ಈ ಮಹಾನ್ ವ್ಯಕ್ತಿಯ ಕಥೆ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಾ

 | 
ಕ್

 ರೋಡಲ್ಲಿ ಸೈಕಲ್ ನಲ್ಲಿ ಹೋಗುತ್ತಿದ್ದ ಭಿಕ್ಷುಕನಂತಿದ್ದ ವ್ಯಕ್ತಿಯನ್ನು ನೋಡಿ ಪೊಲೀಸ್ ಅಧಿಕಾರಿಗಳು ತಡೆದು ನಿಲ್ಲಿಸಿದರು. ಅವನನ್ನು ನೋಡಿ ಬಿಕ್ಷೆ ಬೇಡುವ ಕೆಲಸ ತಪ್ಪು ಎಂದು ಬುದ್ಧಿ ಹೇಳಿದರು. ಆದರೆ ಆ ವ್ಯಕ್ತಿಯ ಬಗ್ಗೆ ತಿಳಿದಮೇಲೆ ಅವರೇ ಸೆಲ್ಯೂಟ್ ಹೊಡೆದು ಕಳಿಸಿಕೊಟ್ಟ ಘಟನೆ ನಡೆದಿದ್ದು ಮಧ್ಯಪ್ರದೇಶದಲ್ಲಿ.


ಬಡಜನರಿಗೆ, ಶೋಷಿತರಿಗೆ ಸಹಾಯ ಮಾಡುತ್ತಿರುವ ಸಾಕಷ್ಟು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವೀಧರರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬರು ಬಡ ಹಾಗೂ ಬುಡಕಟ್ಟು ಜನರಿಗೆ ಸಹಾಯ ಮಾಡೋದು ಮಾತ್ರವಲ್ಲ, ಅವರ ನಡುವೆ ಅವರಂತೆ ಬದುಕಲು ಆರಂಭಿಸುವ ಮೂಲಕ ನೆಮ್ಮದಿಯ ಜೀವನವನ್ನು ಕಂಡಿದ್ದಾರೆ. 


ಐಐಟಿ ದೆಹಲಿಯ ಪದವೀಧರರಾಗಿರುವ ಪ್ರೊಫೆಸರ್‌ ಅಲೋಕ್‌ ಸಾಗರ್‌, 1982ರಲ್ಲಿ ಕೈತುಂಬಾ ಸಂಬಳ ಬರುವ ತಮ್ಮ ಕೆಲಸವನ್ನು ತೊರೆಯುವ ದೊಡ್ಡ ನಿರ್ಧಾರ ಮಾಡಿದ್ದ ಅಲೋಕ್‌ ಸಾಗರ್‌, ತಮ್ಮ ಇಡೀ ಜೀವನವನ್ನುಬುಡಕಟ್ಟು ಜನರ ಅಭ್ಯುದಯಕ್ಕಾಗಿ, ಮಹಿಳೆಯರ ಉನ್ನತಿಗಾಗಿ ಬದುಕುವ ನಿರ್ಧಾರ ಮಾಡಿದ್ದರು. ಹಾಗಂತ ಇವರು ದೂರದಲ್ಲಿ ನಿಂತು ಇವರಿಗೆ ಬೆಂಬಲ ನೀಡಿರಲಿಲ್ಲ. ಬುಡುಕಟ್ಟು ಜನರೊಂದಿಗೆ ಬೆರೆತುಕೊಂಡು ಅವರ ಭಾಷೆಗಳನ್ನು ಕಲಿತು ಅವರಲ್ಲೇ ಒಂದಾಗಿ ಬದುಕಲು ಆರಂಭಿಸಿದ್ದಾರೆ. 


 ಐಐಟಿ ದೆಹಲಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದ ಅಲೋಕ್‌ ಸಾಗರ್‌, ಅಮೆರಿಕದ ಟೆಕ್ಸಾಸ್‌ನ ಹೌಸ್ಟನ್‌ ವಿವಿಯಿಂದ ಪಿಎಚ್‌ಡಿ ಪದವಿಯನ್ನೂ ಪಡೆದಿದ್ದರು. ಅದಲ್ಲದೆ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರ ಗುರುಗಳೂ ಕೂಡ ಹೌದು.


ಇಷ್ಟೆಲ್ಲಾ ಪದವಿ, ಗೌರವಗಳಿದ್ದರೂ ಅಲೋಕ್‌ ಸಾಗರ್‌ ಅವರಿಗೆ ಸಮಾಜಕ್ಕಾಗಿ ತಾವೇನೂ ಮಾಡುತ್ತಿಲ್ಲ ಎಂದು ಅನಿಸಿತಂತೆ. ಬುಡಕಟ್ಟು ಜನರ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಕೈತುಂಬಾ ಸಂಬಳ ಬರುತ್ತಿದ್ದ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿ ಮಧ್ಯಪ್ರದೇಶದ ಕುಗ್ರಾಮಕ್ಕೆ ತೆರಳಿ ಬುಡಕಟ್ಟು ಜನರೊಂದಿಗೆ ಬದುಕುತ್ತಿದ್ದಾರೆ.


ಕಳೆದ 26  ವರ್ಷಗಳಿಂದ ಪ್ರೊಫೆಸರ್‌ ಅಲೋಕ್‌ ಸಾಗರ್‌, ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯ ಕೊಚಾಮುನಲ್ಲಿ ಬದುಕುತ್ತಿದ್ದಾರೆ. ಅವರಿಗೆ ಈಗ 62 ವರ್ಷ. ಅವರು ಇರುವ ಪ್ರದೇಶಕ್ಕೆ ಕನಿಷ್ಠ ಮೂಲಸೌಕರ್ಯಗಳಾದ ವಿದ್ಯುತ್‌ ಹಾಗೂ ರಸ್ತೆಗಳೂ ಇಲ್ಲ. ಹಾಗಿದ್ದರೂ ಇಲ್ಲಿ ಬುಡಕಟ್ಟು ಜನಾಂಗದ 750 ಮಂದಿಯ  ಜೊತೆ ಬದುಕು ಸಾಗಿಸುತ್ತಿದ್ದಾರೆ. 


ಅಲೋಕ್‌ ಸಾಗರ್‌ ಇವರೊಂದಿಗೆ ಬದುಕುವ ಸಲುವಾಗಿ ಅವರ ಮಾತುಗಳನ್ನು ಕಲಿತಿದ್ದಲ್ಲದೆ, ಅವರ ಜೀವನಕ್ರಮವನ್ನೂ ಅಪ್ಪಿಕೊಂಡರು. ಅಸಾಧಾರಣ ಜ್ಞಾನದ ವ್ಯಕ್ತಿಯಾಗಿರುವ ಅಲೋಕ್‌ ಸಾಗರ್‌ ಒಂದೆರಡಲ್ಲ 78 ವಿವಿಧ ಭಾಷೆಗಳನ್ನು ಸ್ಪಷ್ಟವಾಗಿ ಮಾತನಾಡಬಲ್ಲರು. ಆದರೆ, ಅವರು ಹೇಳುವ ಪ್ರಕಾರ, ಪ್ರಕೃತಿಯೊಂದಿಗೆ ಆದಿವಾಸಿಗಳು ನೈಜವಾದ ಸಂಪರ್ಕವನ್ನು ಹೊಂದಿದ್ದಾರೆ. ಪ್ರಕೃತಿಯನ್ನು ಗೌರವದಿಂದ ನೋಡುವ ಕಲೆಯನ್ನು ನಾವು ಅರಿತುಕೊಳ್ಳಬೇಕಾಗಿದೆ ಎನ್ನುತ್ತಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.