ಸಾವಿರಾರು ಬ್ರಾಹ್ಮಣರನ್ನು ಬಿಟ್ಟು, ಈ ಮೋಹಿತ್ ಪಾಂಡೆ ಅವರನ್ನೇ ಆರ್ಚಕರನ್ನಾಗಿ ಆಯ್ಕೆ ಮಾಡಿದ ರಾಮ್ ಮಂದಿರ ಸಂಸ್ಥೆ ಯಾಕೆ ಗೊ ತ್ತಾ

 | 
V

ಉತ್ತರಪ್ರದೇಶ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಮುಂದಿನ ತಿಂಗಳು ಅಂದರೆ 2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿದೆ. ಈ ನಡುವೆ ರಾಮಮಂದಿರಕ್ಕೆ ಸಂಬಂಧಿಸಿ ಮೋಹಿತ್‌ ಪಾಂಡೆ ಎಂಬ ವಿದ್ಯಾರ್ಥಿಯ ಹೆಸರು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಹಾಗಾದರೆ ಯಾರು ಈ ಮೋಹಿತ್‌ ಪಾಂಡೆ, ಅಯೋಧ್ಯೆಯ ರಾಮ ಮಂದಿರಕ್ಕೂ ಇವರಿಗೂ ಏನು ಸಂಬಂಧ? ಎನ್ನುವ ಪ್ರಶ್ನೆ ಮೂಡಿದೆ.

ಮೋಹಿತ್‌ ಪಾಂಡೆ ಗಜಿಯಾಬಾದ್‌ ಮೂಲದ ವಿದ್ಯಾರ್ಥಿ. ದೂಧೇಶ್ವರ ವೇದ ವಿದ್ಯಾಪೀಠದ ವಿದ್ಯಾರ್ಥಿಯಾಗಿರುವ ಮೋಹಿತ್‌ ಪಾಂಡೆ ರಾಮಮಂದಿರಕ್ಕೆ ಅರ್ಚಕರಾಗಿ ಆಯ್ಕೆಯಾಗಿದ್ದಾರೆ. ಅರ್ಚಕ ಸ್ಥಾನಕ್ಕೆ ಆಯ್ಕೆಯಾಗಿರುವ 50 ಮಂದಿಯಲ್ಲಿ ಇವರೂ ಇದ್ದಾರೆ. ನೇಮಕಾತಿಗೂ ಮೊದಲು ಅರ್ಚಕರಾಗುವ ಎಲ್ಲರಿಗೂ ಆರು ತಿಂಗಳಗಳು ತರಬೇತಿ ನೀಡಲಾಗುತ್ತದೆ.

ಉತ್ತರ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಗಾಜಿಯಾಬಾದ್‌ನ ಶ್ರೀ ದೂಧೇಶ್ವರನಾಥ ಮಠ ದೇವಾಲಯದ ಆವರಣದಲ್ಲಿ ದೂಧೇಶ್ವರ ವೇದ ವಿದ್ಯಾಪೀಠವನ್ನು ಸ್ಥಾಪಿಸಲಾಗಿದೆ. ಪ್ರಪಂಚದಾದ್ಯಂತ ಪ್ರತಿದಿನ ಪ್ರಪಂಚದಾದ್ಯಂತ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಸ್ತುತ ಈ ವೇದ ವಿದ್ಯಾಪೀಠರದಲ್ಲಿ ಸುಮಾರು 70 ವಿದ್ಯಾರ್ಥಿಗಳು ದೇಶ ಮತ್ತು ವಿದೇಶದ ವಿವಿಧ ದೇವಾಲಯಗಳಲ್ಲಿ ಅರ್ಚಕರು ಹಾಗೂ ಆಚಾರ್ಯರಾಗಿ ಸೇವೆ ಸಲ್ಲಿಸಲು ತರಬೇತಿ ಪಡೆಯುತ್ತಿದ್ದಾರೆ. 

ಅಯೋಧ್ಯೆ ರಾಮಮಂದಿರ ಅರ್ಚಕ ಹುದ್ದೆಗೆ ಭಾರತದಾದ್ಯಂತ ಸುಮಾರು 3000 ಮಂದಿ ಸಂದರ್ಶನ ನೀಡಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ 50 ಜನರನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಮೋಹಿತ್‌ ಪಾಂಡೆ ಕೂಡ ಒಬ್ಬರು. ಪೀಠಾದೀಶ್ವರ ಶ್ರೀ ಮಹಾಂತ್‌ ನಾರಾಯಣ ಗಿರಿ ಮಾತನಾಡಿ, ದೂಧೇಶ್ವರ ದೇವರ ಕೃಪೆಯಿಂದ ಶ್ರೀರಾಮನ ಸೇವೆಗೆ ಮೋಹಿತ್‌ ಆಯ್ಕೆಯಾಗಿದ್ದಾರೆ. ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಇಲ್ಲಿ ವೇದ, ಸಂಸ್ಕಾರ ಕಲಿಸಲಾಗಿದೆ. 23 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡುತ್ತಿದ್ದೇವೆ ಎಂದು  ಅಲ್ಲಿನ ಟ್ರಸ್ಟಿ ಹೇಳಿದ್ದಾರೆ.

ಸಂಸ್ಥೆಯಲ್ಲಿ ಆಚಾರ್ಯರಾಗಿ ಕಾರ್ಯನಿರ್ವಹಿಸುತ್ತಿರುವ ನಿತ್ಯಾನಂದ ಅವರು ಮಾತನಾಡಿ ಮೋಹಿತ್‌ ಪಾಂಡೆ ಅವರು ದೂದೇಶ್ವರ ವೇದ ವಿದ್ಯಾಪೀಠದಲ್ಲಿ ಏಳು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ ತಿರುಪತಿಯ ವೆಂಕಟೇಶ್ವರ ವೇದಿಕ್‌ ವಿಶ್ವವಿದ್ಯಾಲಯಕ್ಕೆ ತೆರಳಿದರು. ವಿದ್ಯಾರ್ಥಿಗಳಿಗೆ ಧರ್ಮ, ಸಂಸ್ಕಾರಗಳ ಬಗ್ಗೆ ತಿಳುವಳಿಕೆ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.