ಸ್ನೇಹಿತನ ಜೊತೆ ಪತ್ನಿ ಪರಾರಿ, ವಿಡಿಯೋ ಮಾಡಿ ಸು ಸೈಡ್ ಮಾಡಲು ಮುಂದಾದ ಪತಿ
Feb 19, 2025, 15:12 IST
|

ಜಗತ್ತು ಬದಲಾಗಿದೆ. ನಿಜವಾದ ಪ್ರೀತಿಗೆ ಇಲ್ಲಿ ಬೆಲೆ ಇಲ್ಲ
ಗಂಡ, ಮಕ್ಕಳನ್ನು ತ್ಯಜಿಸಿ ಪ್ರಿಯಕರನೊಂದಿಗೆ ಓಡಿಹೋದ ಪತ್ನಿಯ ನಡತೆಯ ಬಗ್ಗೆ ಜಿಗುಪ್ಸೆಗೊಂಡ ಪತಿ ನಾಗೇಶ್ ಗುಬ್ಬಿ ಪಟ್ಟಣದ ಅವರ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಷ್ಟಕ್ಕೂ ನಾಗೇಶ್ ಮತ್ತು ಪತ್ನಿ ರಂಜಿತಾ 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ 8 ವರ್ಷದ ಮಗ ಮತ್ತು 5 ವರ್ಷದ ಮಗಳು ಇದ್ದಾರೆ.ರಂಜಿತಾ ಇತ್ತೀಚಿಗೆ ನಾಗೇಶ್ ಅವರ ಸ್ನೇಹಿತ ಭರತ್ ಜೊತೆ ಸಲುಗೆಯಿಂದ ಇದ್ದು ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ನಾಗೇಶ್ ಇಬ್ಬರಿಗೂ ಅನೇಕ ಬಾರಿ ತಿಳಿವಳಿಕೆ ಹೇಳಿದರೂ ಪ್ರಯೋಜನವಾಗಿರಲಿಲ್ಲ.
ಮೂರು ದಿನದ ಹಿಂದೆ ರಂಜಿತಾ ಮಕ್ಕಳನ್ನು ಬಿಟ್ಟು ಭರತ್ ಜೊತೆ ಓಡಿಹೋಗಿದ್ದರು. ಜಿಗುಪ್ಸೆಗೊಂಡ ನಾಗೇಶ್ ಮಂಗಳವಾರ ಬೆಳಗ್ಗೆ ಮಕ್ಕಳು ಶಾಲೆಗೆ ಹೋದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಮುಂಚೆ ನಾಗೇಶ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ವಿಡಿಯೋ ಕಂಡ ಆತನ ಸ್ನೇಹಿತರು ಮನೆ ಬಳಿ ಬರುವ ವೇಳೆಗೆ ನಾಗೇಶ್ ಮೃತಪಟ್ಟಿದ್ದರು ಎನ್ನಲಾಗಿದೆ.ತಕ್ಷಣ ಸ್ನೇಹಿತರು ಗುಬ್ಬಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಘಟನೆಯ ನಂತರ, ಮಹಿಳೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.