ಚಿಕನ್ ಗೆ ಖಾರ ಮೆಣಸು ಹಾಕಿದ ಪತ್ನಿ; ರೊಚ್ಚಿಗೆದ್ದ ಗಂಡ ಮಾಡಿದ್ದೇನು ಗೊ.ತ್ತಾ

 | 
Yy

ಈಗೆಲ್ಲ ದುನಿಯಾ ಬದಲಾಗಿದೆ. ಪತಿ ಪತ್ನಿಯ ನಡುವೆ ಯಾವ ಕಾರಣಕ್ಕೆ ಜಗಳ ಉಂಟಾಗುತ್ತದೆ ಎಂದು ಯಾರೂ ಹೇಳಲಾಗದು ಹೌದು ಇತ್ತೀಚಿಗೆ ಕ್ಷುಲ್ಲಕ ಕಾರಣಗಳಿಗೆ ಪತಿ ಪತ್ನಿಯ ನಡುವೆ ಜಗಳ ಮನಸ್ತಾಪಗಳು ಹೆಚ್ಚಾಗಿವೆ. ಹೀಗೊಂದು ವೈರಲ್ ಆದ ವಿಡಿಯೋದಲ್ಲಿ ಪತಿ ಪತ್ನಿಯನ್ನು ಮಹಡಿಯಿಂದ ಕೆಳಕೆ ತಳ್ಳಿದ್ದಾನೆ. ಈ ದೃಶ್ಯ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ.

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎನ್ನುವ ಮಾತು ಕೂಡ ಇದೀಗ ಸುಳ್ಳಾಗಿದೆ. ಪಾಪಿ ಪತಿಯೊಬ್ಬ ಚಿಕನ್‌ಗೆ ಕಡಿಮೆ ಖಾರ ಬಳಸಿರುವುದಾಗಿ ಹೇಳಿ ಪತ್ನಿಯನ್ನು ಮಹಡಿಯಲ್ಲಿನ ಕಿಟಕಿಯಿಂದ ಕೆಳಗೆ ತಳ್ಳಿದ್ದಾನೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ಈ ಘಟನೆ ಪಾಕಿಸ್ತಾನದ ಲಾಹೋರ್‌ದಲ್ಲಿ ನಡೆದಿದೆ.

ಪತಿ ಪತ್ನಿಯ ನಡುವೆ ನಡೆದ ಜಗಳ ಮನೆಯ ಹೊರಗಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜಗಳ ತೀವ್ರಗೊಳ್ಳುತ್ತಿದ್ದಂತೆ ಪತಿ ಪತ್ನಿಯನ್ನು ಕಿಟಕಿಯಿಂದ ಹೊರಗೆ ತಳ್ಳಿದ್ದಾನೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾಳೆ ಎನ್ನಲಾಗಿದೆ.

ಇದೇ ವೇಳೆ ಪಕ್ಕದ ಮನೆಯ ಬಾಲಕಿ ಮನೆ ಬಾಗಿಲು ತೆಗೆಯುತ್ತಾಳೆ. ತಕ್ಷಣ ಮಹಡಿ ಮೇಲಿಂದ ಜಗಳ ತೀವ್ರಗೊಳ್ಳುವುದು ಕೇಳಿ ಭಯದಿಂದ ಬಾಲಕಿ ಮತ್ತೆ ಬಾಗಿಲನ್ನು ಹಾಕಿಕೊಳ್ಳುತ್ತಾಳೆ. ಕೋಳಿ ಮಾಂಸದ ಆಹಾರ ತಯಾರಿಸುವಾಗ ಖಾರ ಹಾಕಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ಆಕೆಯ ಪತಿ ಮತ್ತು ಅತ್ತೆ ಬಲವಂತವಾಗಿ ಆಕೆಯನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾರೆ ಒಟ್ಟಿನಲ್ಲಿ ಸಣ್ಣ ಪುಟ್ಟ ಕಾರಣಗಳಿಗೂ ಇಂತಹ ಶಿಕ್ಷೆ ವಿಧಿಸಿದ್ದು ನೋಡುಗರ ಕೆಂಗಣ್ಣಿಗೆ ಗುರಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.