ಯಾರಿದು ಹಿಂದೂ ಹುಲಿ ಕಲ್ಲಡ್ಕ ಪ್ರಭಾಕರ್ ಭಟ್, ಕುಮಾರಸ್ವಾಮಿ ಅವರು ಇವರಿಗೆ ಕೈಮುಗಿಯುವುದು ಯಾ ಕೆ ಗೊ.ತ್ತಾ

 | 
ಪ

ಅವರು ಓದಿದ್ದು ಎಂ.ಬಿ.ಬಿ.ಎಸ್. ಅವರು ಮದುವೆಯಾದದ್ಫೂ ವೈದ್ಯರನ್ನೇ. ಇಬ್ಬರೂ ಯಾವುದೋ ಸರ್ಕಾರೀ ಸೇವೆ ಮಾಡಿಕೊಂಡು ತಿಂಗಳಂತ್ಯದಲ್ಲಿ ಕೈತುಂಬಾ ಸಂಬಳ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸಬಹುದಾಗಿತ್ತು. ಇಲ್ಲವೇ ಗಂಡ ಹೆಂಡತಿ ಇಬ್ಬರೂ ಸೇರಿ ಒಂದು ಸುಸಜ್ಜಿತವಾದ ನರ್ಸಿಂಗ್ ಹೋಮ್ ಕಟ್ಟಿಸಿ ಲಕ್ಷ ಲಕ್ಷ ರೂಪಾಯಿಗಳನ್ನು ಸಂಪಾದಿಸಿಕೊಂಡು ಹಾಯಾಗಿ ಇರಬಹುದಿತ್ತು. 

ಅವರು ರಾಜಕಾರಣಕ್ಕೆ ಬಂದಿದ್ದರೆ ಇಷ್ಟು ಹೂತ್ತಿಗೆ ಶಾಸಕ ಇಲ್ಲವೇ ಸಂಸದರಾಗಿ ರಾಜ್ಯ ಸರ್ಕಾರವೋ ಇಲ್ಲವೇ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗ ಬಹುದಿತ್ತು. ಅವರು ಬಯಸಿದ್ದರೆ ಮುಖ್ಯಮಂತ್ರಿಗಳೂ ಆಗಬಹುದಿತ್ತು. ಆದರೆ ಆವರೆಂದೂ ಸ್ವಾರ್ಥಿಯಾಗಲೇ ಇಲ್ಲ. ಸದಾಕಾಲವೂ ಅವರದ್ದೇನಿದ್ದರೂ ದೇಶದ ಬಗ್ಗೆಯೇ ಚಿಂತೆ. ಅವರು King ಆಗಲು ಇಷ್ಟಪಡದೇ King Maker ಆಗಲು ಇಷ್ಟ ಪಟ್ಟರು. 

ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಕರ್ನಾಟಕ ಕಂಡ ಪ್ರಖರವಾಗ್ಮಿ ನಿಸ್ವಾರ್ಥ ಸಮಾಜ ಸೇವಕರಾದ ಕಲ್ಲಡ್ಕದ ಡಾ. ಪ್ರಭಾಕರ್ ಭಟ್ ಅವರ ಬಗ್ಗೆ ತಿಳಿದರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ. ದಕ್ಷಿಣ ಕನ್ನಡ ಮತ್ತು ಕೇರಳ ಗಡಿಯಲ್ಲಿನ ಸಣ್ಣ ಗ್ರಾಮವಾದ ಕಲ್ಲಡ್ಕದಲ್ಲಿ ಸುಮಾರು 80 ವರ್ಷಗಳ ಹಿಂದೆ ನವೆಂಬರ್ 15 ರಂದು, ಸಾಮಾನ್ಯ ಬಡತನದ ಕುಟುಂಬದಲ್ಲಿ ಜನಿಸಿದ ಪ್ರಭಾಕರ್ ಭಟ್ಟರು, ಓದಿನಲ್ಲಿ ಬಾಲ್ಯದಿಂದಲೂ ಅತ್ಯಂತ ಚುರುಕಾಗಿದ್ದ ಕಾರಣ ಉನ್ನತ ಶ್ರೇಣಿಯಲ್ಲಿಯೇ MBBS ಪದವಿಯನ್ನು ಮುಗಿಸುವ ಜೊತೆ ಜೊತೆಯಲ್ಲಿಯೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದ ಕಾರಣ ದೇಶ ಮತ್ತು ಹಿಂದುತ್ವದಲ್ಲಿ ಅಪಾರವಾದ ಮತ್ತು ಅಧಮ್ಯವಾದ ಪ್ರೀತಿಯ ಕಾರಣ ಯಾವುದೇ ನೌಕರಿಯನ್ನೂ ಸೇರದೇ. 

