ಧ್ರುವ ಸರ್ಜಾ ಪತ್ನಿ ಸೀಮಂತದಲ್ಲಿ ಮೇಘನಾ ರಾಜ್ ಕಾಣಿಸಿಕೊಂಡಿಲ್ಲ ಯಾಕೆ, ಧ್ರುವ ಎರಡನೇ ಮಗುವಿನ ಬಗ್ಗೆ ಮೇಘನಾ ಹೇಳಿದ್ದೇನು

 | 
Ju

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಂಪತಿ ಸದ್ಯ 2ನೇ ಮಗುವಿನ ಆಗಮನ ನಿರೀಕ್ಷೆಯಲ್ಲಿದ್ದಾರೆ. ಸಿಹಿಸುದ್ದಿ ಜೊತೆ ಇತ್ತೀಚಿಗೆ ಧ್ರುವ ಪತ್ನಿ ಪ್ರೇರಣಾಗೆ ಸೀಮಂತ ಕಾರ್ಯಕ್ರಮ ನೆರವೇರಿದ್ದು, ಈ ಕುರಿತ ವಿಡಿಯೋವೊಂದನ್ನ ನಟ ಶೇರ್ ಮಾಡಿದ್ದಾರೆ.ಪತ್ನಿ ಪ್ರೇರಣಾ ಸೀಮಂತ ಸಂಭ್ರಮ ವಿಡಿಯೋವನ್ನ ನಟ ಹಂಚಿಕೊಂಡಿದ್ದು, ಹಸಿರು ಬಣ್ಣದ ಸೀರೆಯಲ್ಲಿ ಪ್ರೇರಣಾ ಕಂಗೊಳಿಸಿದ್ದಾರೆ. 

ಲೈಟ್ ಬಣ್ಣದ ಉಡುಗೆಯಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ. ಕನಕಪುರ ರಸ್ತೆಯ ಫಾರ್ಮ್ ಹೌಸ್‌ನಲ್ಲಿ ಪ್ರೇರಣಾ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆಯಿತು. ಚಿರು ಸರ್ಜಾ ಫೋಟೋವನ್ನ ಫೋನ್‌ನಲ್ಲಿ ಧ್ರುವ ಪುತ್ರಿ ನೋಡ್ತಿರುವ ತುಣುಕು ಗಮನ ಸೆಳೆಯುತ್ತಿದೆ. ಧ್ರುವ ದಂಪತಿ, ಮಗಳಿಗೆ ಚಿರು ಅಂತ ಹೆಸರು ಹೇಳಿ ಕೊಡುತ್ತಿರೋದು ಮುದ್ದಾಗಿದೆ. ಮನೆಗೆ ಕಳೆದ ವರ್ಷ ಮುದ್ದು ಮಗಳ ಆಗಮನವಾಗಿದೆ. 

2ನೇ ಮಗುವಿನ ನಿರೀಕ್ಷೆಯಲ್ಲಿರುವ ಪ್ರೇರಣಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ಸೀಮಂತ ಶಾಸ್ತ್ರ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಆಪ್ತರು, ಅಭಿಮಾನಿಗಳು ವಿಶ್‌ ಮಾಡಿದ್ದಾರೆ. ಆಗಸ್ಟ್ 25ರಂದು ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಧ್ರುವ ಸರ್ಜಾ 2ನೇ ಮಗುವಿನ ಬಗ್ಗೆ ಗುಡ್ ನ್ಯೂಸ್ ಹೇಳಿದ್ದರು. ಇಷ್ಟೆಲ್ಲ ಸಂಭ್ರಮದ ನಡುವೆಯೂ ಬೇಸರದ ಸಂಗತಿ ಏನೆಂದರೆ ಈ ಸೀಮಂತ ಕ್ಕೆ ಮೇಘನಾ ರಾಜ್ ಅಗಮಿಸಿರಲಿಲ್ಲ. 

ಅಷ್ಟಕ್ಕೂ ಧ್ರುವ ಸರ್ಜಾ ಹಾಗೂ ಮೇಘನಾ ರಾಜ್ ಮಧ್ಯೆ ಏನೋ ಸರಿಯಿಲ್ಲ ಎಂಬ ಮಾತು ಈಗಾಗಲೇ ಹರಿದಾಡುತ್ತಿತ್ತು. ಅದಕ್ಕೆ ಸಾಕ್ಷಿ ಎನ್ನುವಂತೆ ಈ ಸಮಾರಂಭಕ್ಕೆ ಮೇಘನಾ ರಾಜ್ ಅಗಮಿಸದೆ ಇರುವುದು. ಆದರೆ ಇದರ ಅಸಲಿ ಕಾರಣವೇ ಬೇರೆ. ಅಷ್ಟಕ್ಕೂ ಮೇಘನಾ ರಾಜ್ ತಮ್ಮ ಬ್ಯುಸಿನೆಸ್ ಕಾರಣದಿಂದ ವಿದೇಶಕ್ಕೆ ಹೋಗಿದ್ದಾರೆ. 

ತಿರುಗಿ ಬರಲು ಆಗದ ಕಾರಣ ಅಲ್ಲಿಂದಲೇ ಕರೆಮಾಡಿ ವಿಶ್ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ಜೂನಿಯರ್ ಚಿರು ತನ್ನ ಅಜ್ಜ ಅಜ್ಜಿ ಯ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.