ವಿಡಿಯೋ ಲೀ‌ ಕ್ ಮಾಡಲು ಅನುಮತಿ ಕೊಟ್ಟಿದ್ದು ಯಾರು ಗೊ.ತ್ತಾ; ಹಾಸನ ಕೊತಕೊತ

 | 
Uu

ದಿನದಿಂದ ದಿನಕ್ಕೆ ಕೂತೂಹಲ ಕೆರಳಿಸುತ್ತಿರುವ ಪ್ರಜ್ವಲ್ ರೇವಣ್ಣ ಪ್ರಕರಣ ಎಲ್ಲರ ಗಮನ ಸೆಳೆದಿದೆ. ರೇವಣ್ಣನವರದ್ದು ಇದೇ ಮೊದಲಲ್ಲ, ಹಿಂದೆಯೂ ಇಂಗ್ಲೆಂಡ್​ನಲ್ಲಿ ಒಂದ್ಸಲ ಸಿಕ್ಕಿಬಿದ್ದಿದ್ದರು ಎಂದು ಜೆಡಿಎಸ್​ನ ಮಾಜಿ ಸಂಸದ, ಒಂದು ಕಾಲದ ಗೌಡರ ಕುಟುಂಬದ ಪರಮಾಪ್ತ ಎಲ್.ಆರ್ ಶಿವರಾಮೇಗೌಡ ಹೊಸ ಬಾಂಬ್ ಹಾಕಿದ್ದಾರೆ.ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇವಣ್ಣ ಅಂತಹ ಒಳ್ಳೆಯ ನಡವಳಿಕೆ ವ್ಯಕ್ತಿಯಲ್ಲ, ನಾನು ರೇವಣ್ಣ ಇಂಗ್ಲೆಂಡ್​​​ಗೆ ಹೋಗಿದ್ದಾಗ ಅಲ್ಲಿ ರೇವಣ್ಣ ಸಿಕ್ಕಿಹಾಕಿಕೊಂಡಿದ್ರು. 

ಹಾಸನದಲ್ಲಿ ನಡೆದಂತಹ ಘಟನೆಯೇ ಅಂದು ಇಂಗ್ಲೆಂಡ್​ನಲ್ಲೂ ನಡೆದಿತ್ತು ಎಂದು ಶಿವರಾಮೇಗೌಡ ಹೇಳಿದ್ದಾರೆ.ಬ್ಲ್ಯೂ ಫಿಲ್ಮ್‌ ಮಾಡುವವರ ಬಳಿಯೂ ಇಷ್ಟೊಂದು ವಿಡಿಯೋ ಇದಾವೋ ಇಲ್ಲ ಗೊತ್ತಿಲ್ಲ ಎಂದು ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಗುಡುಗಿದ್ದಾರೆ. ದೇವೇಗೌಡರಿಗೆ ಈ ವಯಸ್ಸಿನಲ್ಲಿ ಇಂತಹ ನೀಚ ಕೃತ್ಯವನ್ನು ನೋಡುವ ದೌರ್ಭಾಗ್ಯ ಬಂದಿದೆ.

 ನನ್ನನ್ನೂ ಸೇರಿದಂತೆ ಹಲವರನ್ನ ಮುಗಿಸಿದ್ದು ಇದೇ ಕಂಪನಿ ಎಂದು ಆರೋಪಿಸಿದರು. ಗಂಗಾಧರ್ ಕೊಲೆ ಕೇಸ್‌ನಲ್ಲಿ ನನ್ನನ್ನು ಸೇರಿಸಲು ದೇವೇಗೌಡ್ರು 8 ಕಿಲೋ ಮೀಟರ್‌ ಪಾದಯಾತ್ರೆ ಮಾಡಿದ್ದರು. ಇದೀಗ ನೊಂದವರ ಶಾಪವೇ ಇಂದು ಅವರಿಗೆ ತಟ್ಟಿದೆ ಎಂದರು.ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಸನಕ್ಕೆ ಭೇಟಿ ನೀಡಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸಬೇಕು. ಅನ್ಯಾಯ ಆಗಿರುವುದು ನಿಮ್ಮ ಕುಟುಂಬದಿಂದ. 

ಹಾಗಾಗಿ ನೀವು ಧಮ್ಕಿ ಹಾಕೋದನ್ನು ಬಿಟ್ಟುಬಿಡಿ. ಹಾಸನ ಡಿಸಿ ಅವರ ಬಗ್ಗೆ ಕುಮಾರಸ್ವಾಮಿ‌ ಅವರು ಮಾತನಾಡಿದ್ದು ಸರಿಯಲ್ಲ. ಅವರು ಸರಿಯಾಗಿ ಮಾತನಾಡಿದ್ದಾರೆ ಎಂದರು.ಇನ್ನು ಯಾರೂ ಮಾಡದ ಘೋರ ಅಪರಾಧ ಮಾಡಿದ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ರೇವಣ್ಣ ಅವರನ್ನೂ ಬಂಧಿಸಬೇಕು. ಒಂದು ವೇಳೆ ತಂದೆ-ಮಗ ಇಬ್ಬರೂ ತಪ್ಪಿಲ್ಲದಿದ್ದರೆ ಅದನ್ನೂ ಬಹಿರಂಗಪಡಿಸಲಿ. 

ಪ್ರಜ್ವಲ್ ರೇವಣ್ಣ ಇಷ್ಟೊಂದೆಲ್ಲ ಮಾಡುವಾಗ ಅವರ ಅಪ್ಪ, ಅಮ್ಮ ಕತ್ತೆ ಕಾಯುತ್ತಿದ್ರಾ? ಇಂತಹ ವಿಕೃತ ಮನಸ್ಥಿತಿಯವರನ್ನು ನಾನು ಎಲ್ಲಿಯೂ ನೋಡೇ ಇಲ್ಲ. ಪ್ರಜ್ವಲ್ ಮುಂದೆ ಉಮೇಶ್ ರೆಡ್ಡಿಯೂ ಶೂನ್ಯ ಎಂದು ವಾಗ್ದಾಳಿ ನಡೆಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.