ವಯಸ್ಸು 51 ಆದರೂ ನಟಿ ಸಿತಾರಾ ಮದುವೆಯಾಗಲಿಲ್ಲ ಯಾಕೆ, ಆ ಸ್ಟಾರ್ ನಟ ಮಾಡಿದ್ದೇನು ಗೊತ್ತಾ
Feb 9, 2025, 15:31 IST
|

ಸಿತಾರಾ ದಕ್ಷಿಣ ಭಾರತದ ಖ್ಯಾತ ನಟಿ. ಮೂಲ ಮಲಯಾಳಿಯಾದರೂ, ಮಲಯಾಳಂ, ಕನ್ನಡ, ತಮಿಳು, ತೆಲುಗು ಚಿತ್ರೋದ್ಯಮದಲ್ಲಿ ತಮ್ಮದೇ ಖ್ಯಾತಿಯನ್ನು ಗಳಿಸಿದವರು. 90ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಸಿತಾರಾ, ಇಂದಿಗೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಪೋಷಕ ಪಾತ್ರಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. ಸಿನಿಮಾಗಳ ಜತೆಯಲ್ಲಿ ಕಿರುತೆರೆ ಕ್ಷೇತ್ರದಲ್ಲಿಯೂ ಸಿತಾರಾ ಗುರುತಿಸಿಕೊಂಡಿದ್ದಾರೆ.
ಇಂದಿಗೂ ತಮಿಳಿನ ಪೂವ ತಲಾಯ ಸೀರಿಯಲ್‌ನಲ್ಲಿ ರಾಜೇಶ್ವರಿ ಹೆಸರಿನ ಪಾತ್ರದಲ್ಲಿ ಸಿತಾರಾ ನಟಿಸುತ್ತಿದ್ದಾರೆ.ಕನ್ನಡದಲ್ಲಿ 1994ರಲ್ಲಿ ಬಂದ ವಿಷ್ಣುವರ್ಧನ್ ನಾಯಕನಾಗಿ ನಟಿಸಿದ ಹಾಲುಂಡ ತವರು ಸಿನಿಮಾದಿಂದ ಸಿತಾರ ಸಿನಿಮಾ ಜರ್ನಿ ಶುರುವಾಯ್ತು. ಅಲ್ಲಿಂದ ಮತ್ತೆ ಹಿಂದೆ ತಿರುಗಿ ನೋಡದ ಅವರು, ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತ, ಯಶಸ್ಸಿನ ಅಲೆಯಲ್ಲಿ ಮುಂದುವರಿದರು.
1995ರಲ್ಲಿ ಒಂದೇ ವರ್ಷದಲ್ಲಿ ಒಂದಲ್ಲ ಎರಡಲ್ಲ ಒರೋಬ್ಬರಿ ಐದು ಸಿನಿಮಾಗಳು ತೆರೆಗೆ ಬಂದವು. ಕರುಳಿನ ಕುಡಿ, ಕಾವ್ಯಾ, ಬಂಗಾರದ ಕಳಶ, ದೀರ್ಘ ಸುಮಂಗಲಿ, ಗಣೇಶನ ಗಲಾಟೆ ಚಿತ್ರಗಳು ಒಳ್ಳೆಯ ಹೆಸರು ತಂದುಕೊಟ್ಟವು.2001ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ತೆರೆಗೆ ಬಂದ ಜೇನು ಗೂಡು ಸಿನಿಮಾ ಬಳಿಕ, ಸುದೀರ್ಘ 10 ವರ್ಷಗಳ ನಂತರ, ಪ್ರಕಾಶ್ ರಾಜ್ ಜತೆಗೆ ನಾನು ನನ್ನ ಕನಸು ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿದ್ದ ಸಿತಾರಾ, ಅದಾದ ಬಳಿಕ 2015ರಲ್ಲಿ ಮಿ. ಐರಾವತ, ಚಕ್ರವ್ಯೂಹ, ಬೃಹಸ್ಪತಿ, ಬಕಾಸುರ ಸಿನಿಮಾಗಳಲ್ಲಿ ನಟಿಸಿದರು.
2018ರಲ್ಲಿ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿದ ಅಮ್ಮ ಐ ಲವ್ ಯೂ ಚಿತ್ರವೇ ಅವರ ಕೊನೆಯ ಕನ್ನಡ ಸಿನಿಮಾ. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ಜತೆಗೆ ಕಿರುತೆರೆಯಲ್ಲಿಯೂ ಹೆಚ್ಚೆಚ್ಚು ಕಾಣಿಸತೊಡಗಿದರು.ಹೀಗೆ ವೃತ್ತಿಯಲ್ಲಿ ಯಶಸ್ಸು ಕಂಡರೂ, ವೈಯಕ್ತಿಕ ಜೀವನದಲ್ಲಿ ಮಾತ್ರ ಸಿತಾರಾ ನೋವು ಅನುಭವಿಸಿದರು. ಸದ್ಯ ಅವರಿಗೆ 50 ವರ್ಷ ವಯಸ್ಸು. ಇಂದಿಗೂ ಸಿತಾರಾ ಮದುವೆಯಾಗಿಲ್ಲ. ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಹಲವು ಸ್ಟಾರ್ ನಟರ ಜೊತೆ ಜೋಡಿಯಾಗಿ ನಟಿಸಿ ಚಿತ್ರರಂಗದಲ್ಲಿ 30 ವರ್ಷವನ್ನು ಸವೆಸಿ ಸ್ಟಾರ್ ನಟಿಯಾಗಿ ಮಿಂಚಿದರೂ ಸಿತಾರಾ ಮಾತ್ರ ಇಂದಿಗ ಅವಿವಾಹಿತರಾಗಿಯೇ ಉಳಿದಿದ್ದಾರೆ. ಅದಕ್ಕೆ ಕಾರಣ ಏನೆಂದು ಕೇಳಿದರೆ, ಅವರಿಂದ ಬರುವ ಉತ್ತರ ಅದೊಂದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.