ಪ್ರಿಯಾಂಕಾ ಗಾಂಧಿ ಗಂಡ ಯಾಕೆ ಏಲ್ಲೂ ಕಾಣಿಸ್ತಿಲ್ಲ; ಈಕೆ ಮದುವೆ ಆಗಿದ್ದು ಯಾವಾಗ ಗೊ ತ್ತಾ
Aug 31, 2024, 14:42 IST
|
ಈ ದೇಶದ ಜನ ಮುಂದೆ ಅವಳಲ್ಲಿ ನನ್ನನ್ನು ಕಾಣುತ್ತಾರೆ. ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಮೊಮ್ಮಗಳು ಪ್ರಿಯಾಂಕಾ ಬಗ್ಗೆ ಆಡಿದ್ದ ಮಾತು. ಹೌದು ಪ್ರಿಯಾಂಕಾ ಗಾಂಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿನಾಯಕಿ ಸೋನಿಯಾ ಗಾಂಧಿ ಅವರ ಪುತ್ರಿ.
ಸೈಕಾಲಜಿ ವಿಷಯದಲ್ಲಿ ಪದವಿ ಪಡೆದಿರುವ ಪ್ರಿಯಾಂಕಾ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ. ಯಾವಾಗಲೂ ಪರದೆಯ ಹಿಂದಿದ್ದುಕೊಂಡೇ ಪಕ್ಷದ ಕೆಲಸ ಮಾಡಲು ಬಯಸುವ ಇವರು ಚುನಾವಣಾ ಸಂದರ್ಭಗಳಲ್ಲಿ ಮಾತ್ರ ಪಕ್ಷಕ್ಕಾಗಿ ಬಹಿರಂಗವಾಗಿ ಪ್ರಚಾರ ಮಾಡುತ್ತಾರೆ.
2007 ರಲ್ಲಿ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಉಂಟಾಗಿದ್ದ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಭಿನ್ನಮತ ಶಮನಗೊಳಿಸಲು ಇವರು ಮಾಡಿದ ಪ್ರಯತ್ನ ಗಮನಾರ್ಹವಾಗಿದೆ. ಗಾಂಧಿ ಪರಿವಾರದ ಪ್ರಮುಖ ಸದಸ್ಯೆಯಾಗಿರುವ ಇವರು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶ ಪೂರ್ವ ವಿಭಾಗ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ.
ವಾದ್ರಾ ಅವರನ್ನು ಮದುವೆಯಾದ ನಂತರ ಬೌದ್ಧ ಧರ್ಮ ಸ್ವೀಕರಿಸಿರುವ ಇವರು, ಬೌದ್ಧ ಧರ್ಮದ ಆಚರಣೆಗಳನ್ನು ಪಾಲಿಸುತ್ತಾರೆ ಹಾಗೂ ವಿಪಶ್ಯನ ಅನುಸರಿಸುತ್ತಾರೆ. ಇಂಗ್ಲಿಷಿನಲ್ಲಿ ಯೋಚಿಸಿ ಹಿಂದಿಯಲ್ಲಿ ಮಾತನಾಡುವ ರಾಹುಲ್ ಗಾಂಧಿಗೂ ಹಿಂದಿಯಲ್ಲೇ ನಿರರ್ಗಳವಾಗಿ ಮಾತನಾಡಬಲ್ಲ ಪ್ರಿಯಾಂಕಾಗೂ ಬಹಳ ವ್ಯತ್ಯಾಸವಿದೆ. ಪ್ರಿಯಾಂಕಾ ಗಾಂಧಿ ಅವರು ಬಾಲ್ಯದಲ್ಲಿ ಹಿಂದಿ ವಿದ್ವಾಂಸ ಹರಿವಂಶ್ ರಾಯ್ ಬಚ್ಚನ್ ಅಂದರೆ ಅಮಿತಾಬ್ ಬಚ್ಚನ್ ಅವರ ತಂದೆ ಅವರ ಮನೆಯಲ್ಲಿ ಕಳೆದಿದ್ದರು.
ಹೀಗಾಗಿ ಹಿಂದಿ ಭಾಷೆಯಲ್ಲಿ ಅವರಿಗೆ ಹಿಡಿತವಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ದ ಮೈತ್ರಿಯೊಂದಿಗೆ ಕಣದಲ್ಲಿ ಕಾಣಿಸಿಕೊಂಡು ಬಿಜೆಪಿಗೆ ಕಾಂಗ್ರೆಸ್ ಘಾಸಿ ಮಾಡಿರುವುದರಲ್ಲಿ ಪ್ರಿಯಾಂಕಾ ಗಾಂಧಿಯ ಹಿಂದಿ ಭಾಷಣಗಳ ಕೊಡುಗೆಯೂ ಬಹಳಷ್ಚಿದೆ.
ಇಷ್ಟೇ ಅಲ್ಲದೆ ಕರ್ನಾಟಕ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶಗಳಲ್ಲೂ ಪ್ರಿಯಾಂಕಾ ಅವರು ಪಕ್ಷದ ಸ್ಚಾರ್ ಪ್ರಚಾರಕಿಯಾಗಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿರುವುದಲ್ಲಿ ಸಿಂಹಪಾಲು ಕೊಡುಗೆ ಪ್ರಿಯಾಂಕಾ ಗಾಂಧಿಯದ್ದೇ ಎಂದರೂ ತಪ್ಪಾಗಲಾರದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.