ಗಂಡನನ್ನು ನೋಡಿ ಕಣ್ಣೀ‌‌‌ ರು ಹಾಕುತ್ತಾಲೇ ಹೊರ ಬಂದ ಪತ್ನಿ ವಿಜಯಲಕ್ಷ್ಮಿ

 | 
Gh

ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ ಅವರನ್ನು ನೋಡಲು ಬಂದಿದ್ದ ಪತ್ನಿ ವಿಜಯಲಕ್ಷ್ಮಿ, ಪತಿಗಾಗಿ ಕೆಲವು ವಸ್ತುಗಳನ್ನು ತಂದಿದ್ದರು. ಅವುಗಳಲ್ಲಿ ಒಂದು ವಸ್ತುವನ್ನು ಪೊಲೀಸರು ವಾಪಸ್ ಕಳಿಸಿದ್ದಾರೆ. ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ನಟ ದರ್ಶನ್ ಅನ್ನು ಕಾಣಲು ಪತ್ನಿ ವಿಜಯಲಕ್ಷ್ಮಿ ದರ್ಶನ್ ನಿನ್ನೆ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. ಬರಬೇಕಾದರೆ ಪತಿಗಾಗಿ ಕೆಲವು ಅಗತ್ಯ ವಸ್ತುಗಳನ್ನು ಸಹ ತಂದಿದ್ದರು.

 ವಿಜಯಲಕ್ಷ್ಮಿ ಅವರನ್ನು ಒಳಗೆ ಬಿಡುವ ಮುನ್ನ ಪೊಲೀಸರು ಪರಿಶೀಲನೆ ಮಾಡಿ, ಅವರು ತಂದ ವಸ್ತುಗಳನ್ನು ಸಹ ಪರಿಶೀಲನೆ ಮಾಡಿದರು. ವಿಜಯಲಕ್ಷ್ಮಿ ಅವರ ಆಗಮನದ ಬಗ್ಗೆ ಮಾತನಾಡಿದ ಪ್ರಿಸನ್ ಡಿಐಜಿ ಶೇಷ, ‘ವಿಜಯಲಕ್ಷ್ಮಿ ಅವರು ದರ್ಶನ್​ಗಾಗಿ ಡ್ರೈ ಫ್ರೂಟ್ಸ್, ಸೋಪು, ಶಾಂಪು, ಪೇಸ್ಟುಗಳನ್ನು ತಂದಿದ್ದರು. ಬಟ್ಟೆಗಳನ್ನು ಸಹ ತಂದಿದ್ದರು.

ಒಂದು ಬ್ಲಾಂಕೆಟ್ ತಂದಿದ್ದರು ಅದನ್ನು ನಾವು ವಾಪಸ್ ಕಳಿಸಿದ್ದೇವೆ. ಬೆಟ್​ಶೀಟ್, ಹಾಸಿಗೆಗಳನ್ನು ಹೊರಗಿನಿಂದ ಕೊಡುವಂತಿಲ್ಲ. ಜೈಲಿನ ಹಾಸಿಗೆ ಬೆಡ್​​ಶೀಟ್​ಗಳನ್ನೇ ಬಳಸಬೇಕಿರುತ್ತದೆ ಎಂದಿದ್ದಾರೆ.ದರ್ಶನ್‌ ಗೆ ಅವರು ತಂದಿದ್ದ ಬಟ್ಟೆ, ಸಾಬೂನು, ಶಾಂಪೂ ಮತ್ತು ಒಣ ಹಣ್ಣುಗಳನ್ನು ನೀಡಲು ಮಾತ್ರ ಅನುಮತಿ ನೀಡಲಾಗಿದ್ದು, ಬೇರೆ ಯಾವುದೇ ವಸ್ತುಗಳನ್ನು ನೀಡಲು ಅನುಮತಿ ನೀಡಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿ ಜೈಲಿಗೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ಇತರೆ ಖೈದಿಗಳನ್ನು ನೋಡಲು ಬರುವ ಬಂಧು ಬಳಗದವರನ್ನೂ ತಪಾಸಣೆ ನಡೆಸಿಯೇ ಒಳಗೆ ಬಿಡಲಾಗುತ್ತದೆ. ಅವರು ತಂದಿದ್ದ ಆಹಾರ ಪದಾರ್ಥಗಳನ್ನು ತಮ್ಮವರಿಗೆ ನೀಡಲು ಜೈಲಿನ ಅಧಿಕಾರಿಗಳು ಒಪ್ಪುತ್ತಿಲ್ಲ ಎಂದು ಸಾರ್ವಜನಿಕರು ಅಲವತ್ತುಕೊಂಡಿದ್ದಾರೆ. 

ಸಧ್ಯಕ್ಕೆ ಈ ಜೈಲಿನಲ್ಲಿ ಸಿಸಿಟಿವಿ ವ್ಯವಸ್ಥೆ ಮಾತ್ರ ಇದ್ದು, ಮೊಬೈಲ್‌ ಜಾಮರ್‌ ವ್ಯವಸ್ಥೆ ಇಲ್ಲ. ಶೀಘ್ರದಲ್ಲೇ ಈ ವ್ಯವಸ್ಥೆಯನ್ನೂ ಮಾಡುವುದಾಗಿ ಅಧೀಕ್ಷಕರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.