ಇಷ್ಟು ಮುದ್ದಾಗಿರುವ ಸಿಂಧೂ ರಾವ್ ಬದುಕನ್ನು ಹಾಳು ಮಾಡಿದ್ದು ಯಾ ರು ಗೊ ತ್ತಾ

 | 
Hd

ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಅನೇಕ ಕಲಾವಿದರು ಮದುವೆ ಹಾಗೂ ಇನ್ನಿತರ ಕಾರಣಗಳಿಂದ ನಟನೆಯಿಂದ ದೂರ ಉಳಿಯುತ್ತಾರೆ. ವೈಯಕ್ತಿಕ ಸಮಸ್ಯೆಗಳಿಂದಲೋ, ನಟನೆಯ ಮೇಲಿನ ಸೆಳೆತದಿಂದಲೋ ಮತ್ತೆ ಕ್ಯಾಮರಾ ಮುಂದೆ ಬರುತ್ತಾರೆ. ಇದೀಗ ಸಿಂಧು ರಾವ್‌ ವಿಚಾರದಲ್ಲಿ ಕೂಡಾ ಇದೇ ಆಗಿದೆ. 90ರ ದಶಕದಲ್ಲಿ ಬಾಲನಟಿಯಾಗಿ ಮಿಂಚಿದ್ದ ಸಿಂಧು ರಾವ್‌ ಈಗ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

ಸಿಂಧು ನಟನೆ ಆರಂಭಿಸಿದ್ದು 1993 ರಲ್ಲಿ ತೆರೆ ಕಂಡ ನಾನೆಂದು ನಿಮ್ಮವನೇ ಸಿನಿಮಾ ಮೂಲಕ. ಈ ಚಿತ್ರದಲ್ಲಿ ಸಿಂಧು ಹುಡುಗನ ಪಾತ್ರದಲ್ಲಿ ನಟಿಸಿ ಮೊದಲ ಸಿನಿಮಾದಲ್ಲೇ ಸಿನಿಪ್ರಿಯರ ಮನಸ್ಸು ಗೆದ್ದಿದ್ದರು. ನಾನೆಂದು ನಿಮ್ಮವನೇ ಸಿನಿಮಾವನ್ನು ಫಣಿ ರಾಮಚಂದ್ರ ನಿರ್ದೇಶಿಸಿದ್ದರು. ಸಿಂಧು ಅವರಿಗೆ ಸಿನಿಮಾ ಹಿನ್ನೆಲೆ ಇಲ್ಲ. ಅದೇ ಸಮಯಕ್ಕೆ ನಾನೆಂದು ನಿಮ್ಮವನೆ ಸಿನಿಮಾಗಾಗಿ ಫಣಿ ರಾಮಚಂದ್ರ ಆಡಿಷನ್‌ ನಡೆಸುವ ವೇಳೆ ಅವರಿಗೆ ಪರಿಚಯ ಇದ್ದ ಸಿಂಧು ರಾವ್‌ ಅಜ್ಜಿ, ಮೊಮ್ಮಗಳ ಬಗ್ಗೆ ಹೇಳಿದ್ಧಾರೆ. 

ಆ ಚುರುಕಿನ ಹುಡುಗಿಯನ್ನು ನೋಡಿ ನಿರ್ದೇಶಕ ತಮ್ಮ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದಾರೆ.ಡಾ. ವಿಷ್ಣುವರ್ಧನ್‌ ಜೊತೆ 'ನಾನೆಂದು ನಿಮ್ಮವನೇ' ಸಿನಿಮಾ ಬಳಿಕ ಸಿಂಧು ರಾವ್‌, ರಾಯರು ಬಂದರು ಮಾವನ ಮನೆಗೆ, ಮದರ್‌ ಇಂಡಿಯಾ, ಕಲಾವಿದ, ಆಯುಧ, ಮೌನರಾಗ, ಒಂದಾಗೋಣ ಬಾ, ಪುಟ್ಮಲ್ಲಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದರು. ವರ್ಷ ಚಿತ್ರದಲ್ಲಿ ಡಾ. ವಿಷ್ಣುವರ್ಧನ್‌ ಕೊನೆಯ ತಂಗಿಯಾಗಿ ನಟಿಸಿದ್ದರು. ಮೌನರಾಗ ಚಿತ್ರದ ನಟನೆಗಾಗಿ ಸಿಂಧುಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡಾ ದೊರೆತಿತ್ತು.

ವಿದ್ಯಾಭ್ಯಾಸದತ್ತ ಗಮನ ಹರಿಸಲು ಕೆಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ಸಿಂಧು ನಾಯಕಿಯಾಗಿ ಅವಕಾಶಗಳಿಗೆ ಎದುರು ನೋಡಿದರೂ ಅದು ಸಾಧ್ಯವಾಗಲಿಲ್ಲ. ಮತ್ತೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ, ವೈವಾಹಿಕ ಬದುಕಿನ ಜಂಜಾಟದಲ್ಲಿ ಆಕ್ಟಿಂಗ್‌ಗೆ ಗುಡ್‌ ಬೈ ಹೇಳಿದ್ದರು. ಕೋವಿಡ್‌ ಸಮಯದಲ್ಲಿ ಅವರು ಗುಬ್ಬಿಮರಿ ಸಿನಿಮಾ, ಸಿಲ್ಲಿ ಲಲ್ಲಿ ಎರಡನೇ ಭಾಗದಲ್ಲಿ ನಟಿಸಿ ಮತ್ತೆ ಮರೆಯಾಗಿದ್ದರು. ಸಿಂಧು ಈಗ ಮತ್ತೆ ನಟನೆಗೆ ವಾಪಸಾಗಿದ್ದಾರೆ. 

ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿಯಲ್ಲಿ ನಾಯಕನ ಚಿಕ್ಕಮ್ಮನ ಪಾತ್ರದಲ್ಲಿ ಸಿಂಧು ನಟಿಸುತ್ತಿದ್ದಾರೆ. ಸಿಂಧು ಮತ್ತೆ ನಟನೆಗೆ ವಾಪಸಾಗಿದ್ದನ್ನು ನೋಡಿ ಕಿರುತೆರೆಪ್ರಿಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಚೆಲುವೆ ಈಗ ಅಪ್ಪಟ ಗೃಹಿಣಿ. ಇಬ್ಬರು ಗಂಡು ಮಕ್ಕಳಿದ್ಧಾರೆ. ಪತಿ ಮಹೇಶ್‌ ಸಿಂಧುಗೆ ಎಲ್ಲಾ ರೀತಿ ಬೆಂಬಲ ನೀಡುತ್ತಿದ್ಧಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.