ಇಷ್ಟು ಮುದ್ದಾಗಿರುವ ಪತ್ನಿಯನ್ನು ವಿನೋದ್ ರಾಜ್ ದೂರ ಇಟ್ಟಿದ್ದು ಯಾಕೆ ಗೊ.ತ್ತಾ, ನಿಜಬಣ್ಣ ಬೆಳಕಿಗೆ

 | 
He

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಲೀಲಾವತಿ ಅವರು ಇನ್ನಿಲ್ಲವಾಗಿದ್ದಾರೆ. ಇನ್ನು ಲೀಲಾವತಿ ಅವರ ನಿಧನದ ನೋವಿನಲ್ಲಿರುವ ವಿನೋದ್ ರಾಜ್ ಅವರು ಪತ್ನಿಯನ್ನ ದೂರವಿಟ್ಟಿರುವುದರ ಬಗ್ಗೆ ಮೌನ ಮುರಿದಿದ್ದಾರೆ. ಹೆಂಡತಿ, ಮಗನನ್ನು ಯಾಕೆ ಇಷ್ಟು ವರ್ಷಗಳ ಕಾಲ ಕ್ಯಾಮರಾ ಕಣ್ಣಿನಿಂದ ದೂರವಿಟ್ಟಿದ್ದರು ಎನ್ನುವುದರ ಬಗ್ಗೆ ಮುಕ್ತವಾಗಿ ವಿನೋದ್ ಮಾತನಾಡಿದ್ದಾರೆ.

ವಿನೋದ್ ರಾಜ್ ಅವರು ತಾಯಿಯ ನಿಧನದ ನೋವಿನಿಂದ ಇನ್ನೂ ಹೊರಬಂದಿಲ್ಲ. ವಿನೋದ್ ಅವರು ಇದರ ನಡುವೆ ತಾಯಿಯ ಕೊನೆಯಾಸೆ ಏನಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅವರಿಗೆ ದೇವಸ್ಥಾನಗಳಿಗೆ ಭೇಟಿ ನೀಡುವ ಆಸೆಯಿತ್ತು ಎಂದಿದ್ದಾರೆ. ಬಳಿಕ ಲೀಲಾವತಿ ಅವರ ಸ್ಮಾರಕ ಕಟ್ಟುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

ಇದಕ್ಕೆಲ್ಲ ಸಮಯಬೇಕು. ಅಮ್ಮನಿಗೋಸ್ಕರ ಗುಡಿ ಇರಲೇಬೇಕು. ಇದರ ಬಗ್ಗೆ ಯೋಚಿಸಿ ಮಾಡುತ್ತೇವೆ ಎಂದು ಲೀಲಾವತಿ ಸ್ಮಾರಕದ ಬಗ್ಗೆ ವಿನೋದ್ ಮಾತನಾಡಿದ್ದಾರೆ. ಬಳಿಕ ಮಗ ಯುವರಾಜ್ ಬಗ್ಗೆ ಪ್ರತಿಕ್ರಿಯಿಸಿ ನನ್ನ ತಾಯಿ ಹೇಗೆ ನನ್ನನ್ನು ತಿದ್ದಿ ಪಾಠ ಹೇಳಿದ್ದಾರೋ, ಅದೇ ರೀತಿ ಯುವರಾಜ್ ನನ್ನು ಕೂಡ ತಮ್ಮ ಪತ್ನಿ ಬೆಳೆಸಿದ್ದಾರೆ. ಚೆನ್ನೈನ ಲ್ಲಿದ್ದರೂ ಕೂಡ ಕನ್ನಡ ಚೆನ್ನಾಗಿ ಮಾತನಾಡುತ್ತಾರೆ ಎಂದಿದ್ದಾರೆ. 

ಇಲ್ಲಿದ್ದಾಗ ಮಗ-ಪತ್ನಿಯ ಬಗ್ಗೆ ಏನೇನೋ ಮಾತು ಬರುವುದು ಬೇಡ ಅಂತ ನನ್ನ ಅಮ್ಮ ಮದ್ರಾಸ್‌ನಲ್ಲಿ ಟ್ಟರು. ಮಗನ ವಿದ್ಯಾಭ್ಯಾಸಕ್ಕಾಗಿ ನಮ್ಮಿಂದ ದೂರವಿಟ್ಟೆವು. ಅವನು ಚೆನ್ನಾಗಿ ಓದಬೇಕು ಎಂಬ ಆಸೆ ಇತ್ತು. ಅದರಂತೆ ಇಂದು ಮಗ ಚೆನ್ನಾಗಿ ಓದಿ ಕೆಲಸದಲ್ಲಿದ್ದಾನೆ. ತಿಂಗಳಿಗೆ 50,000 ಸಂಬಳ ಬರುತ್ತದೆ. ಅವನು ಸಿನೆಮಾ ರಂಗ ಪ್ರವೇಶಿಸುವುದು ಬೇಡ ಹಾಗಾಗಿ ಅವನನ್ನು ದೂರ ಉಳಿಸಬೇಕಾಯಿತು ಎಂದಿದ್ದಾರೆ.

ಲೀಲಾವತಿಯವರಿಗೆ ಮಗನ ವಿನೋದ್​ ಮೇಲೆ ಎಷ್ಟು ಪ್ರೀತಿ ಇತ್ತೋ ಅಷ್ಟೇ ಪ್ರೀತಿ ಮೊಮ್ಮಗನ ಮೇಲೂ ಇತ್ತು. ಮೊಮ್ಮಗನನ್ನು ಕಂಡರೆ ಅಜ್ಜಿ ಲೀಲಾವತಿ ಮುದ್ದಿಸುತ್ತಿದ್ದರಂತೆ. ಹಿಂದೊಮ್ಮೆ ಅನಾರೋಗ್ಯದಿಂದ ಕಂಗಲಾಗಿದ್ದಾಗ ಮೊಮ್ಮಗ ಅಜ್ಜಿಯನ್ನು ಕಾಣಲು ಚೆನ್ನೈನಿಂದ ಓಡೋಡಿ ಬರುತ್ತಾನೆ. ಲೀಲಾವತಿಯವರನ್ನು ಕಂಡು ಅಜ್ಜಿ ಎಂದು ಕರೆಯುತ್ತಾನೆ. 

ಈ ವೇಳೆ ಲೀಲಾವತಿಯವರು ಕಣ್ಣು ತೆರೆದು ಎಚ್ಚರಗೊಂಡು ಅವನನ್ನು ಕಣ್ಣು ತುಂಬಿಕೊಂಡರು ಅಮ್ಮನ  ಆಸೆಯಂತೆ ಅವನನ್ನು ಬೆಳೆಸಿದ್ದೇನೆ ಎಂದು ವಿನೋದ್ ರಾಜ್ ಕಣ್ಣೀರಿಡುತ್ತಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.