ಮಾಡಲಿಲ್ಲ. ಸೌಂದರ್ಯ ಅಗಲಿಕೆ ನಂತರ ರಘು ಪತ್ನಿಯ ನೆನಪಿನಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸೌಂದರ್ಯ ಹೆಸರಲ್ಲಿ ಶಾಲೆ ನಡೆಸುತ್ತಿದ್ದಾರೆ. ಸಮಾಜಸೇವೆಯನ್ನೂ ಮಾಡಿದ್ದರು. 

ಹಾಗಾದರೆ ಸೌಂದರ್ಯ ಅವರ ಪತಿ ಎಲ್ಲಿದ್ದಾರೆ? ಸೌಂದರ್ಯ ಪತಿ ರಘು ಅವರು ಗೋವಾ ಮೂಲದ ಡಾಕ್ಟರ್ ಅರ್ಪಿತಾ ಅವರನ್ನು ಎರಡನೇ ಮದುವೆ ಆಗಿದ್ದು, ವಿದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ನಿಖರ ಮಾಹಿತಿ ಇಲ್ಲ. ಸೌಂದರ್ಯ ಅವರು ಏಪ್ರಿಲ್ 17, 2004 ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ನಟಿ ಸಾಯುವ ಮುನ್ನ ಅಣ್ಣನ ಹೆಂಡತಿಗೆ ಎರಡು ವಿಷಯ ಕೇಳಿದ್ದರು. ವಿಮಾನ ಹೊರಡುವ ಮುನ್ನ ಕಾಟನ್ ಸೀರೆ ಮತ್ತು ಕುಂಕುಮ ಕೊಡುವಂತೆ ಕೇಳಿದ್ದ ಸೌಂದರ್ಯ ಮತ್ತೆ ವಾಪಸ್ ಬರಲಿಲ್ಲ ಎಂದು ಅವರ ಅಣ್ಣನ ಪತ್ನಿ ಹೇಳಿದ್ದಾರೆ. 

ಸೌಮ್ಯಾ ಸತ್ಯನಾರಾಯಣ್ ಅವರು ತಮ್ಮ ಸ್ಕ್ರೀನ್ ನೇಮ್ ಸೌಂದರ್ಯ ಎಂದೇ ಪ್ರಸಿದ್ಧರಾಗಿದ್ದಾರೆ. ಅವರು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಭಾರತೀಯ ನಟಿ. ಅವರು ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಶ್ರೇಷ್ಠ ನಟಿಯರಲ್ಲಿ ಒಬ್ಬರಾಗಿ ಸ್ಥಾನ ಪಡೆದುಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.