ಕಿರಿಕ್ ಕೀರ್ತಿ ಕೇಳಿದ ಆ ಪ್ರಶ್ನೆಗೆ ಗರಂ ಆಗಿದ್ಯಾಕೆ ಪ್ರಕಾಶ್ ರಾಜ್

 | 
ಗಗಗ

ಮೋದಿಯವರ ಪರಿವಾರ ಏನಂತ ಗೊತ್ತಾಯ್ತಲ್ಲ, ಲಾಟ್ರಿ ಮಾರೋ ಮಾರ್ಟಿನ್ ಇವರ ಪರಿವಾರ. ನಿಮ್ಮದು ಫಾರ್ಮಾ ಕಂಪನಿ, ಅದಾನಿ ಪರಿವಾರ, ರೇಪ್ ಮಾಡಿರುವ ಬ್ರಿಜ್ ಭೂಷಣ್ ಪರಿವಾರವಾಗಿದೆ. ಮಣಿಪುರದ ಹೆಣ್ಮಕ್ಕಳ ಬಗ್ಗೆ ಮಾತಾಡಲ್ಲ. ಮಹಿಳಾ ದಿನದಂದು ಗ್ಯಾಸ್ ಗೆ ನೂರು ರೂ. ಕಡಿಮೆ ಮಾಡ್ತಾರೆ. ಪೆಟ್ರೋಲ್‌ಗೆ ಕೇವಲ 2 ರೂ. ಕಡಿಮೆ ಮಾಡ್ತಾರೆ. ಇದರಲ್ಲಿ ಅರ್ಥ ಇದೆಯಾ? ಚುನಾವಣೆ ಗೆಲ್ಲೋಕೆ ಇಲೆಕ್ಟೊರಲ್ ಬಾಂಡ್ ಮೂಲಕ 12 ಸಾವಿರ ಕೋಟಿ ಇಟ್ಟಿದ್ದೀರಿ. ದೇಶದ ಜನರಿಗೆ ಕೆಲಸ ಕೊಟ್ಟಿದ್ದೀರೋ ಇಲ್ವೋ ಗೊತ್ತಿಲ್ಲ, ಆದರೆ ನಮ್ಮ ಮನೆಯ ಟೈಲರಿಗಂತೂ ಕೆಲಸ ಕೊಟ್ಟಿದೀರಿ ಎಂದು ಟೀಕೆ ಮಾಡಿದ್ದರು.


ಮಹಾಪ್ರಭುಗಳೇ ಇಂಟರ್ ನೆಟ್ ನ 1 ಜಿಬಿ ಇಂಟರ್‌ನೆಟ್‌ಗೆ 10 ರೂ. ಅದು ನೀವು ಮಾಡಿದ್ದಾ? ಅದು ಪ್ರಗತಿ, ವಿಜ್ಞಾನ ಬೆಳೆದಂತೆ ವಸ್ತುಗಳ, ಸವಲತ್ತುಗಳ ಬೆಲೆ ಬದಲಾಗುತ್ತದೆ. ಎಲ್ಲವನ್ನೂ ಸುಳ್ಳು ಹೇಳ್ಕಂಡು ತಿರುಗೋದು ತಪ್ಪು. ಜನರನ್ನು ಹೀಗೆಲ್ಲಾ ಮಂಗ ಮಾಡಬಾರದು.ಮೋದಿಯವರನ್ನು ಮಹಾಪ್ರಭುಗಳು ಅಂತೇನೆ, ಹೆಸರು ಕರೆದ್ರೆ ಬೇಜಾರಾಗುತ್ತದೆ. ನಾ ಖಾವೂಂಗಾ ನಾ ಖಾನೆ ದೂಂಗಾ ಅಂತಾರೆ, ನಿಮ್ಮಲ್ಲಿ ಭ್ರಷ್ಟಾಚಾರ ನಡೀತಿದೆಯಲ್ಲಾ, ನೀವೂ ಸರಿಯಿಲ್ಲ ಅಂತಲ್ವಾ? ಯಾರೂ ದೇವರಲ್ಲ ಇಲ್ಲಿ, ಜನ ಅರ್ಥ ಮಾಡ್ಕೋಬೇಕಿದೆ. ಚುನಾವಣಾ ಬಾಂಡ್ ಬಗ್ಗೆ ಯಾಕೆ ಗೌಪ್ಯವಾಗಿಟ್ಟಿದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 

ಇನ್ನು ಚುನಾವಣೋತ್ತರ  ಸಮೀಕ್ಷೆ ಎನ್ನುವುದು ವ್ಯಾಪಾರವಾಗಿದೆ. ಹಣ ಕೊಟ್ಟು ಮಾಡಿಸುವಂಥ ಸಮೀಕ್ಷೆಗಳು ಇವು. ಇವತ್ತು ಪತ್ರಿಕೆ ಓಪನ್ ಮಾಡ್ತಾರಂದ್ರೆ ಯಾವ ಪಕ್ಷದ್ದು ಅಂತ ಗೊತ್ತಾಗುತ್ತದೆ. ಒಳ್ಳೆಯ ಅಭ್ಯರ್ಥಿಗಳು ಗೆದ್ರೆ ನೀವು ಗೆದ್ದಂತೆ, ಅದಕ್ಕಾಗಿ ಒಳ್ಳೆಯ ಅಭ್ಯರ್ಥಿ ಗೆಲ್ಲಿಸಿ. ನಾನು ಚುನಾವಣೆ ನಿಲ್ಲಲ್ಲ, ಯಾವ ಪಕ್ಷದ ಪರವು ಪ್ರಚಾರ ಮಾಡಲ್ಲ. ಜನರ ಪಕ್ಷ ನಾವು, ಎಲ್ಲಾ ಪಕ್ಷದವರು ಒಂದೇ, ಅವನ ಬಿಲ್ಡಿಂಗಲ್ಲಿ ಇವನ ಬಾರಿದೆ, ಎಲ್ಲ ಪಕ್ಷದ ನಾಯಕರಲ್ಲು ಹೊಂದಾಣಿಕೆ ಇದೆ. 320 ಎಂಪಿಗಳಿದ್ದಾರೆ, ಅದನ್ನು ಹಂಚಿದ್ರೆ ಕಡಿಮೆ ಬರತ್ತೆ ಅಂತಾರೆ ಎಂದು ವಾಗ್ದಾಳಿ ನಡೆಸಿದ್ದರು.

ಈ ಹಿನ್ನೆಲೆ ಇತ್ತೀಚಿಗೆ ಟಿವಿ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಇರಿಸು ಮುರಿಸು ಅನುಭವಿಸಿದ್ದಾರೆ ಎಕೆಂದರೆ ನಿಮಗೇಕೆ ವಯಕ್ತಿಕ ದ್ವೇಷ. ಅವರು ದೇಶದ ಪ್ರಧಾನಿ ಅವರನ್ನು ಏಕವಚನದಲ್ಲಿ ಕರೆಯೋದ್ಯಾಕೆ. ರಾಜಕುಮಾರ, ರಜಿನಿಗಿಂತ ಇವರು ಒಳ್ಳೆಯ ನಟ ಅನ್ನುತ್ತೀರಿ. ಅವರ ಬಟ್ಟೆಯ ಬಗ್ಗೆ ಮಾತಾಡುವ ನೀವು CAA ಬಗ್ಗೆ ಮಾತಾಡಿ. ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನ ನೋಡಿ ಎಂದಾಗ ಮಾತಾಡದೆ ಮೌನವಾಗಿದ್ದರು.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.