ಸಂಘದ ಶಾಖೆಗಳನ್ನು ಅವಿಭಜಿತ ದಕ್ಷಿಣ ಕರ್ನಾಟಕಾದ್ಯಂತ ವಿಸ್ತರಣೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. 60ರ ದಶಕದಲ್ಲಿ MBBS ಮುಗಿಸಿದ್ದ ಡಾ.ಕಮಲಾ ಭಟ್ ಅವರೊಂದಿಗೆ ವಿವಾಹವಾದರೂ, ತಮ್ಮ ಹುಟ್ಟು ಗುಣ ಬಿಡದೇ ತಮ್ಮ ಪತ್ನಿಯನ್ನೂ ಸೇರಿಸಿಕೊಂಡೇ ದಂಪತಿಗಳಿಬ್ಬರೂ ಸಮಾಜ ಸೇವೆ ಮತ್ತು ದೇಶ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಲ್ಲದೇ, ಇಂದು ಭಾರತೀಯ ಜನತಾ ಪಕ್ಷದಲ್ಲಿ ಉನ್ನತ ಅಧಿಕಾರದಲ್ಲಿರುವ ಅವಿಭಜಿತ ದಕ್ಷಿಣ ಕರ್ನಾಟಕದ ಬಹುತೇಕ ರಾಜಕಾರಣಿಗಳನ್ನು ಬೆಳೆಸುವುದರಲ್ಲಿಯೇ ತಮ್ಮ ಜೀವನವನ್ನು ಸವೆಸಿದರು. 

1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರದ ಧಮನಕಾರೀ ನೀತಿಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಒಂದು ತಿಂಗಳುಕಾಲ ಸೆರೆಮನೆ ವಾಸ ಅನುಭವಿಸಿದ ಹೊರ ಬಂದ ನಂತರ ಕಂಡವರ ಉಸಾಬರೀ ನಮಗೇಕೆ? ಎಂದು ನೆಮ್ಮದಿಯಾಗಿ ಗಂಡ ಹೆಂಡತಿಯರಿಬ್ಬರೂ ನರ್ಸಿಂಗ್ ಹೋಮ್ ಆರಂಭಿಸಿ ನೆಮ್ಮದಿಯ ಜೀವನವನ್ನು ನಡೆಸಬಹುದಿತ್ತು. ಆದರೆ, ಪ್ರಭಾಕರ್ ಭಟ್ಟರು ಸೆರೆಮನೆ ವಾಸದ ನಂತರ ತಮ್ಮ ಹೋರಾಟವನ್ನು ಮತ್ತಷ್ಟೂ ತೀವ್ರಗೊಳಿಸಿದರು.

