ಭಾಗ್ಯಲಕ್ಷ್ಮಿ ಸೀರಿಯಲ್ ಪೂಜಾ ಗೆ ಇಷ್ಟೊಂದು ಡಿಮ್ಯಾಂಡ್ ಯಾಕೆ, ಇವರು ಅಷ್ಟೊಂದು ಸೌಂದರ್ಯವತಿನಾ

 | 
Hi
 ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಕುತೂಹಲಕಾರಿ ಘಟ್ಟ ತಲುಪಿದೆ. ಪೂಜಾ ಹಾಗೂ ಕುಸುಮಾ ಜೊತೆ ಸೇರಿ ತಾಂಡವ್‌ ಮದುವೆ ನಿಲ್ಲಿಸಿದ್ದಾರೆ. ಭಾಗ್ಯಾ ಸ್ವಂತ ತಂಗಿ ಪೂಜಾ ಈಗ ಬಹಳ ಬದಲಾಗಿದ್ದಾಳೆ. ಮೊದಲೆಲ್ಲಾ ಲಕ್ಷ್ಮೀ, ಭಾಗ್ಯನನ್ನು ಕಂಡರೆ ಆಗದ ಪೂಜಾ, ಈಗ ಅಕ್ಕನ ಬದುಕು ಚೆನ್ನಾಗಿರಲಿ ಅದಕ್ಕಾಗಿ ಭಾವ ಬದಲಾಲಿ ಎಂದು ಬಯಸುತ್ತಿದ್ದಾಳೆ. ಅದಕ್ಕಾಗಿ ಕುಸುಮಾ ಜೊತೆ ಸೇರಿ ಮದುವೆ ನಿಲ್ಲಿಸಿದ್ದಾಳೆ. 
ಧಾರಾವಾಹಿ ಅರಂಭದಲ್ಲಿ ಪೂಜಾ ಪಾತ್ರಕ್ಕೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಆದರೆ ಈಗ ಪೂಜಾ ಧಾರಾವಾಹಿಯ ಹೈಲೈಟ್‌ ಅಗಿದ್ದಾಳೆ. ಅಂದಹಾಗೆ ಧಾರಾವಾಹಿಯಲ್ಲಿ ಪೂಜಾ ಪಾತ್ರ ಮಾಡುತ್ತಿರುವ ಹುಡುಗಿ ಹೆಸರು ಆಶಾ ಅಯ್ಯನರ್. ಹೌದು ಇದೀಗ ಅನುಬಂಧ ಅವಾರ್ಡ ಅಲ್ಲಿ ಉತ್ತಮ ಸಹೋದರಿ ಅವಾರ್ಡ ತಮ್ಮಾದಾಗಿಸಿ ಕೊಂಡಿದ್ದಾರೆ.
ಆಶಾಗೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಫಾಲೋವರ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಗೂ ಮುನ್ನ ಆಶಾ ಮೂರು ಗಂಟು ಹಾಗು ರಾಧಾ ರಮಣ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದರೆ ಈ ಚೆಲುವೆಗೆ ಹೆಸರು ತಂದುಕೊಟ್ಟದ್ದು ಭಾಗ್ಯಲಕ್ಷ್ಮೀ ಧಾರಾವಾಹಿಯ ಪೂಜಾ ಪಾತ್ರ. 
ದಾವಣಗೆರೆ ಮೂಲದ ಪೂಜಾ ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪೂಜಾಗೆ ನಟನೆ ಎಂದರೆ ಬಹಳ ಇಷ್ಟವಂತೆ. ಮದುವೆ ಆದ ನಂತರ ಕೂಡಾ ನಟನೆಯಲ್ಲಿ ಮುಂದುವರೆಯುವಾಗಿ ಆಶಾ ಹೇಳಿಕೊಂಡಿದ್ದಾರೆ. ಆದರೆ ತನ್ನ ವೃತ್ತಿಯನ್ನು ಗೌರವಿಸಿ, ಬೆಂಬಲ ನೀಡುವ ಹುಡುಗನನ್ನೇ ಮದುವೆ ಆಗುತ್ತೇನೆ. ಆಕ್ಟಿಂಗ್‌ ಇಷ್ಟಪಡದ ಹುಡುಗನನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಪೂಜಾ ತಾವು ಕೈ ಹಿಡಿಯುವ ಹುಡುಗ ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.