ಅವತ್ತು ಪಂಗನಾಮ ಹಾಕಿ ಲಕ್ಷ ಬೆಲೆಯ ಕಾರು ಖರೀದಿ, ಐಷಾರಾಮಿ ಜೀವನದ‌ ಹಿಂದೆ ಯಾರ ಕೈವಾಡ

 | 
Ba
ಹಿಂದು ಫೈರ್ ಬ್ರಾಂಡ್ ಕನ್ನಡದ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಅವರು ಕಮಲಶಿಲೆಯ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಉಡುಪಿಯ ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಜೊತೆ ಹಸೆಮಣೆ ಏರಿದ್ದಾರೆ. 12 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಜೋಡಿ ಖುಷಿ ಖುಷಿಯಾಗಿ ದಾಂಪತ್ಯ ಜೀವನಕ್ಕೆ ವೆಲ್​ಕಮ್ ಹೇಳಿದ್ದಾರೆ.
ಉಡುಪಿಯ ಹಿರಿಯಡ್ಕ ಮೂಲಕ ಶ್ರೀಕಾಂತ್ ಕಶ್ಯಪ್ ಅವರನ್ನು ಚೈತ್ರಾ ಕುಂದಾಪುರ ಕಾಲೇಜು ದಿನಗಳಿಂದ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರದ್ದು ಸುಮಾರು 12 ವರ್ಷಗಳ ಪ್ರೀತಿ. ಈ ಪ್ರೀತಿ ಈಗ ಹಿರಿಯರ ಸಮ್ಮತಿಯ ಮೇಲೆಗೆ ದಾಂಪತ್ಯಕ್ಕೆ ಕಾಲಿಟ್ಟಿದೆ. ಕುಂದಾಪುರದ ದೇವಸ್ಥಾನದಲ್ಲಿ ಕುಟುಂಬಸ್ಥರು, ಆತ್ಮೀಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶ್ರೀಕಾಂತ್ ಕಶ್ಯಪ್ ತಾಳಿ ಕಟ್ಟುತ್ತಿದ್ದಂತೆ ಚೈತ್ರಾ ಕುಂದಾಪುರ ಭಾವುಕರಾಗಿದ್ದಾರೆ.
ಅಷ್ಟಕ್ಕೂ ಬಿಜೆಪಿ ಎಂಎಲ್​ಎ ಟಿಕೆಟ್ ಕೊಡುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ ಈಗಾಗಲೇ ಜೈಲಿಗೆ ಹೋಗಿ ಅಲ್ಲಿ ಹೈ ಡ್ರಾಮಾ ಮಾಡಿ ನಂತರ ಜಾಮೀನಿನ ಮೇಲೇ ಹೊರಗೆ ಬಂದಿರೋ ವಿಚಾರ ಎಲ್ಲರಿಗೂ ಗೊತ್ತೇ ಇದೆ ಆದರೆ ಆಗ ಇದೇ ಹಣದಲ್ಲಿ 10 ಲಕ್ಷ ರೂಪಾಯಿ ಮೌಲ್ಯದ ಜಮೀನು ಕೊಂಡಿದ್ದು ಹಾಗೂ 70 ಲಕ್ಷ ರೂಪಾಯಿ ಮನೆ ಕಟ್ಟಿಸಲು ಪ್ಲಾನ್ ಮಾಡಿದ್ದು ಚೈತ್ರಾ ಕುಂದಾಪುರ ಜೊತೆಗಿರುವ ಇದೇ ಶ್ರೀಕಾಂತ್ .
 2022ರಲ್ಲಿ ವಂಚನೆ ನಡೆದಿದ್ದು 2023ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಉದ್ಯಮಿ ಗೋವಿಂದಬಾಬು ಪೂಜಾರಿ ಎಂಬುವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್​ ಕೊಡಿಸುವುದಾಗಿ ಹೇಳಿ 5 ಕೋಟಿ ರೂಪಾಯಿ ವಂಚಿಸಿದ ಗ್ಯಾಂಗ್ ಲೀಡರ್ ಇದೇ ಚೈತ್ರ ಕುಂದಾಪುರ. ಈ ಪ್ರಕರಣದಲ್ಲಿ ಚೈತ್ರಾ ಬಂಧನಕ್ಕೆ ಒಳಗಾಗಿದ್ದರು. ಆರಂಭದಲ್ಲಿ ತಲೆಮರಿಸಿಕೊಂಡಿದ್ದ ಅವರನ್ನು ನಂತರ ಪತ್ತೆ ಹಚ್ಚಲಾಯಿತು. ಆದರೆ ಅವಳಿಗೆ ಬೆನ್ನೆಲುಬಾಗಿ ನಿಂತಿದ್ದ ಇದೇ ಶ್ರೀಕಾಂತ್ ನಾಯ್ಕ್ ಶ್ರೀಕಾಂತ್ ಕಶ್ಯಪ್ ಆಗಿದ್ದು ಯಾವಾಗ , ದೀಕ್ಷೆ ಪಡೆದಿದ್ದು ಯಾವಾಗ ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.