ಪ್ರತಿ ತಿಂಗಳು 5 ಸಾವಿರಕ್ಕೆ ಬೇಡಿಕೆ ಇಟ್ಟ‌ ಪತ್ನಿ, ಹಣ ಕೊಟ್ಟ ಮೇಲೆ ಮಗು ಮಾಡ್ಕೋಳನ ಎಂದ ಧರ್ಮಪತ್ನಿ

 | 
Bj
ಎಂತೆಂಥ ವಿಚಿತ್ರ ಜನರಿರುತ್ತಾರೆ ನೋಡಿ.ನಾನು ನಿನ್ನ ಜೊತೆ ಮದುವೆ ಮಾಡಿಕೊಳ್ಳುವುದಕ್ಕೆ ಮಾತ್ರ ಒಪ್ಪಿಗೆ ಕೊಟ್ಟಿರುವುದು, ಮಕ್ಕಳನ್ನು ಮಾಡಿಕೊಳ್ಳೋದಕ್ಕೆ ನನ್ನ ಒಪ್ಪಿಗೆಯಿಲ್ಲ. ನೀನು ಮಕ್ಕಳು ಬೇಕೆಂದು ಸಂಸಾರ ಮಾಡಿದರೆ ನನ್ನ ಸೌಂದರ್ಯ ಹಾಳಾಗುತ್ತದೆ ಎಂದು ಗಂಡನಿಗೆ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಂಡನ ದೇಹದ ವಿವಿಧೆಡೆ ಗಾಯಗಳಾಗಿದ್ದು, ಹೆಂಡತಿ ವಿರುದ್ಧ ಗಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಬೆಂಗಳೂರಿನಲ್ಲಿ ಹೆಂಡತಿಯ ದೌರ್ಜನ್ಯಕ್ಕೆ ಅತುಲ್ ಸಂತೋಷ್ ಸಾವಿಗೀಡಾದ ಪ್ರಕರಣ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲಿಯೇ ಮತ್ತೊಂದು ಘಟನೆಯಲ್ಲಿ ಮಹಿಳೆಯೊಬ್ಬರು ತನ್ನ ಗಂಡನೊಂದಿಗೆ ಮಕ್ಕಳು ಮಾಡಿಕೊಳ್ಳುವುದು ಬೇಡವೆಂದು ಕಿರುಕುಳ ನೀಡಿದ ಘಟನೆ ನಡೆದಿದೆ. ನನಗೆ ಮದುವೆ ಬೇಕು, ಆದರೆ ಸಂಸಾರ ಬೇಡ. ಸಂಸಾರ ಆರಂಭಿಸಿ ಮಕ್ಕಳನ್ನು ಮಾಡಿಕೊಂಡರೆ ನನ್ನ ಸೌಂದರ್ಯ ಹಾಳಾಗುತ್ತದೆ. ನನ್ನನ್ನು ಮುಟ್ಟಬೇಡ ನನ್ನ ಬ್ಯೂಟಿ ಹಾಳಾಗತ್ತದೆ. ನಮಗೆ ಮಕ್ಕಳು ಬೇಡ ದತ್ತು ಮಕ್ಕಳನ್ನು ಸಾಕೋಣ ಎಂದು ಹೇಳಿದ್ದಾಳೆ.
