ಅಂಬಾನಿ ಕುಟುಂಬಕ್ಕೆ ಬರುತ್ತಿರುವ ಈ ಸೊಸೆ ಯಾರು ಗೊ.ತಾ; ಈಕೆಯ ಒಂದು ದಿನದ ಖರ್ಚು ಎಷ್ಟು ಕೋಟಿ ಗೊ ತ್ತಾ

 | 
Uu

ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ 28 ವರ್ಷದ ಅನಂತ್ ಅಂಬಾನಿ, ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ 29 ವರ್ಷದ ರಾಧಿಕಾ ಮರ್ಚೆಂಟ್ ಅವರ ಪ್ರಿವೆಡ್ಡಿಂಗ್ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ.

ಮಾರ್ಚ್‌1ರಿಂದ 3ರತನಕ ಮೂರು ದಿನಗಳ ಕಾಲ ನಡೆಯುವ ಈ ಅದ್ಧೂರಿ ಸಮಾರಂಭದಲ್ಲಿ ಜಗತ್ತಿನ ಗಣ್ಯರನೇಕರು ಭಾಗವಹಿಸುತ್ತಿದ್ದಾರೆ. ನಿನ್ನೆ ಮೊದಲ ದಿನ ಮುಕೇಶ್ ಅಂಬಾನಿ ಅವರ ಭಾವೀ ಸೊಸೆ, ಅನಂತ್ ಅಂಬಾನಿ ಅವರ ಮನದನ್ನೆ ರಾಧಿಕಾ ಮರ್ಚಂಟ್ ಅವರು ಥೇಟ್ ಅಪ್ಸರೆಯಂತೆ ಕಂಗೊಳಿಸಿದರು. ದುಬಾರಿ ಅಟೆಲಿಯರ್ ವರ್ಸೇಸ್‌ನ ಉಡುಗೆಯಲ್ಲಿ ಮಿಂಚಿದ ರಾಧಿಕಾ ಮರ್ಚಂಟ್ ನೆರೆದಿದ್ದ ಎಲ್ಲರ ಕಣ್ಮನ ಸೆಳೆದರು.

ಉದ್ಯಮಿ ಎನ್ಕೋರ್ ಹೆಲ್ತ್‌ಕೇರ್‌ನ ಸಂಸ್ಥಾಪಕರು ಮತ್ತು ಮಾಲೀಕರಾಗಿರುವ ವೀರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಕಿರಿಯ ಮಗಳು ರಾಧಿಕಾ ಮರ್ಚೆಂಟ್. ರಾಧಿಕಾ ಅವರ ತಂದೆ ಎನ್‌ಕೋರ್ ಹೆಲ್ತ್ ಕೇರ್ ನ ಸಿಇಒ ಮತ್ತು ಎಪಿಎಲ್ ಅಪೊಲೊ ಟ್ಯೂಬ್ಸ್, ಸ್ಟೀಲ್ ಉತ್ಪಾದನಾ ಕಂಪನಿಯ ಮಂಡಳಿಯ ಸದಸ್ಯರಾಗಿದ್ದಾರೆ. ರಾಧಿಕಾರ ತಾಯಿ ಶೈಲಾ ಎನ್‌ಕೋರ್ ಹೆಲತ್‌ಕೇರ್‌ನ ನಿರ್ದೇಶಕರಾಗಿದ್ದಾರೆ.

ಇನ್ನು ಇವರದು ಪ್ರೇಮ ವಿವಾಹ ಅನಂತ್ ಅಂಬಾನಿ ಅನಾರೋಗ್ಯಕ್ಕೆ ತುತ್ತಾದಾಗ ಅವನೊಂದಿಗೆ ಇದ್ದು ಧೈರ್ಯ ತುಂಬುವ ಕೆಲಸ ಮಾಡಿದ್ದು ಇದೇ ರಾಧಿಕಾ.ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಬಾಲ್ಯದ ಸ್ನೇಹಿತರು. ಅಂಬಾನಿ ನಿವಾಸಕ್ಕೆ ರಾಧಿಕಾ ಆಗಾಗ್ಗೆ ಬಂದು ಹೋಗುತ್ತಿದ್ದರು. 2018 ರಲ್ಲಿ ಆನಂದ್ ಪಿರಮಾಲ್ ಜೊತೆಗೆ ಇಶಾ ಅಂಬಾನಿ ವಿವಾಹ ಕಾರ್ಯಕ್ರಮದಲ್ಲಿ ಮತ್ತು 2019 ರಲ್ಲಿ ಆಕಾಶ್-ಶ್ಲೋಕಾ ಅವರ ವಿವಾಹದಲ್ಲಿ ಕೂಡ ರಾಧಿಕಾ ಭಾಗವಹಿಸಿದ್ದರು.

ಭರತನಾಟ್ಯ ನೃತ್ಯ ಪ್ರಕಾರದಲ್ಲಿ ತರಬೇತಿಯನ್ನೂ ಪಡೆದಿರುವ ರಾಧಿಕಾ ಜೂನ್ 2022 ರಲ್ಲಿ, ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ತಮ್ಮ 'ಅರಗ್ರೇಟಂ' (ಮೊದಲ ಹಂತದ ಪ್ರದರ್ಶನ) ಪ್ರದರ್ಶಿಸಿದರು. ಆಕೆಯ ಆಸಕ್ತಿಯ ಕ್ಷೇತ್ರಗಳು ಪ್ರಾಣಿ ಕಲ್ಯಾಣ, ನಾಗರಿಕ ಹಕ್ಕುಗಳು, ಆರ್ಥಿಕ ಸಬಲೀಕರಣ, ಶಿಕ್ಷಣ, ಆರೋಗ್ಯ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ಸೇವೆಯನ್ನು ಒಳಗೊಂಡಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.