ದಸರಾ ಆನೆ ಕುಡಿತದ ಚಟಕ್ಕೆ ಬಿದ್ದಿದ್ದು ಯಾಕೆ ಗೊ.ತ್ತಾ, ದಿನಲೂ ಒಂದು ಲೀಟರ್ ಎಣ್ಣೆ ಕುಡಿಯುತ್ತಿದ್ದ ಬಲರಾಮ

 | 
Bd

ಈ ವಿಷಯ ಹಲವರಿಗೆ ಅಚ್ಚರಿ ಎನಿಸಬಹುದು. ಮಡಿವಂತರು ಈ ಸುದ್ದಿ ಕೇಳಿ ಹೌಹಾರಬಹುದು.ಆದರೆ ಕೇಳಿ, ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ಆನೆಗಳೂ ಮದ್ಯಾರಾಧಕರು. ಜಂಬೂ ಸವಾರಿಯಂದು ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತು ಸಾಗುವ ಅಂಬಾರಿ ಆನೆ- ಬಲರಾಮ ಕೂಡ ಎಣ್ಣೆ ಪ್ರಿಯ!ತಮಾಷೆಯ ಮಾತಲ್ಲ- 60, 90, ಕ್ವಾರ್ಟರ್, ಹಾಫ್ ಬಾಟಲ್... ಈ ಆನೆಗಳ ಬಾಲಕ್ಕೂ ಸಾಕಾಗುವುದಿಲ್ಲ. 

ಈ ಆನೆಗಳು ಬಾಟಲಿಗಟ್ಟಲೆ ಎಣ್ಣೆ ಸೇವಿಸುತ್ತವೆ. ಅದೂ ಪಕ್ಕಾ ಸುಕ್ಕಾ ಮದ್ಯಕ್ಕೆ ನೀರು ಬರೆಸದೆ. ಅದರಲ್ಲೂ ಎಲ್ಲ ಆನೆಗಳಿಗೂ ರಮ್ಮು- ಫೇವರಿಟ್ ಡ್ರಿಂಕ್. ಈಗ ದಸರಾಕ್ಕೆ ಬಂದಿರುವ ಆನೆಗಳು ಮಾತ್ರ ಕುಡಿತದ ದಾಸರಲ್ಲ; ದಶಕಗಳಿಂದ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕುತ್ತಿರುವ ಎಲ್ಲ ಆನೆಗಳಿಗೂ ಎಣ್ಣೆಯ ನಂಟು ಉಂಟು! ಮೊದಲೆಲ್ಲ ಆನೆಗಳನ್ನು ಟನ್‌ಗಟ್ಟಲೆ ಟಿಂಬರ್ ಎಳೆಸಿಕೊಂಡು ದುಡಿಸಿಕೊಳ್ಳಲಾಗುತ್ತಿತ್ತು. 

ಆದ್ದರಿಂದ ಬಸವಳಿದ ಈ ಆನೆಗಳಿಗೆ ಸಾರಾಯಿ ಕುಡಿಸಿ ಸುಸ್ತು ಕಡಿಮೆ ಮಾಡಿಸುವುದು ರೂಢಿಯಲ್ಲಿತ್ತು. ಆ ಆನೆಗಳಿಗೆ ರಿಲ್ಯಾಕ್ಸ್ ಮಾಡಿಸುವುದು ಇದರ ಆಶಯ ಆಗಿತ್ತು. ಸಾಮಾನ್ಯವಾಗಿ ನಾವು ಬ್ರೆಡ್ ಜತೆ ಹಾಲು ಅದ್ದಿಕೊಂಡು ತಿನ್ನುತ್ತೇವೆ. ಆದರೆ, ಗಜರಾಜನ ಸ್ಟೈಲೇ ಬೇರೆ.ಇವುಗಳಿಗೆ ರಮ್‌ನಲ್ಲಿ ಪೌಂಡು ಬ್ರೆಡ್‌ಅನ್ನು ನೆನೆ ಹಾಕಿ ತಿನ್ನಿಸಲಾಗುತ್ತದೆ. ಹೀಗೆ ಮಧ್ಯವಯಸ್ಕ ಆನೆಯೊಂದಕ್ಕೆ ಸರಾಸರಿ ಎರಡು ಬಾಟಲ್ ರಮ್ ನೀಡಲಾಗುತ್ತದೆ. ಇದರಿಂದ ಆನೆ ‘ಟೈಟ್’ ಆಗುವ ಪ್ರಶ್ನೆಯೇ ಇಲ್ಲ. 

ಆದರೆ, ಕುಡಿದ ನಂತರ ಆನೆ ಚೆನ್ನಾಗಿ ನಿದ್ದೆ ಮಾಡುತ್ತದೆ. ಚೆನ್ನಾಗಿ ನಿದ್ದೆ ಮಾಡಿ, ಫ್ರೆಶ್ ಆಗಬೇಕು ಎನ್ನುವುದಷ್ಟೇ ಆಲ್ಕೊಹಾಲ್ ನೀಡುವ ಉದ್ದೇಶ. ಏಕೆಂದರೆ, ಸಾಮಾನ್ಯವಾಗಿ ಆನೆ ದಿನದ 24 ಗಂಟೆಯಲ್ಲಿ ಹೆಚ್ಚೆಂದರೆ, ಎರಡರಿಂದ ಮೂರು ಗಂಟೆಯಷ್ಟು ಮಾತ್ರವೇ ನಿದ್ದೆ ಮಾಡುತ್ತದೆ. ಎಣ್ಣೆ ಪ್ರಭಾವದಿಂದ ಇನ್ನೆರಡು ಗಂಟೆ ಹೆಚ್ಚು ಮಲಗುತ್ತವೆ,ಎಂದು ಪಶು ವೈದ್ಯಾಧಿಕಾರಿಯೊಬ್ಬರು ತಿಳಿಸುತ್ತಾರೆ. 

ಸೆರೆ ಸಿಕ್ಕುವುದಕ್ಕೂ ಮೊದಲು ಬಲರಾಮ ಹೊಲದಲ್ಲಿ ಕದ್ದು ಮುಚ್ಚಿ ತಯಾರು ಮಾಡುತ್ತಿದ್ದ ಕಳ್ಳಭಟ್ಟಿ ಕುಡಿಯುತ್ತಿದ್ದ. ಬಲರಾಮ 1987ರಲ್ಲಿ ಕೊಡಗಿನ ಕಟ್ಟೇಪುರ ಅರಣ್ಯದಲ್ಲಿ ಸೆರೆ ಸಿಕ್ಕಿದ್ದ. ಆತ ಎಣ್ಣೆ ಕುಡಿಸಿದರಷ್ಟೇ ಹೇಳಿದ ಮಾತು ಕೇಳುತ್ತಿದ್ದ. ನಂತರ ಅವನನ್ನು ಪಳಗಿಸಿ, ಈ ಚಟವನ್ನು ಬಿಡಿಸಲಾಯಿತು. ಆದರೆ, ಇವತ್ತಿಗೂ ಅಷ್ಟೇ, ಬಲರಾಮ ಬರೋಬ್ಬರಿ ನಾಲ್ಕು ಫುಲ್ ಬಾಟಲ್ ರಮ್ ಹೀರುತ್ತಾನೆ, ಎಂದು ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.