ನನಗೆ ಇವಾಗ ಮಕ್ಕಳು ಬೇಡವೇ ಬೇಡ. ಬೇಕಾದರೆ, 60 ವರ್ಷದ ನಂತರ ಮಕ್ಕಳು ಮಾಡಿಕೊಳ್ಳೋಣ. ಒಂದು ವೇಳೆ ಈಗ ನೀನು ನನಗೆ ಡಿವೋರ್ಸ್ ಕೊಡಬೇಕು ಎಂದರೂ 45 ಲಕ್ಷ ರೂ. ಹಣವನ್ನು ಕೊಡು ಎಂದು ಹೆಂಡತಿ ಬಿಂದುಶ್ರಿ ಎಂಬಾಕೆ ಗಂಡ ಶ್ರೀಕಾಂತ್‌ಗೆ ಕಿರುಕುಳ ನೀಡಿದ್ದಾರೆ. ಈ ಶ್ರೀಕಾಂತನ ಕಥೆ ಇತ್ತೀಚೆಗೆ ಹೆಂಡತಿಯ ಕಿರುಕುಳದಿಂದ ಬೇಸತ್ತು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಟೆಕ್ಕಿ ಅತುಲ್‌ ಸುಭಾಷ್‌ ಕೇಸ್ ನೆನಪಿಗೆ ಬರುತ್ತದೆ.
ಶ್ರೀಕಾಂತ ಮತ್ತು ಬಿಂದುಶ್ರೀಗೆ ಕಳೆದ ಎರಡು ವರ್ಷಗಳ ಹಿಂದೆ ಮದಿವೆಯಾಗಿದೆ. ಹನಿಮೂನ್‌ಗೆಂದು ಭಾರತದ ವಿವಿಧ ಪ್ರದೇಶಗಳಿಗೆ ಹೋಗಿ ಬಂದಿದ್ದಾರೆ. ಕಾಶ್ಮೀರಕ್ಕೂ ಹೋಗಿ ಬಂದಿರುವ ಜೋಡಿಯ ನಡುವೆ ಇನ್ನೂ ಮಕ್ಕಳು ಮಾಡಿಕೊಳ್ಳುವ ಸಂಸಾರವೇ ನಡೆದಿಲ್ಲವಂತೆ. ಗಂಡನೇ ಬಲವಂತವಾಗಿ ಮುಟ್ಟಿದರೆ ಡೆಟ್ ನೋಟ್ ಬರೆದಿಟ್ಟು ಸಾಯುತ್ತೀನಿ ಎಂದು ಹೆಂಡತಿ ಬಿಂದುಶ್ರಿ ಬ್ಲಾಕ್‌ಮೇಲ್ ಮಾಡಿದ್ದಾಳಂತೆ. ಇದೀಗ ಹೆಂಡತಿಯ ಈ ವರತನೆಯಿಂದ ಗಂಡ ಬೇಸತ್ತು ಹೋಗಿದ್ದಾನಂತೆ. 
ಮನೆಯವರು ಮದುವೆಯಾಗಿ 2 ವರ್ಷ ಆಯ್ತು, ಮಕ್ಕಳು ಯಾವಾಗ ಮಾಡಿಕೊಳ್ತೀರಿ ಎಂದು ಕೇಳುವ ಹಿರಿಯರಿಗೆ ಉತ್ತರ ಕೊಡಲಾಗದೇ ಶ್ರೀಕಾಂತ ಪರದಾಡುತ್ತಿದ್ದಾನೆ. ಗಂಡ-ಹೆಂಡತಿ ಆಗಿದ್ದೀವಿ ಸಂಸಾರಕ್ಕಾದರೂ ಒಪ್ಪಿಕೊಳ್ಳುವಂತೆ ಕೇಳಿದರೆ, ನೀನು ಯಾರ ಪಕ್ಕನಾದರೂ ಹೋಗಿ ಮಲಗಿಕೋ.. ಆದರೆ, ನನ್ನ ಬಳಿ ಮಾತ್ರ ಬರಬೇಡಾ ಎನ್ನುತ್ತಿದ್ದಾಳಂತೆ. ಇದರಿಂದ ತೀವ್ರ ಬೇಸತ್ತ ಗಂಡ ಶ್ರೀಕಾಂತ ಸದ್ಯ ಹೆಂಡತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಮಲ್ಲೇಶ್ವರಂ ಬಳಿಯ ವಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಶ್ರೀಕಾಂತ್ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್ ದಾಖಲು ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.