ಒಂದು ರಾತ್ರಿನೂ ಮುಟ್ಟಕ್ಕೆ ಬಿಟ್ಟಿಲ್ಲ ಪತ್ನಿ, ಬ್ಯೂಟಿ ಮೇಲೆ ಆಂಟಿ ಕಣ್ಣು
Mar 20, 2025, 19:38 IST
|

ಹೈಫೈ ಕಾರ್ಪೋರೇಟ್ ಹೆಂಡತಿಯೊಬ್ಬಳು ಮದುವೆ ಬೇಕು, ಆದ್ರೆ ಸಂಸಾರ ಬೇಡ, ನನ್ನನ್ನು ಮುಟ್ಟಬೇಡ, ನನ್ನ ಬ್ಯೂಟಿ ಹಾಳಾಗತ್ತೆ ಎಂದು ಕಾಟ ಕೊಡುತ್ತಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. ಅಲ್ಲದೇ ಆಕೆ ಜೊತೆ ಮಲಗಲು ನಿತ್ಯ 5000 ಕೊಡಬೇಕೆಂದು ಕಿರುಕುಳ ನೀಡುತ್ತಾಳೆಂದು ಬೆಂಗಳೂರಿನ ಟೆಕ್ಕಿ ಪತಿ ತನ್ನ ಪತ್ನಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈಗ ಗಂಡನ ಸಾಲು ಸಾಲು ಆರೋಪಕ್ಕೆ ಪತ್ನಿ ಸ್ಪಷ್ಟನೆ ಕೊಟ್ಟಿದ್ದು, ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹಾಗಾದ್ರೆ, ಗಂಡನ ಆರೋಪಕ್ಕೆ ಪತ್ನಿ ಹೇಳಿದ್ದೇನು ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ
ನನ್ನ ಹೆಂಡತಿ ಮದುವೆ ಮಾಡಿಕೊಳ್ಳುವುದಕ್ಕೆ ಮಾತ್ರ ಒಪ್ಪಿಕೊಂಡಿದ್ದು, ಮಕ್ಕಳನ್ನು ಮಾಡಿಕೊಳ್ಳುವುದಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಜತೆ ಮಲಗಲು ನಿತ್ಯ 5000 ರೂ.ಗೆ ಬೇಡಿಕೆ ಇಡುತ್ತಾಳೆಂದು ಬೆಂಗಳೂರಿನ ಟೆಕ್ಕಿ ಪತಿಯೊಬ್ಬ ಹೆಂಡತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.ಇದೀಗ ಪತ್ನಿ ಬಿಂದುಶ್ರೀ ಪತಿ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಶ್ರೀಕಾಂತ್ ಪತ್ನಿ, ಅವರೇ ನನಗೆ ಹೊಡಿಯೋದು, ಬಡಿಯೋದು ಮಾಡಿದ್ದಾರೆ.
ಸೊಸೆ ಅಂದ್ರೆ ಕೆಲಸದವಳು ಅನ್ಕೊಂಡಿದ್ರು. ವರದಕ್ಷಿಣೆ ವಿಚಾರಕ್ಕೂ ಕಿರುಕುಳ ಕೊಟ್ಟಿದ್ದಾರೆ. ವೈಯಾಲಿಕವಲ್ ಠಾಣೆಯಲ್ಲಿ ಈ ಹಿಂದೆ ದೂರು ಕೊಟ್ಟಿದ್ದೆ ಎಂದಿದ್ದಾರೆ.ಅವರ ತಾಯಿ ಬೆಡ್ ರೂಂನಲ್ಲಿ ಕ್ಯಾಮೆರಾ ಫಿಕ್ಸ್ ಮಾಡು, ಡೈವರ್ಸ್ ತಕೋ ಅಂತಾರೆ. ಜೋಕು ಮಾಡೋದನ್ನೂ ವಿಡಿಯೋ ಮಾಡಿದ್ದಾರೆ. ಎಡಿಟ್ ಮಾಡಿ ವಿಡಿಯೋ ಕೊಟ್ಟಿದ್ದಾರೆ. ಸರಿಯಾಗಿ ಊಟ ಕೂಡ ಕೊಡ್ತಿರ್ಲಿಲ್ಲ. ಮನೆಗೆ ಸರಿಯಾಗಿ ಸಾಮಾನು ತರ್ತಿರ್ಲಿಲ್ಲ ಇನ್ನು 5 ಸಾವಿರ ಕೊಡ್ತಾರಾ? ಮಕ್ಕಳನ್ನು ಮಾಡಿಬಿಡು, ಅವಳು ಎಲ್ಲೂ ಹೋಗಲ್ಲ ಅಂತ ಅವರ ಅಣ್ಣ ಹೇಳಿಕೊಟ್ಟಿದ್ದಾರೆ. ಯಾವ ಧೈರ್ಯದ ಮೇಲೆ ನಾನು ಮಕ್ಕಳು ಮಾಡಿಕೊಳ್ಳಲಿ ಎಂದು ತಮ್ಮ ವಿರುದ್ಧ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಅವರ ಮನೆಯವರೇ ದಿನಾಲೂ ಕಿರುಕುಳ ಕೊಟ್ಟಿದ್ದಾರೆ. ಇಡಿ ಫ್ಯಾಮಿಲಿ ಟಾರ್ಚರ್ ಕೊಡೋಕೆ ಶುರು ಮಾಡಿದ್ರು. ನಂತರ ಮನೆ ಬಿಟ್ಟು ಅಮ್ಮನ ಮನೆಗೆ ಹೋಗಿದ್ದೆ, ಮತ್ತೆ ಬಂದೆ. ಡೈವರ್ಸ್ ಮುಚ್ಯೂಲ್ ತಕೊಳೋನಾ ಅನ್ಕೊಂಡೆ, ಆದರೆ ನಮ್ಮ ತಂದೆ ತಾಯಿ ಕಷ್ಟ ಪಟ್ಟು ಮದುವೆ ಮಾಡಿದ್ದಾರೆ. ಹೀಗಾಗಿ ಎಲ್ಲಾ ಹೆಣ್ಣು ಮಕ್ಕಳಂತೆ ನಾನು ಕೇಳಿದ್ದೇನೆ ಎಂದಿದ್ದಾರೆ.ನಾವಿಬ್ಬರೂ ಮದುವೆಯಾಗಿ ಎರಡು ವರ್ಷ ಕಳೆದಿದೆ.
ಆದರೆ, ಈಗ ನನ್ನ ಹೆಂಡತಿ ಸಂಸಾರ ಮಾಡಲು ಒಪ್ಪುತ್ತಿಲ್ಲವೆಂದು ಸುಳ್ಳು ಹೇಳಿದ್ದಾರೆ. ತಮಗೆ ಹೇಗೆ ಬೇಕೋ ಹಾಗೆ ಆಡಿಯೋ ವಿಡಿಯೋ ಎಡಿಟ್ ಮಾಡಿ ಮಾಧ್ಯಮಗಳ ಮುಂದೆ ಕೊಟ್ಟಿದ್ದಾರೆ ಎಂದು ಗಂಡ ಶ್ರೀಕಾಂತ್ ವಿರುದ್ಧ ಹೆಂಡತಿ ಬಿಂದುಶ್ರೀ ಆರೋಪ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.