ಹೇಳೀ ಕೇಳೀ ಕಲ್ಲಡ್ಕದಲ್ಲಿ ಹಿಂದೂಗಳಿಗಿಂತಲೂ ಇತರರ ಸಂಖ್ಯೆಯೇ ಹೆಚ್ಚಾಗಿದ್ದು ಅವರ ಹಾವಳಿಯೇ ಅತಿಯಾಗಿತ್ತು. ಅಂತಹವರ ಮಧ್ಯೆ ಹಿಂದೂಗಳನ್ನು ಒಗ್ಗೂಡಿಸಿ ಅವರಲ್ಲಿ ಹಿಂದುತ್ವವನ್ನು ಜಾಗೃತಗೊಳಿಸುವ ಸಲುವಾಗಿ ಎಷ್ಟೇ ವಿರೋಧ ವ್ಯಕ್ತವಾದರೂ ಅವುಗಳನ್ನೆಲ್ಲವೂ ಲೆಕ್ಕಿಸದೇ, ಪ್ರಭು ಶ್ರೀರಾಮ ಮಂದಿರವನ್ನು ಕಟ್ಟಿದ್ದಲ್ಲದೇ, ಅಲ್ಲಿನ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕಲಿಸುವ ಸಲುವಾಗಿ ಶ್ರೀರಾಮ ವಿದ್ಯಾ ಕೇಂದ್ರ ಆರಂಭಿಸಿ, ಶಾಲಾ ಉಧ್ಘಾಟನಾ ದಿನದಂದು ಪೋಲಿಸರು 4 ಜನರಿಗಿಂತ ಹೆಚ್ಚಿನ ಜನ ಸೇರಬಾರದು ಎಂದು ಸೆಕ್ಷನ್ 144 ಹೇರಿದ್ದರೂ, ಪೋಲೀಸರು ಚಾಪೇ ಕೆಳಗೆ ತೂರಿದರೆ, ಪ್ರಭಾಕರ್ ಭಟ್ ಅವರು ರಂಗೋಲಿ ಕೆಳಗೆ ತೂರಿ ಪೋಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ, ನಾಲ್ಕು ನಾಲ್ಕು ಜನರನ್ನೇ ಸೇರಿಸಿ ತಮ್ಮ ಶಾಲೆಯ ಶಂಖು ಸ್ಥಾಪನೆಯನ್ನು ಉಡುಪಿಯ ಪೇಜಾವರ ಶ್ರೀಗಳನ್ನು ಕೈಯ್ಯಲ್ಲಿ ಮಾಡಿಸಿದ್ದ ಸಾಹಸಿಗಳು. ಗಾಯದ ಮೇಲೆ ಬರೆ ಎಳೆಯುವಂತೆ ತಮ್ಮ ಶಾಲೆ ಇದ್ದ ಜಾಗಕ್ಕೆ ಹನುಮಾನ್ ನಗರ ಎಂದು ನಾಮಕರಣ ಮಾಡಿ ಎಲ್ಲರ ಹುಬ್ಬೇರಿಸಿದ್ದರು.

ರಾಜ್ಯ ಸರ್ಕಾರದ ಶಿಕ್ಷಣ ನೀತಿಯಂತೆ ಪಾಠ ಪ್ರವಚನಗಳ ಜೊತೆ, ಹಿಂದೂ ಸಂಸ್ಕೃತಿಯಂತೆ ಸರಸ್ವತಿ ಪ್ರಾರ್ಥನೆಯೊಂದಿಗೆ ಶಾಲೆಯ ಆರಂಭ, ಓದಿನ ಜೊತೆ ಜೊತೆಯಲ್ಲಿಯೇ ದೇವರ ನಾಮ ಮತ್ತು ಭಜನೆಗಳ ಸಂಕೀರ್ತನೆಯಲ್ಲದೇ ಭಗವದ್ಗೀತೆಗಳನ್ನೂ ಹೇಳಿಕೊಡಲಾರಂಭಿಸಿದರು. ಮಕ್ಕಳಿಗೆ ಮಾತೃಭಾಷೆಯಲ್ಲಿ ಕಲಿಸಿದರೆ ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ ಎಂಬ ತತ್ವದಡಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಸರಿ ಸುಮಾರು ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ, ಸಮವಸ್ತ್ರದ ಜೊತೆಗೆ, ಅಂದಿನ ಕಾಲದಲ್ಲಿಯೇ ಬಡ ಮಕ್ಕಳಿಗೆ ಬಿಸಿಯೂಟವನ್ನು ಕೊಡುವ ಮೂಲಕ ಎಲ್ಲರ ಗಮನ ಸೆಳೆದರು. 

ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಅನೇಕ ಹಿಂದೂಪರ ಸಂಘಟನೆಗಳು ಮತ್ತು ಸಿರಿವಂತರು ತಮ್ಮ ಕೈಲಾದ ಮಟ್ಟಿಗೆ ಧನ-ಧಾನ್ಯಗಳನ್ನು ಸಹಾಯ ಮಾಡುವ ಮೂಲಕ ರಾಜ್ಯದಲ್ಲಿ ಅತಿದೊಡ್ಡ ಉಚಿತ ಕನ್ನಡ ಮಧ್ಯಮ ಶಾಲೆ ಎಂಬ ಕೀರ್ತಿಗೆ ಪಾತ್ರವಾಯಿತು. ಬದುಕಿದರೆ ಇವರಂತೆ ಬದುಕಬೇಕು ಎನ್ನುವ ರೀತಿಯಲ್ಲಿ ಬದುಕಿದ ಧೀಮಂತ ವ್ಯಕ್ತಿ ಇವರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.